ಸಾರಾಂಶ
ಕೊಪ್ಪಳ: ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜ ತೆರವುಗೊಳಿಸಿ ಹನುಮ ಭಕ್ತರನ್ನು ಅವಮಾನಿಸಿರುವ ಜಿಲ್ಲಾಡಳಿತ, ಸರ್ಕಾರದ ಹನುಮಭಕ್ತರ ವಿರೋಧಿ ನೀತಿ ಖಂಡಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಕಲ್ಯಾಣ ಕರ್ನಾಟಕ ಪ್ರಗತಿ ಪಕ್ಷದ ಮುಖಂಡರು ಮನವಿ ಸಲ್ಲಿಸಿದರು.ರಾಜ್ಯ ಉಪಾಧ್ಯಕ್ಷ ಮನೋಹರಗೌಡ ಹೇರೂರು ಮಾತನಾಡಿ, ಹನುಮ ಹುಟ್ಟಿದ ನಾಡಿನಲ್ಲಿ ಹನುಮಭಕ್ತರ ಮತ್ತು ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತೆ ಸರ್ಕಾರ ನಡೆದುಕೊಂಡಿದೆ. ಇಂತಹ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿರುವ ಸರ್ಕಾರದ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ.ಸಮಸ್ಥ ಗ್ರಾಮಸ್ಥರು ಚಂದಾ ಹಾಕಿ ಸಂಗ್ರಹಿಸಿ ನಿರ್ಮಿಸಿರುವ ಧ್ವಜ ಸ್ತಂಭ, ಅದನ್ನು ಪುನಃ ಸ್ಥಾಪಿಸಿ ಊರಿನ ಸ್ವಾಭಿಮಾನದ ಸಂಕೇತವಾದ ಹನುಮ ಧ್ವಜವನ್ನು ಶಾಶ್ವತವಾಗಿ ಹಾರಾಡುವಂತೆ ನೋಡಿಕೊಳ್ಳಬೇಕು. ಒಂದು ವೇಳೆ ಜಿಲ್ಲಾಡಳಿತ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳದಿದ್ದಲ್ಲಿ ಉಗ್ರ ಹೋರಾಟ ಮಾಡಲಾಗುವುದೆಂದು ಎಚ್ಚರಿಸಿದರು.ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಸಂಗಮೇಶ್ ಬಾದ ವಾಡಗಿ, ಕರಿಯಣ್ಣ ಸಂಗಟಿ, ರಾಜೇಶ್ ರೆಡ್ಡಿ, ಮಾಲಬಾಯಿ ನಾಯಕ್, ಮಂಜುನಾಥ್ ಗೊಂದಿ, ಪ್ರವೀಣ ಮಂಗಳಾಪುರ, ರಾಮಣ್ಣ ನಾಯ್ಕ್, ವೆಂಕಟೇಶ್ ಇಳಿಗೇರ್, ಪಂಪಾಪತಿ ಹಿರೇಮಠ ಕಿನ್ನಾಳ, ಕೆ.ರಾಘಣ್ಣ ಕಿನ್ನಾಳ, ಮಂಜುನಾಥ್ ಕಲಾಲ್, ಬಸುಕುಮಾರ್ ಪಟ್ಟಣಶೆಟ್ಟಿ, ಶರಣು ಓಜನಹಳ್ಳಿ, ಮಹಾಂತಮ್ಮ, ಈರಮ್ಮ, ವಿಜಯಲಕ್ಷ್ಮಿ, ಲತಾಶ್ರಿ, ಜ್ಯೋತಿ, ಮಂಜು ಜನಾದ್ರಿ, ರಮೇಶ್ ಉಪಸ್ಥಿತರಿದ್ದರು.