ಪತ್ರಕರ್ತರಿಗೆ ಬೆದರಿಕೆ ಹಾಕಿರುವ ವಿರುದ್ಧ ಕ್ರಮಕ್ಕೆ ಆಗ್ರಹ

| Published : May 29 2024, 12:54 AM IST

ಪತ್ರಕರ್ತರಿಗೆ ಬೆದರಿಕೆ ಹಾಕಿರುವ ವಿರುದ್ಧ ಕ್ರಮಕ್ಕೆ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಶಾಸಕ ರಾಜು ಕಾಗೆ ಎದುರೇ ಮಾಧ್ಯಮದ ಪ್ರತಿನಿಧಿಗಳನ್ನು ಮನೆ ಹೊಕ್ಕು ಹೊಡೆಯುತ್ತೇನೆಂದಿರುವ ಬೆದರಿಕೆ ಹಾಕಿರುವ ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಕಠಿಣ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ಕಾಗವಾಡ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು ಕಾಗವಾಡ ತಹಸೀಲ್ದಾರ್‌ ಎಸ್.ಬಿ.ಇಂಗಳೆ ಮತ್ತು ಪಿಎಸೈ ಎಂ.ಬಿ.ಬಿರಾದರಗೆ ಮಂಗಳವಾರ ಮನವಿ ಸಲ್ಲಿದರು.

ಕನ್ನಡಪ್ರಭ ವಾರ್ತೆ ಕಾಗವಾಡಶಾಸಕ ರಾಜು ಕಾಗೆ ಎದುರೇ ಮಾಧ್ಯಮದ ಪ್ರತಿನಿಧಿಗಳನ್ನು ಮನೆ ಹೊಕ್ಕು ಹೊಡೆಯುತ್ತೇನೆಂದಿರುವ ಬೆದರಿಕೆ ಹಾಕಿರುವ ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಕಠಿಣ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ಕಾಗವಾಡ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು ಕಾಗವಾಡ ತಹಸೀಲ್ದಾರ್‌ ಎಸ್.ಬಿ.ಇಂಗಳೆ ಮತ್ತು ಪಿಎಸೈ ಎಂ.ಬಿ.ಬಿರಾದರಗೆ ಮಂಗಳವಾರ ಮನವಿ ಸಲ್ಲಿದರು.ಈ ಸಮಯದಲ್ಲಿ ಹಿರಿಯ ಪತ್ರಕರ್ತ ಸಿದ್ದಯ್ಯ ಹಿರೇಮಠ ಮಾತನಾಡಿ, ಪರ್ತಕರ್ತರು ಕಠಿಣ ಪರಿಸ್ಥಿಯಲ್ಲಿ ತಮ್ಮ ಕರ್ತವ್ಯ ನಿರ್ವಹಸುತ್ತ ನೈಜ ಸುದ್ದಿಗಳನ್ನು ಜನರಿಗೆ ಮುಟ್ಟಿಸುವ ಕೆಲಸ ಮಾಡುತ್ತಾರೆ. ಅಂತಹ ಪರ್ತಕರ್ತರಿಗೆ ಈಗ ರಕ್ಷಣೆ ಇಲ್ಲದಂತಾಗಿದೆ. ನಿನ್ನೆ ಅಥಣಿ ತಾಲೂಕಿನ ಬೆವನೂರು ಗ್ರಾಮದ ಜಾತ್ರೆಯಲ್ಲಿ ಮೋಳೆ ಗ್ರಾಮದ ಕಾಂಗ್ರೆಸ್ ಕಾರ್ಯಕರ್ತ ಸಂತೋಷ ಚೊರಮುಲೆ ಇತನು ಶಾಸಕ ರಾಜು ಕಾಗೆ ಸಮ್ಮುಖದಲ್ಲಿಯೇ ಮಾಧ್ಯಮದವರನ್ನು ಮನೆ ಹೊಕ್ಕು ಕೈ-ಕಾಲು ಮುರಿಯುವುದಾಗಿ ಧಮ್ಕಿ ಹಾಕಿದ್ದಾನೆ. ಕೂಡಲೇ ಆತನನ್ನು ಬಂಧಿಸಿ, ಆತನ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಈ ರೀತಿ ಸ್ಥಳೀಯ ಶಾಸಕರ ಸಮ್ಮುಖದಲ್ಲಿಯೇ ಘಟನೆ ನಡೆದಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದೆ. ಮಾಧ್ಯಮದ ಪ್ರತಿನಿಧಿಗಳನ್ನು ಮನೆ ಹೊಕ್ಕು ಹೊಡೆಯುತ್ತೇನೆಂದಿರುವ ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪತ್ರಕರ್ತರ ಸಂಘ ಮನವಿ ಮಾಡಿದರು.ಈ ವೇಳೆ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಸುರೇಶ ಕಾಗಲಿ, ಉಪಾಧ್ಯಕ್ಷ ಸಚಿನ ಕಾಂಬಳೆ, ಕಾರ್ಯದರ್ಶಿ ವಿಜಯಮಹಾಂತೇಶ ಅರಿಕೇರಿ, ಜಿಲ್ಲಾ ಸಂಚಾಲಕ ಸುಕುಮಾರ ಬನ್ನೂರೆ, ಸದಸ್ಯರಾದ ಬಸವರಾಜ ತಾರದಾಳೆ, ಸಂಜಯ ಕೌಲಗಿ, ಮುರಗೇಶ ಘಸ್ತಿ, ಅಮರ ಕಾಂಬಳೆ, ರಾಜುಚೊಳಕೆ ಉಪಸ್ಥಿತರಿದ್ದರು.