ಕಬ್ಬು ಬೆಳೆಗಾರರಿಗೆ ಪ್ರತಿ ಟನ್ಗೆ 4,000 ರು. ದರ ಮುಂಗಡವಾಗಿ ನಿಗದಿಪಡಿಸಬೇಕು ಎಂದು ಆಗ್ರಹಿಸಿ ನವೆಂಬರ್ 12 ರಂದು ಸಚಿವರ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಲು ಜಿಲ್ಲೆಯ ರೈತ ಸಂಘಟನೆಗಳ ಮುಖಂಡರು ನಿರ್ಧರಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೀದರ್
ಕಬ್ಬು ಬೆಳೆಗಾರರಿಗೆ ಪ್ರತಿ ಟನ್ಗೆ 4,000 ರು. ದರ ಮುಂಗಡವಾಗಿ ನಿಗದಿಪಡಿಸಬೇಕು ಎಂದು ಆಗ್ರಹಿಸಿ ನವೆಂಬರ್ 12 ರಂದು ಸಚಿವರ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಲು ಜಿಲ್ಲೆಯ ರೈತ ಸಂಘಟನೆಗಳ ಮುಖಂಡರು ನಿರ್ಧರಿಸಿದ್ದಾರೆ.ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ಬೆಳಿಗ್ಗೆ 11ಗಂಟೆಗೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜಿಲ್ಲೆಯ ಎಲ್ಲ ರೈತ ಸಂಘಟನೆಗಳ ಮುಖಂಡರು ಹಾಗೂ ಸಕ್ಕರೆ ಕಾರ್ಖಾನೆಗಳ ಮಾಲೀಕರ ಸಭೆ ನಡೆದಿದ್ದು, ಸಭೆಗೆ ಸಕ್ಕರೆ ಕಾರ್ಖಾನೆಗಳ ಮಾಲೀಕರು ಗೈರು ಹಾಜರಾಗಿದ್ದು, ಕಾರ್ಖಾನೆಗಳ ಸಿಇಒ ಹಾಗೂ ಎಂಡಿಗಳು ಮಾತ್ರ ಭಾಗವಹಿಸಿದ್ದರು. ಜಿಲ್ಲಾಧಿಕಾರಿಗಳು ಮತ್ತು ರೈತ ಮುಖಂಡರ ನಡುವೆ ನಡೆದ ನೇರ ಚರ್ಚೆಯಲ್ಲಿ ಕಾರ್ಖಾನೆಗಳ ಪ್ರತಿನಿಧಿಗಳು ಪ್ರತಿ ಟನ್ ಕಬ್ಬಿಗೆ 3,100 ಅಥವಾ 3,200 ದರ ನೀಡಲು ಒಪ್ಪಿಗೆ ಸೂಚಿಸಿದರು. ಆದರೆ, ಈ ದರಕ್ಕೆ ರೈತ ಮುಖಂಡರು ಸಮ್ಮತಿಸಲಿಲ್ಲ. ರೈತರ ಬೇಡಿಕೆಯನ್ನು ಮುಂದಿಟ್ಟ ಮುಖಂಡರು, ಪ್ರತಿ ಟನ್ ಕಬ್ಬಿಗೆ ಮುಂಗಡವಾಗಿ 4,000 ನೀಡಬೇಕು ಎಂದು ಒತ್ತಾಯಿಸಿದರು. ರೈತರ ಬೇಡಿಕೆ ಹಾಗೂ ಕಾರ್ಖಾನೆಗಳ ಪ್ರಸ್ತಾವಿತ ದರದ ನಡುವೆ ಒಮ್ಮತ ಮೂಡದ ಹಿನ್ನೆಲೆಯಲ್ಲಿ ಸಭೆ ಯಾವುದೇ ಅಂತಿಮ ನಿರ್ಧಾರಕ್ಕೆ ಬರದೆ ಸಭೆ ಮುಕ್ತಾಯಗೊಂಡಿತು.
ಈ ಹಿನ್ನೆಲೆಯಲ್ಲಿ ನ.12ರಂದು ಬೆಳಿಗ್ಗೆ 11ಗಂಟೆಗೆ ಸಚಿವರ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಲು ರೈತ ಮುಖಂಡರು ತಿರ್ಮಾನಿಸಿದ್ದಾರೆ. ಅಂದು ನಡೆಯುವ ಹೋರಾಟದಲ್ಲಿ ಮುಂದಿನ ಹೋರಾಟದ ರೂಪುರೇಷೆಗಳನ್ನು ಎಲ್ಲರ ಒಪ್ಪಿಗೆಯೊಂದಿಗೆ ನಿರ್ಧರಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಸಭೆಯಲ್ಲಿ ಮಲ್ಲಿಕಾರ್ಜುನ ಸ್ವಾಮಿ, ಶಿವರಾಯ ಮುಧಾಳೆ, ಮಲ್ಲಾರೆಡ್ಡಿ, ಗುಂಡು ರೆಡ್ಡಿ, ಸುರೇಶರೆಡ್ಡಿ, ಮಲ್ಲಿಕಾರ್ಜುನ ಬಿರಾ ದಾರ, ವೀರಾರೆಡ್ಡಿ, ಅಶೋಕ ಕಾರಭಾರಿ, ಬಾಬುರಾವ್ ಹೊನ್ನಾ, ಸುಧಾಕರ, ವಿನೋದ ಚಿಂತಾಮಣಿ, ಬಸವರಾಜ ಅಷ್ಟೂರ, ಖಾಸಿಂ ಅಲಿ, ನಜೀರ್ ಅಹ್ಮದ್, ಅಸಿಫ ಅಲಿ, ಶಿವಶಾಂತ ರೆಡ್ಡಿ, ಶಂಕರ ಪಟೇಲ್, ಧೂಳಪ್ಪ, ಖಾಜಾಮಿಯಾ, ವೀರಭೂಷಣ, ಶಿವರಾಜ ಪಾಟೀಲ, ಶಿವಾನಂದ, ಸುಮಂತ್, ಬಾಬುರಾವ್, ಶ್ರೀಕಾಂತ, ಅನಿಕೇತ, ಸುಶೀಲ ಭೋಸಲೆ, ಚಂದ್ರಕಾಂತ ಪಾಟೀಲ, ಸನ್ಮುಖ ತೆಗಂಪೂರ ಸೇರಿದಂತೆ ರೈತ ಮುಖಂಡರು ಉಪಸ್ಥಿತರಿದ್ದರು.
--ಚಿತ್ರ 7ಬಿಡಿಆರ್51:
ಬೀದರಿನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶನಿವಾರ ನಡೆದ ರೈತರ ಹಾಗೂ ಕಾರ್ಖಾನೆಗಳ ಮಾಲಿಕರ ಸಭೆಯ ನಂತರ ರೈತ ಮುಖಂಡರು ಚರ್ಚಿಸಿದರು.--
ಚಿತ್ರ 7ಬಿಡಿಆರ್51:ಬೀದರಿನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶನಿವಾರ ನಡೆದ ರೈತರ ಹಾಗೂ ಕಾರ್ಖಾನೆಗಳ ಮಾಲಿಕರ ಸಭೆಯ ನಂತರ ರೈತ ಮುಖಂಡರು ಚರ್ಚಿಸಿದರು.