ಹಾನಗಲ್ಲ: ಬಣಜಿಗ ಸಮುದಾಯಕ್ಕೆ ‘೨ಎ’ ಮೀಸಲಾತಿ ಪ್ರಮಾಣ ಪತ್ರ ನೀಡಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ಹಾನಗಲ್ಲ ತಾಲೂಕು ಘಟಕದಿಂದ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಹಾಗೂ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿಗೆ ಗುರುವಾರ ಮನವಿ ಸಲ್ಲಿಸಿದರು.
ಬಣಜಿಗ ಸಮಾಜದ ಉದಯ ವಿರೂಪಣ್ಣನವರ ಮಾತನಾಡಿ, ‘ಹೈಕೋರ್ಟ್ ಏಕ ಸದಸ್ಯ ಪೀಠವು ಬಣಜಿಗ ಸಮುದಾಯದ ಉದ್ಯೋಗ ಮೀಸಲಾತಿ ಪ್ರವರ್ಗ ‘ಡಿ’ ಹಾಗೂ ಶಿಕ್ಷಣ ಮೀಸಲಾತಿ ಪ್ರವರ್ಗ ‘ಬಿ’ ಅಡಿಯಲ್ಲಿ ವರ್ಗಿಕರಿಸಿರುವುದು ಪರಿಚ್ಛೇದದ ಉಲ್ಲಂಘನೆಯಾಗುತ್ತದೆ. ಆದ್ದರಿಂದ ಬಣಜಿಗ ಸಮುದಾಯವನ್ನು ‘೨ಎ’ ಮೀಸಲಾತಿಗೆ ಸೇರಿಸಬೇಕು ಎಂದು ಆದೇಶಿಸಿದೆ. ಬಣಜಿಗ ಸಮುದಾಯದವರು ಶೈಕ್ಷಣಿಕವಾಗಿ ಹಿಂದುಳಿದಿರುವುದರಿಂದ ಸರ್ಕಾರಿ ನೇಮಕಾತಿಗಳಿಂದ ಅವಕಾಶ ವಂಚಿತರಾಗುತ್ತಿದ್ದಾರೆ. ಕೂಡಲೇ ಬಣಜಿಗ ಸಮುದಾಯವನ್ನು ೨ಎ ವರ್ಗಕ್ಕೆ ಸೇರಿಸಬೇಕು ಎಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ ತಾಲೂಕು ಸಂಘದ ಅಧ್ಯಕ್ಷ ಕುಮಾರ ಹತ್ತಿಕಾಳ, ಸಿದ್ದಲಿಂಗಪ್ಪ ಶಂಕ್ರಿಕೊಪ್ಪ, ಶಿವಕುಮಾರ ದೇಶಮುಖ, ಶಿವಬಸಪ್ಪ ಹೊಳಲದ, ಸೋಮಣ್ಣ ದೇವಣ್ಣನವರ, ಶಂಕ್ರಣ್ಣ ಅಂಗಡಿ, ದಾನಪ್ಪ ಸಿಂಧೂರ, ಕೊಟ್ಟೂರಬಸಪ್ಪ ಬೆಲ್ಲದ, ಬಸಣ್ಣ ಕೋರಿ, ಅರುಣ ಕೋಟಗಿ, ಶಿವಕುಮಾರ ಕೋರಿಶೆಟ್ಟರ, ಮುತ್ತಪ್ಪ ದುರ್ಗದ, ಉಮೇಶ ಬೆಲ್ಲದ, ಶಿವಯೋಗಿ ಸವದತ್ತಿ, ಉಮೇಶ ಕಬ್ಬೂರ, ಈರಣ್ಣ ಹುಗ್ಗಿ, ಅರುಣ ಮೋಟಗಿ, ರಾಜಣ್ಣ ಸಿಂಧೂರ ಇತರರಿದ್ದರು.