ಅರಣ್ಯ ನಾಶ, ಮನುಕುಲಕ್ಕೆ ಅಪಾಯ: ಸಿದ್ದಪ್ಪ ಬಾರ್ಕಿ

| Published : Jun 07 2024, 12:32 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಬಾಗಲಕೋಟೆ: ಅರಣ್ಯ ನಾಶದಿಂದ ಪರಿಸರ ಸಮತೋಲನ ಕಳೆದು ಉಷ್ಣತೆ ಪ್ರಮಾಣ ಹೆಚ್ಚುತ್ತಿದೆ. ಇದರಿಂದ ಮನುಕುಲಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಬಾಗಲಕೋಟೆಯ ರೈಲ್ವೆ ಪೊಲೀಸ್ ಠಾಣಾ ಅಧೀಕ್ಷ ಸಿದ್ದಪ್ಪ ಬಾರ್ಕಿ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ:

ಅರಣ್ಯ ನಾಶದಿಂದ ಪರಿಸರ ಸಮತೋಲನ ಕಳೆದು ಉಷ್ಣತೆ ಪ್ರಮಾಣ ಹೆಚ್ಚುತ್ತಿದೆ. ಇದರಿಂದ ಮನುಕುಲಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಬಾಗಲಕೋಟೆಯ ರೈಲ್ವೆ ಪೊಲೀಸ್ ಠಾಣಾ ಅಧೀಕ್ಷ ಸಿದ್ದಪ್ಪ ಬಾರ್ಕಿ ಹೇಳಿದರು.

ಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯ, ಬಾಗಲಕೋಟೆಯ ರಾಷ್ಟ್ರೀಯ ಸೇವಾ ಯೋಜನೆ ಮತ್ತು ಸಂಸ್ಕೃತ ಚಟುವಟಿಕೆಗಳ ವಿಭಾಗದಿಂದ ವಿಶ್ವ ಪರಿಸರ ದಿನ ಆಚರಿಸಲಾಯಿತು. ಪರಿಸರದ ಸಮೃದ್ಧಿ ಆರೋಗ್ಯಕರ ಜೀವನ. ಪರಿಸರ ಜೀವಿಯ ಜೀವನದ ಅಸ್ತಿತ್ವಕ್ಕೆ ಕಾರಣವಾಗಿದ್ದು, ಸ್ವಚ್ಛ ಪರಿಸರ ನಿರ್ಮಿಸುವ ಅಗತ್ಯವಿದೆ ಎಂದರು.

ಪ್ರಾಚಾರ್ಯ ಡಾ.ಜಗನ್ನಾಥ ಚವ್ಹಾಣ, ಅಧ್ಯಕ್ಷತೆ ವಹಿಸಿ ಮಾತನಾಡಿ, ಪರಿಸರ ಕಾಳಜಿಯಿಂದ ಮಹಾವಿದ್ಯಾಲಯದ ತುಂಬೆಲ್ಲ ಗಿಡಗಳನ್ನು ನಡೆಸಲಾಗಿದೆ ಎಂದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ.ಎಂ.ನಂಜುಂಡಸ್ವಾಮಿ ಸ್ವಾಗತಿಸಿ ಪರಿಚಯಿಸಿದರು.ಐಕ್ಯುಎಸಿ ಸಂಯೋಜಕಿ ಗಿರಿಜಾ ನಾವದಗಿ, ಸಂಸ್ಕೃತ ಚಟುವಟಿಗಳ ಕಾರ್ಯಧ್ಯಕ್ಷ ರಾಜು ಮೇಲಿನಮನಿ, ಎನ್ಎನ್ಎಸ್ ಘಟಕದ ಅಧಿಕಾರಿಗಳಾದ ಪ್ರಿಯಾಂಕ ಮಠದ, ಡಾ.ಎಂ.ಎಂ.ಹುದ್ದಾರ ವೇದಿಕೆ ಉಪಸ್ಥಿತರಿದ್ದರು.|ಸೀತಲ್ ಬಾರ್ಶಿ ನಿರೂಪಿಸಿದರು. ಎಲ್ಲ ವಿಭಾಗದ ಪ್ರಾಧ್ಯಾಪಕರು, ಎನ್ಎಸ್ಎಸ್ ಸ್ವಯಂಸೇವಕರು ಸಕ್ರಿಯವಾಗಿ ಭಾಗವಹಿಸಿದ್ದರು. ರಾಷ್ಟ್ರೀಯ ಸೇವಾ ಯೋಜನಾ ಘಟಕದಿಂದ ಸಸಿಗಳನ್ನು ನೆಡಲಾಯಿತು.