ಮನೆಯಂಗಳದ ಕಾರ್ಯಕ್ರಮದಲ್ಲಿ ರಾಮಕೃಷ್ಣ ಗುಂದಿ ಕಳವಳ
ಕನ್ನಡಪ್ರಭ ವಾರ್ತೆ ಅಂಕೋಲಾಇಂದಿನ ಸಮಾಜದಲ್ಲಿ ಮಾನವೀಯ ಮೌಲ್ಯಗಳ ಅಧಃಪತನ ಕಾಣುತ್ತಿದ್ದೇವೆ. ಸಾಹಿತಿಗಳು ನಮ್ಮ ಕೃತಿಗಳ ಮೂಲಕ ಸಮಾಜದಲ್ಲಿ ಮಾನವೀಯ ಮೌಲ್ಯಗಳ ಮರುಪೂರಣ ಕಾರ್ಯ ಮಾಡಬೇಕಿದೆ. ಕವಿಯಿತ್ರಿ ಹೊನ್ನಮ್ಮ ನಾಯಕ ತಮ್ಮ ಕೃತಿಗಳ ಮೂಲಕ ಸಮಾಜದಲ್ಲಿ ಸದಾಶಯಗಳನ್ನು ಬಿತ್ತುವ ಕಾರ್ಯ ಮಾಡುತ್ತಿರುವುದು ಅರ್ಥಪೂರ್ಣ ಎಂದು ಡಾ. ದಿನಕರ ದೇಸಾಯಿ ಸ್ಮಾರಕ ಪ್ರತಿಷ್ಠಾನದ ಪ್ರತಿಷ್ಠಾನದ ಅಧ್ಯಕ್ಷ ರಾಮಕೃಷ್ಣ ಗುಂದಿ ಹೇಳಿದರು.ಡಾ. ದಿನಕರ ದೇಸಾಯಿ ಸ್ಮಾರಕ ಪ್ರತಿಷ್ಠಾನದ ಮನೆಯಂಗಳದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.ಪ್ರಾರಂಭದಲ್ಲಿ ಕವಿಯಿತ್ರಿ ಹೊನ್ನಮ್ಮ ತನ್ನ ಸಾಹಿತ್ಯಕ್ಕೆ ಪ್ರೇರಣೆ ಕುರಿತು ಮಾತನಾಡಿದರು. ತನ್ನ ಗುರುವರ್ಯ ಸು.ರಂ. ಎಕ್ಕುಂಡಿ, ಆನಂದಾಶ್ರಮ ಶಾಲೆಯ ಸಾಹಿತ್ಯಿಕ ವಾತಾವರಣ, ದಿನಕರ ದೇಸಾಯಿ ಎನ್.ಆರ್. ನಾಯಕ, ವಿಷ್ಣು ನಾಯಕರ ಸಾಹಿತ್ಯದ ಪರಿಣಾಮ ತಾನು ಸಾಹಿತ್ಯ ಕ್ಷೇತ್ರದಲ್ಲಿ ಅಲ್ಪಸ್ವಲ್ಪ ಕೃಷಿ ಮಾಡುವಂತಾಯಿತೆಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಹಿರಿಯ ಸಾಹಿತಿ ಶಾಂತಾರಾಮ ಹಿಚಕಡ ಕಾವ್ಯ ಬಿಟ್ಟು ಬದುಕಿಲ್ಲ, ಮಾನವ ಮನುಷ್ಯನಾಗಲು ಸಾಹಿತ್ಯದ ಸ್ಪರ್ಶ ಅವಶ್ಯವೆಂದರು.ಶಿಕ್ಷಕಿ ವೀಣಾ ಜೊಶಿ ಪ್ರಾರ್ಥಿಸಿದರು. ಕಾರ್ಯದರ್ಶಿ ಜಗದೀಶ ನಾಯಕ ಹೊಸ್ಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಜೆ. ಪ್ರೇಮಾನಂದ, ಪುಷ್ಪಾ ನಾಯ್ಕ, ವಿಠ್ಠಲ ಗಾಂವಕಾರ, ಜಿ.ಆರ್. ತಾಂಡೇಲ, ಶ್ರೀಧರ ನಾಯ್ಕ, ಅಮಿತಾ ನಾಯ್ಕ, ರಾಮಮೂರ್ತಿ ನಾಯಕ, ರವೀಂದ್ರ ಕೇಣಿ, ಕೃಷ್ಣ ಹಿಚಕಡ, ದೇವಿದಾಸ ಸುವರ್ಣ ಕವಿತೆ ವಾಚಿಸಿದರು. ಶಿಕ್ಷಕ ಜಯಶೀಲ ಆಗೇರ ವಂದಿಸಿದರು. ಲೇಖಕ ಮಹಾಂತೇಶ ರೇವಡಿ ಕಾರ್ಯಕ್ರಮ ನಿರೂಪಿಸಿದರು. ಹೊನ್ನಮ್ಮ ನಾಯಕರ ಮನೆಯಂಗಳ ಕಾರ್ಯಕ್ರಮದಲ್ಲಿ ಹಿರಿಕಿರಿಯ ಸಾಹಿತಿಗಳು ಉಪಸ್ಥಿತರಿದ್ದು, ಹೊನ್ನಮ್ಮ ನಾಯಕರ ಕೃತಿಗಳ ಅವಲೋಕನ, ಕವನವಾಚನ ಕಾರ್ಯಕ್ರಮ ನಡೆಯಿತು.ಸಮಾಜದಲ್ಲಿ ಮಾನವೀಯ ಮೌಲ್ಯಗಳ ಅಧಃಪತನ: ರಾಮಕೃಷ್ಣ ಗುಂದಿ
ಇಂದಿನ ಸಮಾಜದಲ್ಲಿ ಮಾನವೀಯ ಮೌಲ್ಯಗಳ ಅಧಃಪತನ ಕಾಣುತ್ತಿದ್ದೇವೆ.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.