ಸಾರಾಂಶ
ರೈತ ಪರ ಸಮಸ್ಯೆ ನಿವಾರಣೆ ಹಿನ್ನೆಲೆಯಲ್ಲಿ ಜಗತ್ ಸಿಂಗ್ ದಲಿವಾಲ ನಾಯಕತ್ವದಲ್ಲಿ ಪಂಜಾಬ್ ಹಾಗೂ ಹರಿಯಾಣದ ಶಂಭೂ ಗಡಿಯಲ್ಲಿ ನಡೆಸುತ್ತಿರುವ ಚಳುವಳಿ ಬಗ್ಗೆ ಕೇಂದ್ರ ಸರ್ಕಾರ ಮಧ್ಯೆ ಪ್ರವೇಶಿಸಿ ಕೂಡಲೇ ಚರ್ಚೆ ಮಾಡಿ ಸಮಸ್ಯೆ ಬಗೆಹರಿಸಬೇಕೆಂದು ಒತ್ತಾಯಿಸಿ ಗುರುವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ತಾಲೂಕು ಶಾಖೆ ವತಿಯಿಂದ ಕಂದಾಯ ಇಲಾಖೆಗೆ ಮನವಿ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ಪಾವಗಡ
ರೈತ ಪರ ಸಮಸ್ಯೆ ನಿವಾರಣೆ ಹಿನ್ನೆಲೆಯಲ್ಲಿ ಜಗತ್ ಸಿಂಗ್ ದಲಿವಾಲ ನಾಯಕತ್ವದಲ್ಲಿ ಪಂಜಾಬ್ ಹಾಗೂ ಹರಿಯಾಣದ ಶಂಭೂ ಗಡಿಯಲ್ಲಿ ನಡೆಸುತ್ತಿರುವ ಚಳುವಳಿ ಬಗ್ಗೆ ಕೇಂದ್ರ ಸರ್ಕಾರ ಮಧ್ಯೆ ಪ್ರವೇಶಿಸಿ ಕೂಡಲೇ ಚರ್ಚೆ ಮಾಡಿ ಸಮಸ್ಯೆ ಬಗೆಹರಿಸಬೇಕೆಂದು ಒತ್ತಾಯಿಸಿ ಗುರುವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ತಾಲೂಕು ಶಾಖೆ ವತಿಯಿಂದ ಕಂದಾಯ ಇಲಾಖೆಗೆ ಮನವಿ ಸಲ್ಲಿಸಿದರು.ಈ ವೇಳೆ ಪ್ರತಿಭಟನೆ ನೇತೃತ್ವವಹಿಸಿದ್ದ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ದೊಡ್ಡಹಟ್ಟಿ ಪೂಜಾರಪ್ಪ ಮಾತನಾಡಿ ಎಂ.ಎಸ್.ಪಿ ಕಾಯ್ದೆ ಕಾನೂನಾತ್ಮಕವಾಗಿ ಪಾಲನೆ ಮಾಡಬೇಕು. ವಿದ್ಯುತ್ ಶಕ್ತಿ ಇಲಾಖೆಯನ್ನು ಖಾಸಗೀಕರಣದ ಚಿಂತನೆ ಕೈಬಿಡಬೇಕು. ಇತರೆ ಸಮಸ್ಯೆ ನಿವಾರಿಸಿ ರೈತರಿಗೆ ಅನುಕೂಲ ಕಲ್ಪಿಸುವಂತೆ ಒತ್ತಾಯಿಸಿದರು.
ರೈತ ನಾಯಕ ಜಗತ್ ಸಿಂಗ್ ದಲ್ಲಿವಾಲ ಅವರು 38 ದಿನಗಳಿಂದ ಉಪವಾಸ ಸತ್ಯಗ್ರಹ ಕೈಗೊಂಡಿದ್ದು, ಅವರ ಆರೋಗ್ಯ ಸಂಪೂರ್ಣ ಹದಗೆಟ್ಟಿದೆ. ದೇಶದ ಕೃಷಿ ಕ್ಷೇತ್ರದ ಅಭಿವೃದ್ಧಿಗೊಸ್ಕರ ಜೀವನ್ಮರ ಹೋರಾಟ ಕೈಗೊಂಡಿದ್ದಾರೆ. ಸುಪ್ರೀಂ ಕೋರ್ಟ್ ಸಹ ಕೇಂದ್ರ ಸರ್ಕಾರ ಮತ್ತು ಪಂಜಾಬ್ ಸರ್ಕಾರ ಅವರ ಸಮಸ್ಯೆಗಳ ಬಗ್ಗೆ ಮಾತುಕತೆ ನಡೆಸಿ ನ್ಯಾಯಯುತವಾಗಿ ಪರಿಹಾರ ಕಲ್ಪಿಸುವಂತೆ ಸರ್ಕಾರಕ್ಕೆ ಆದೇಶಿಸಿದೆ. ಅಲ್ಲದೇ ಜಗತ್ ಸಿಂಗ್ ದಲಿವಾಲರ ಆರೋಗ್ಯ ಹಾಗೂ ಜೀವ ಉಳಿಸುವತ್ತ ಕೇಂದ್ರ ಮತ್ತು ಅಲ್ಲಿನ ರಾಜ್ಯ ಸೇರಿ ಈ ಎರಡು ಸರ್ಕಾರಗಳಿಗೆ ಸೂಚನೆ ಕೊಟ್ಟಿದೆ.ಅದನ್ನೂ ಸರ್ಕಾರಗಳು ನಿರ್ಲಕ್ಷ್ಯವಹಿಸಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು. ಈ ಚಳುವಳಿ ಪಂಜಾಬ್ ಮತ್ತು ಹರಿಯಾಣ ರೈತರಿಗೆ ಮಾತ್ರ ಸೀಮಿತವಾಗಿಲ್ಲ, ಭಾರತ ದೇಶದ ರೈತರ ಪರವಾಗಿ ಚಳುವಳಿ ನಡೆಯುತ್ತಿದೆ ಜಗತ್ ಸಿಂಗ್ ದಲ್ಲಿವಾಲ ಅವರು ಈ ದೇಶದ ರೈತರ ಪರವಾಗಿ ಗಾಂಧಿಜೀಯವರು ಹಾಕಿಕೊಟ್ಟಂತಹ ಮಾರ್ಗದಲ್ಲಿ ಅಹಿಂಸಾತ್ಮಕವಾಗಿ ಉಪವಾಸ ಸತ್ಯಗ್ರಹ ಮಾಡುತ್ತಿದ್ದಾರೆ. ಆದ್ದರಿಂದ ಕೇಂದ್ರ ಸರ್ಕಾರ ಈ ಕೂಡಲೇ ಮಾತುಕತೆ ನಡೆಸಿ, ಮೇಲ್ಕಂಡ ಸಮಸ್ಯೆಯನ್ನು ಪರಿಹರಿಸಬೇಕು. ರೈತ ಮುಖಂಡ ಹಾಗೂ ಹೋರಾಟಗಾರರಾದ ಜಗತ್ ಸಿಂಗ್ ಅವರು ಪ್ರಾಣ ಉಳಿಸುವತ್ತ ಮುಂದಾಗುವಂತೆ ಇಲ್ಲಿನ ರೈತ ಸಂಘದದಿಂದ ಒತ್ತಾಯಿಸುತ್ತಿದ್ದೇವೆ. ಈ ವಿಷಯದಲ್ಲಿ ಸರ್ಕಾರ ನಿರ್ಲಕ್ಷ್ಯ ದೋರಣೆ ಅನುಸರಿಸಿದರೆ ದೇಶ್ಯಾದ್ಯಂತ ಹೋರಾಟ ಮಾಡಲಾಗುವುದು ಎಂದರು.ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ದಂಡುಪಾಳ್ಯ ರಾಮಾಂಜಿನಪ್ಪ,ರೈತ ಸಂಘದ ತಾಲೂಕು ಅಧ್ಯಕ್ಷ ಬ್ಯಾಡನೂರು ಶಿವು, ಹಿರಿಯ ರೈತ ಮುಖಂಡ ಸದಾಶಿವಪ್ಪ ಗುಂಡ್ಲಹಳ್ಳಿ ರಮೇಶ್, ಹನುಮಂತರಾಯಪ್ಪ, ಶ್ರೀರಾಮಪ್ಪ, ಈರಣ್ಣ, ಗುಡಿಪಲ್ಲಪ್ಪ, ಸರಸಪ್ಪ,ಸಿದ್ದಪ್ಪ ಎಂ.ಹನುಮಂತರಾಯಪ್ಪ, ನಾಗರಾಜಪ್ಪ, ರಾಮಪ್ಪ ಇತರರಿದ್ದರು.
;Resize=(128,128))
;Resize=(128,128))