ಮೊಗಳ್ಳಿ ಪುಸ್ತಕಗಳು ಸಮಾಜಕ್ಕೆ ತಲುಪಿಸಿ: ಶ್ರೀಗಳು

| Published : Oct 26 2025, 02:00 AM IST

ಮೊಗಳ್ಳಿ ಪುಸ್ತಕಗಳು ಸಮಾಜಕ್ಕೆ ತಲುಪಿಸಿ: ಶ್ರೀಗಳು
Share this Article
  • FB
  • TW
  • Linkdin
  • Email

ಸಾರಾಂಶ

ಚನ್ನಪಟ್ಟಣ: ಅಕ್ಷರ ಪದಗಳಲ್ಲಿ ಸಾಹಿತ್ಯ ಹಾಗೂ ಬರವಣಿಗೆಗಳಲ್ಲಿ ತಾಂಡವ ಆಡುತ್ತಿರುವ ಅಸಮಾನತೆಯನ್ನು ಹೊರದಬ್ಬಬೇಕಾದರೆ ನಮ್ಮ ಮಕ್ಕಳಲ್ಲಿ ಅಕ್ಷರ ಅಭ್ಯಾಸ ಮಾಡಿಸುವ ಜೊತೆಗೆ ಮೊಗಳ್ಳಿ ಗಣೇಶ್ ಅವರ ಪುಸ್ತಕಗಳನ್ನು ಸಮಾಜಕ್ಕೆ ತಲುಪಿಸುವ ಕೆಲಸ ಆಗಬೇಕು ಎಂದು ಉರಿಲಿಂಗಪೆದ್ದಿ ಮಠದ ಪೀಠಾಧ್ಯಕ್ಷ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ಕರೆ ನೀಡಿದರು.

ಚನ್ನಪಟ್ಟಣ: ಅಕ್ಷರ ಪದಗಳಲ್ಲಿ ಸಾಹಿತ್ಯ ಹಾಗೂ ಬರವಣಿಗೆಗಳಲ್ಲಿ ತಾಂಡವ ಆಡುತ್ತಿರುವ ಅಸಮಾನತೆಯನ್ನು ಹೊರದಬ್ಬಬೇಕಾದರೆ ನಮ್ಮ ಮಕ್ಕಳಲ್ಲಿ ಅಕ್ಷರ ಅಭ್ಯಾಸ ಮಾಡಿಸುವ ಜೊತೆಗೆ ಮೊಗಳ್ಳಿ ಗಣೇಶ್ ಅವರ ಪುಸ್ತಕಗಳನ್ನು ಸಮಾಜಕ್ಕೆ ತಲುಪಿಸುವ ಕೆಲಸ ಆಗಬೇಕು ಎಂದು ಉರಿಲಿಂಗಪೆದ್ದಿ ಮಠದ ಪೀಠಾಧ್ಯಕ್ಷ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ಕರೆ ನೀಡಿದರು.

ನಗರದ ಅನುಗ್ರಹ ಕನ್ವೆನ್ಷನ್ ಹಾಲ್ ನಲ್ಲಿ ಮೊಗಳ್ಳಿ ಗಣೇಶ್ ಅಕ್ಷರ ಬಳಗ ಆಯೋಜಿಸಿದ್ದ ನುಡಿ ನಮನ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಮೊಗಳ್ಳಿ ಗಣೇಶ್ ಅವರ ಅಕ್ಷರ, ಮನುವಾದಿಗಳ ಷಡ್ಯಂತ್ರ ಹಾಗೂ ಹೊಡೆತದಿಂದ ಕಣ್ಮರೆಯಾಗಿ ಅಕ್ಷರಗಳಿಗೆ ದಕ್ಕಬೇಕಾದ ಗೌರವ ಸಾಹಿತ್ಯಕ್ಕೆ ದಕ್ಕಿಲ್ಲ ಎಂದರು.

ಪ್ರತಿ ದಿನ ಅಕ್ಷರಕ್ಕಾಗಿ ಮನಸ್ಸು ಹೃದಯ ತವಕಿಸುತ್ತಿದ್ದ ಮೊಗಳ್ಳಿ ಗಣೇಶ್ ಅವರು ಅನಾರೋಗ್ಯಕ್ಕೆ ಒಳಗಾದಾಗ ಖರ್ಚು ವೆಚ್ಚಗಳಿಗೆ ಔಷಧಗಳನ್ನು ಪಡೆಯಲು ಸರ್ಕಾರ 25 ಲಕ್ಷ ರು. ಭರಿಸುವುದಾಗಿ ಘೋಷಣೆ ಮಾಡಿತ್ತು. ಆದರೆ, ಅದು ತಲುಪಲಿಲ್ಲ. ಸರ್ಕಾರ ಕೂಡಲೇ ಇದರ ಬಗ್ಗೆ ಗಮನ ಹರಿಸಿ ಅವರಿಗೆ ತಲುಪಬೇಕಾದ ಖರ್ಚು ವೆಚ್ಚದ ಹಣವನ್ನು ಅವರ ಕುಟುಂಬಕ್ಕೆ ನೀಡಬೇಕು ಎಂದು ಶ್ರೀಗಳು ಒತ್ತಾಯ ಮಾಡಿದರು.

ಅಧ್ಯಕ್ಷತೆ ವಹಿಸಿದ್ದ ಹಿರಿಯ ಜಾನಪದ ವಿದ್ವಾಂಸ ಡಾ. ಕಾಳೇಗೌಡ ನಾಗವಾರ , ಬುದ್ದ. ಬಸವ. ಅಂಬೇಡ್ಕರ್ ಅವರ ಅನುಯಾಯಿ ಆಗಿದ್ದ ಗಣೇಶ್ ಅವರು ಸಮಾಜದಲ್ಲಿ ಕಾಣುತ್ತಿರುವ ವರ್ಣ ವ್ಯವಸ್ಥೆ. ಅಸಮಾನತೆ, ಜಾತಿ ಎಂಬ ಪಿಡುಗುಗಳನ್ನು ಹೊರದಬ್ಬಲು ತನ್ನ ಅಕ್ಷರ ಎಂಬ ಪದಗಳ ಬರವಣಿಗೆಯಿಂದ ಪ್ರಯತ್ನಿಸಿದ್ದರು. ಅವರಿಂದ ಹೊರಹಮ್ಮಿರುವ ಕಾದಂಬರಿ,ಕಥೆ , ಬರಹಗಳ ಪುಸ್ತಕಗಳನ್ನು ಓದುವಾಗಲೇ ನಮಗೆ ಅವರಲ್ಲಿದ್ದ ನೋವು ನಲಿವುಗಳು ಹಾಗೂ ತಾಂಡವವಾಡುತ್ತಿರುವ ಅಸಮಾನತೆಗಳ ಬಗ್ಗೆ ಅರಿವಾಗುತ್ತದೆ ಎಂದು ಹೇಳಿದರು.

ಕಾಲಚಕ್ರ ಉರುಳಿದಂತೆ ಅಂಬೇಡ್ಕರ್ ಅವರು ಹೇಳಿರುವ ದೇವಸ್ಥಾನಗಳ ನಿರ್ಮಾಣದ ಬದಲಾಗಿ ಗ್ರಂಥಾಲಯಗಳನ್ನು ನಿರ್ಮಾಣ ಮಾಡಬೇಕು. ಯಾವುದೇ ಆಸೆ ದುರಾಸೆಗಳಿಗೆ ಒಳಗಾಗದೆ ಬುದ್ದನ ಮಾರ್ಗದರ್ಶನಗಳಲ್ಲಿ ಬಂದಂತಹ ಅಂಬೇಡ್ಕರ್ ಅವರ ಅನುಯಾಯಿ ಆಗಿದ್ದ ಗಣೇಶ್ ತಮ್ಮ ಅಕ್ಷರಗಳ ಬರವಣಿಗೆಯಿಂದ ಸಮಾಜದ ಕಣ್ಣು ತೆರೆಸಲು ಅಕ್ಷರ ಪದಗಳನ್ನು ಬಳಸಿದ್ದಾರೆ. ಆದರೆ, ಅವರ ಅಗಲಿಕೆಯಿಂದ ಅಕ್ಷರಗಳಿಗೆ ತುಂಬಲಾರದ ನಷ್ಟವಾಗಿದೆ ಎಂದು ದುಃಖ ವ್ಯಕ್ತಪಡಿಸಿದರು.

ಸಾಹಿತಿ ಬಂಜಗೆರೆ ಜಯಪ್ರಕಾಶ್, ಫಾದರ್ ರೆವೆರೆಂಡ್ ಅಬ್ರಾಹಾಮ್, ವಿಶ್ರಾಂತ ಪ್ರಾಂಶುಪಾಲ ಪ್ರೊ.ಕೆ.ಎಂ. ಮಾಯಿಗೇಗೌಡ, ಲೇಖಕ ಚಿಂತಕ ಪ್ರೊ. ಎಂ.ಎಸ್.ಶೇಖರ್, ಧನಂಜಯ್ಯ ಎಲಿಯೂರು, ರೈತ ಸಂಘದ ಅನುಸೂಯಮ್ಮ ಅವರು ಮೊಗಳ್ಳಿ ಗಣೇಶ್ ಕುರಿತು ಮಾತನಾಡಿದರು.

ಬ್ಯಾಡರಹಳ್ಳಿ ಶಿವಕುಮಾರ್ ಸಂವಿಧಾನ ಪೀಠಿಕೆ ಬೋಧಿಸಿದರು. ಉಪನ್ಯಾಸಕ ಮಹೇಶ್ ಮೌರ್ಯ , ಬಿ.ಪಿ.ಸುರೇಶ್ , ಅಕ್ಷರ ಬಳಗದ ಪ್ರದೀಪ್ ಅಪ್ಪಗೆರೆ, ಜೀವಿಕ ಪಿ.ಜೆ.ಗೋವಿಂದರಾಜು, ಅಕ್ಕೂರು ಶೇಖರ್, ಕಾಂತರಾಜು ಕೂಡ್ಲೂರು, ನೀಲಸಂದ್ರ ಸಿದ್ದರಾಮು, ಹನುಮಂತಯ್ಯ, ವಿಜಯ ರಾಂಪುರ, ಸಿದ್ದರಾಮಯ್ಯ ಮತ್ತಿತರರು ಉಪಸ್ಥಿತರಿದ್ದರು.

---------------------------------------

25ಕೆಆರ್ ಎಂಎನ್ 6.ಜೆಪಿಜಿ

ರಾಮನಗರದ ಅನುಗ್ರಹ ಕನ್ವೆನ್ಷನ್ ಹಾಲ್ ನಲ್ಲಿ ಮೊಗಳ್ಳಿ ಗಣೇಶ್ ಅಕ್ಷರ ಬಳಗ ‍‍‍ವತಿಯಿಂದ ನುಡಿ ನಮನ ಕಾರ್ಯಕ್ರಮ ನಡೆಯಿತು.

----------------------------------------