ರೈತರಿಗೆ ರಾಗಿ ಹಣ ನೀಡದೇ ವಿಳಂಬ

| Published : Oct 01 2025, 01:00 AM IST

ಸಾರಾಂಶ

ಹಳ್ಳಿಮೈಸೂರಿನಲ್ಲಿ ಮಂಗಳವಾರ ಮಧ್ಯಾಹ್ನ ಕರವೇ ಹೋಬಳಿ ಯುವ ಘಟಕದ ಅಧ್ಯಕ್ಷರ ದಯಾನಂದ, ನೇತೃತ್ವದಲ್ಲಿ ತಾಲೂಕು ಹಳ್ಳಿ ಮೈಸೂರು ರಾಗಿ ಖರೀದಿ ಕೇಂದ್ರಕ್ಕೆ ರಾಗಿ ಮಾರಾಟ ಮಾಡಿರುವ ರೈತರ ಖಾತೆಗೆ ತಕ್ಷಣವೇ ಸರ್ಕಾರದಿಂದ ಹಣ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು. ತುರ್ತಾಗಿ ರೈತರ ಖಾತೆಗೆ ಹಣ ಜಮೆ ಮಾಡುವಂತೆ ಒತ್ತಾಯಿಸಿ, ಪ್ರತಿಭಟನೆ ನಡೆಸಿ ಉಪತಹಸೀಲ್ದಾರ್‌ಗೆ ಮನವಿ ಪತ್ರ ನೀಡಿದರು. ಹೋಬಳಿ ವ್ಯಾಪ್ತಿಯ ರೈತರ ಜತೆಗೆ ಹಳ್ಳಿ ಮೈಸೂರು ಪೊಲೀಸ್ ಠಾಣೆಯಿಂದ ನಾಡಕಚೇರಿಯವರೆಗೆ ಪ್ರತಿಭಟನೆ ನಡೆಸಿ, ಹಳ್ಳಿ ಮೈಸೂರು ಹೋಬಳಿ ಉಪತಹಸೀಲ್ದಾರ್ ಶಿವಕುಮಾರ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ ತಾಲೂಕಿನ ಹಳ್ಳಿಮೈಸೂರು ಗ್ರಾಮದಲ್ಲಿ ಹೋಬಳಿಯ ಸುಮಾರು ೬೦೦ ರೈತರು ನಾಲ್ಕೈದು ತಿಂಗಳ ಹಿಂದೆ ರಾಗಿ ಖರೀದಿ ಕೇಂದ್ರಕ್ಕೆ ನೀಡಿದ್ದ ರಾಗಿಯ ಒಟ್ಟು 2,57,40,000 ರು. ಹಣವನ್ನು ರೈತರ ಖಾತೆಗೆ ಜಮೆ ಮಾಡದ ಹಿನ್ನೆಲೆಯಲ್ಲಿ ಹಳ್ಳಿಮೈಸೂರು ಹೋಬಳಿ ಕನ್ನಡ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

ಹಳ್ಳಿಮೈಸೂರಿನಲ್ಲಿ ಮಂಗಳವಾರ ಮಧ್ಯಾಹ್ನ ಕರವೇ ಹೋಬಳಿ ಯುವ ಘಟಕದ ಅಧ್ಯಕ್ಷರ ದಯಾನಂದ, ನೇತೃತ್ವದಲ್ಲಿ ತಾಲೂಕು ಹಳ್ಳಿ ಮೈಸೂರು ರಾಗಿ ಖರೀದಿ ಕೇಂದ್ರಕ್ಕೆ ರಾಗಿ ಮಾರಾಟ ಮಾಡಿರುವ ರೈತರ ಖಾತೆಗೆ ತಕ್ಷಣವೇ ಸರ್ಕಾರದಿಂದ ಹಣ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು. ತುರ್ತಾಗಿ ರೈತರ ಖಾತೆಗೆ ಹಣ ಜಮೆ ಮಾಡುವಂತೆ ಒತ್ತಾಯಿಸಿ, ಪ್ರತಿಭಟನೆ ನಡೆಸಿ ಉಪತಹಸೀಲ್ದಾರ್‌ಗೆ ಮನವಿ ಪತ್ರ ನೀಡಿದರು. ಹೋಬಳಿ ವ್ಯಾಪ್ತಿಯ ರೈತರ ಜತೆಗೆ ಹಳ್ಳಿ ಮೈಸೂರು ಪೊಲೀಸ್ ಠಾಣೆಯಿಂದ ನಾಡಕಚೇರಿಯವರೆಗೆ ಪ್ರತಿಭಟನೆ ನಡೆಸಿ, ಹಳ್ಳಿ ಮೈಸೂರು ಹೋಬಳಿ ಉಪತಹಸೀಲ್ದಾರ್ ಶಿವಕುಮಾರ ಅವರಿಗೆ ಮನವಿ ಪತ್ರ ಸಲ್ಲಿಸಿದರು. ರಾಗಿ ಖರೀದಿ ಕೇಂದ್ರದ ಚನ್ನರಾಯಪಟ್ಟಣ ಬ್ರಾಂಚ್ ಮ್ಯಾನೇಜರ್ ಶಶಿಕಾಂತ್ ಹಾಗೂ ಹಳ್ಳಿಮೈಸೂರು ಹೋಬಳಿ ಉಪತಹಸೀಲ್ದಾರ್ ಶಿವಕುಮಾರ್ ಅವರು ೧೫ ದಿನದ ಒಳಗಡೆ ಬಾಕಿ ಇರುವ ಹಣವನ್ನು ರೈತರ ಖಾತೆಗೆ ಜಮಾ ಮಾಡಲಾಗುವುದು ಎಂದು ಆಶ್ವಾಸನೆ ನೀಡಿದ್ದರ ಮೇರೆಗೆ ಪ್ರತಿಭಟನಾಕಾರರು ಪ್ರತಿಭಟನೆ ನಿಲ್ಲಿಸಿದರು.

ಪ್ರತಿಭಟನೆಯಲ್ಲಿ ತಾಲೂಕು ಕರವೇ ಅಧ್ಯಕ್ಷ ಓಹಿಲೇಶ್, ತಾಲೂಕು ಯುವ ಘಟಕ ಅಧ್ಯಕ್ಷ ನವೀನ್ ಕುಮಾರ್, ಹಳ್ಳಿಮೈಸೂರು ಹೋಬಳಿ ಅಧ್ಯಕ್ಷ ಮಲ್ಲಿಕಾರ್ಜುನ್, ಯಶೋಧರ, ವಿನಯ್, ಭರತ್, ಕುಮಾರ್ ಹಾಗೂ ಸುಮಾರು ೧೦೦ಕ್ಕೂ ಹೆಚ್ಚು ರೈತರು ಭಾಗವಹಿಸಿದರು.