ಸಾರಾಂಶ
ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ವರ್ಗಾವಣೆಯಾಗಿ ಒಂದು ತಿಂಗಳು ಕಳೆದರೂ ಗ್ರಾಮದ ಸಾರ್ವಜನಿಕರ ಕೆಲಸ ಆಗದೆ ಪ್ರತಿನಿತ್ಯ ಗ್ರಾಮ ಪಂಚಾಯತಿ ನೋಡಿಕೊಂಡು ಹೋಗುವ ಪರಿಸ್ಥಿತಿಯಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಇ-ಸ್ವತ್ತು ಸೇರಿದಂತೆ ಅನೇಕ ಸಾರ್ವಜನಿಕ ಕೆಲಸಗಳು ಬಾಕಿ ಇದ್ದು ಇಲ್ಲಿ ಹೇಳುವರು ಇಲ್ಲ ಕೇಳುವರು ಇಲ್ಲದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿಗೆ ಬೇರೆ ಪಂಚಾಯತಿ ಪಿಡಿಒ ನಿಯೋಜನೆ ಮಾಡಿದ್ದರು ಅವರು ಇಲ್ಲಿಗೆ ಬಂದು ಕರ್ತವ್ಯ ನಿರ್ವಹಣೆ ಮಾಡುತ್ತಿಲ್ಲ. ಈ ಬಗ್ಗೆ ಜಿಪಂ ಗಮನಕ್ಕೆ ತಂದರೂ ತುರ್ತು ಗಮನಹರಿಸಿಲ್ಲ. ಇದರಿಂದ ಗ್ರಾಮದಲ್ಲಿ ನೈರ್ಮಲ್ಯದ ಸಮಸ್ಯೆ ತುಂಬಿ ತುಳುಕುತ್ತಿದೆ. ದೀಪಾವಳಿ ಹಬ್ಬ ಇದ್ದರೂ ಸಿಬ್ಬಂದಿಯ ಮಾಸಿಕ ಸಂಬಳ ನೀಡಿಲ್ಲ. ಇದರಿಂದ ಸಿಬ್ಬಂದಿಗಳು ವಾಟರ್‌ಮೆನ್‌ಗಳಿಗೆ ತೊಂದರೆಯಾಗಿದೆ.
ಕನ್ನಡಪ್ರಭ ವಾರ್ತೆ ಹಾರನಹಳ್ಳಿ
ಇಲ್ಲಿನ ಗ್ರಾಮ ಪಂಚಾಯಿತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ವರ್ಗಾವಣೆಯಾಗಿ ಒಂದು ತಿಂಗಳು ಕಳೆದರೂ ಗ್ರಾಮದ ಸಾರ್ವಜನಿಕರ ಕೆಲಸ ಆಗದೆ ಪ್ರತಿನಿತ್ಯ ಗ್ರಾಮ ಪಂಚಾಯತಿ ನೋಡಿಕೊಂಡು ಹೋಗುವ ಪರಿಸ್ಥಿತಿಯಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.ಇ-ಸ್ವತ್ತು ಸೇರಿದಂತೆ ಅನೇಕ ಸಾರ್ವಜನಿಕ ಕೆಲಸಗಳು ಬಾಕಿ ಇದ್ದು ಇಲ್ಲಿ ಹೇಳುವರು ಇಲ್ಲ ಕೇಳುವರು ಇಲ್ಲದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿಗೆ ಬೇರೆ ಪಂಚಾಯತಿ ಪಿಡಿಒ ನಿಯೋಜನೆ ಮಾಡಿದ್ದರು ಅವರು ಇಲ್ಲಿಗೆ ಬಂದು ಕರ್ತವ್ಯ ನಿರ್ವಹಣೆ ಮಾಡುತ್ತಿಲ್ಲ. ಈ ಬಗ್ಗೆ ಜಿಪಂ ಗಮನಕ್ಕೆ ತಂದರೂ ತುರ್ತು ಗಮನಹರಿಸಿಲ್ಲ. ಇದರಿಂದ ಗ್ರಾಮದಲ್ಲಿ ನೈರ್ಮಲ್ಯದ ಸಮಸ್ಯೆ ತುಂಬಿ ತುಳುಕುತ್ತಿದೆ. ದೀಪಾವಳಿ ಹಬ್ಬ ಇದ್ದರೂ ಸಿಬ್ಬಂದಿಯ ಮಾಸಿಕ ಸಂಬಳ ನೀಡಿಲ್ಲ. ಇದರಿಂದ ಸಿಬ್ಬಂದಿಗಳು ವಾಟರ್‌ಮೆನ್‌ಗಳಿಗೆ ತೊಂದರೆಯಾಗಿದೆ.ಹಾರನಹಳ್ಳಿ ದೊಡ್ಡ ಪಂಚಾಯತಿ ಆಗಿರುವುದರಿಂದ ಪೂರ್ಣ ಪ್ರಮಾಣದಲ್ಲಿ ಕರ್ತವ್ಯ ನಿರ್ವಹಿಸುವ ಪಿಡಿಒ ಹಾಕಿಸುವಂತೆ ಗ್ರಾಮಸ್ಥರು ಶಾಸಕರನ್ನು ಒತ್ತಾಯಿಸಿದ್ದಾರೆ. ಪಿಡಿಒ ಇಲ್ಲದೆ ಯರೇಹಳ್ಳಿ ಬಿ ತಾಂಡ್ಯ, ಕನ್ನಕಂಚನಹಳ್ಳಿ, ಕೋಡಿಕೊಪ್ಪಲು ಸೇರಿದಂತೆ ಅನೇಕ ಜನ ಹಳ್ಳಿಯಿಂದ ಬಂದು ಗ್ರಾಮ ಪಂಚಾಯತಿ ಕಚೇರಿ ನೋಡಿಕೊಂಡು ಹೋಗುವ ಪರಿಸ್ಥಿತಿಯಾಗಿದೆ. ಇಲ್ಲಿವರೆಗೂ ಈಬಗ್ಗೆ ಜನಪ್ರತಿನಿಧಿಗಳು ಗಮನಹರಿಸಿಲ್ಲ. ನೂರಾರು ಇ-ಸ್ವತ್ತು ಅರ್ಜಿಗಳು ಬಾಕಿ ಇದ್ದು ಪಂಚಾಯಿತಿ ಸಿಬ್ಬಂದಿ ವೇತನ ಇತರ ಕಾರ್ಯಗಳು ಆಗಬೇಕಾಗಿದೆ. ಪಂಚಾಯತಿ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿದೆ. ತಕ್ಷಣ ತಾಲ್ಲೂಕು ಆಡಳಿತ ಗಮನಹರಿಸುವಂತೆ ಗ್ರಾಪಂ ಮಾಜಿ ಅಧ್ಯಕ್ಷ ಎಚ್. ಎಸ್. ನಂದೀಶ್ ಒತ್ತಾಯಿಸಿದ್ದಾರೆ.