ಸಾರಾಂಶ
, ಮೂಲಭೂತ ಸೌಕರ್ಯ ಒದಗಿಸಬೇಕು ಎಂದು ಆಗ್ರಹಿಸಿ ಕರುನಾಡು ಕಲಿಗಳ ಕ್ರೀಯಾಶೀಲ ಸಮಿತಿ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.
ಕನ್ನಡಪ್ರಭ ವಾರ್ತೆ ಹೊಸಪೇಟೆ
ನಗರದ ಕಾರಿಗನೂರು ಪ್ರದೇಶದದಲ್ಲಿ ಶವಸಂಸ್ಕಾರ ನಡೆಸಲು ಸಾರ್ವಜನಿಕ ರುದ್ರಭೂಮಿಗೆ ಜಾಗ, ಮೂಲಭೂತ ಸೌಕರ್ಯ ಒದಗಿಸಬೇಕು ಎಂದು ಆಗ್ರಹಿಸಿ ಕರುನಾಡು ಕಲಿಗಳ ಕ್ರೀಯಾಶೀಲ ಸಮಿತಿ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.ಕಾರಿಗನೂರು ಗ್ರಾಮಸ್ಥರು ಈಗಾಗಲೇ ಗುರುತಿಸಿರುವ ಸರ್ವೆ 180/2 ಭೂಮಿಯ ಸುತ್ತ ಕಾಂಪೌಂಡ್ ನಿರ್ಮಿಸಬೇಕು. ಈ ಪ್ರದೇಶದಲ್ಲಿ ತಗ್ಗುಗುಂಡಿಗಳನ್ನು ಮುಚ್ಚಿ ಸಮತಟ್ಟುಗೊಳಿಸಬೇಕು. ಕೊಳವೆಬಾವಿ ಹಾಕಿಸಿ, ಮೂಲಭೂತ ಸೌಕರ್ಯಗಳ ವ್ಯವಸ್ಥೆ ಕಲ್ಪಿಸಬೇಕು. ಜತೆಗೆ ಕೊಠಡಿಯೊಂದನ್ನು ನಿರ್ಮಾಣ ಮಾಡಿ ಸ್ಥಳದಲ್ಲಿ ಮರಣ ಪ್ರಮಾಣ ಪತ್ರ ನೋಂದಣಿ ಮತ್ತು ವಿತರಣೆಗೆ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.
ಕರುನಾಡ ಕಲಿಗಳ ಕ್ರಿಯಾಶೀಲ ಸಮಿತಿ, ಕಾರಿಗನೂರು ಕ್ಷೇಮಾಭಿವೃದ್ಧಿ ಸಂಘ, ರಾಜ್ಯ ರೈತ ಸಂಘ, ವಿಜಯನಗರ ಸಾಹಿತ್ಯ ಪರಿಷತ್ತು, ಶ್ರೀಮಾರೆಮ್ಮದೇವಿ ಸೇವಾ ಟ್ರಸ್ಟ್, ಲಾರಿ ಮಾಲೀಕರ ಸಂಘ, ಮಹರ್ಷಿ ವಾಲ್ಮೀಕಿ ನಾಯಕ ಸಂಘ ಸಹಯೋಗದಲ್ಲಿ ಅಪರ ಜಿಲ್ಲಾಧಿಕಾರಿ ಅನುರಾಧ ಅವರಿಗೆ ಮನವಿ ಸಲ್ಲಿಸಿದರು.ಮುಖಂಡರಾದ ಪಿ. ವೆಂಕಟೇಶ್, ಪರಮೇಶ್ವರ ಗೌಡ, ಗುಜ್ಜಲ್ ಗಣೇಶ್, ಎಸ್. ಯರಿಸ್ವಾಮಿ, ಬ್ಯಾಲೇಸಾಬ್, ಹುಲುಗಪ್ಪ, ವದ್ದಟ್ಟಿ ಸುಂಕಪ್ಪ, ಮಧುರಚನ್ನಶಾಸ್ತ್ರಿ, ಗಂಟೆ ಸೋಮಶೇಖರ, ಬೋಡ ರಾಮಪ್ಪ, ಹೊನ್ನೂರಸ್ವಾಮಿ, ದೊಡ್ಡ ಬಜಾರೆಪ್ಪ, ವಿ.ರಂಗಯ್ಯ ಮತ್ತಿತರರಿದ್ದರು.