ಕನ್ನಡಪ್ರಭವಾರ್ತೆ ಪಾವಗಡ
ತಾಲೂಕು ಸರ್ಕಾರಿ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಗಣೇಶ್‌ಬಾಬು ವೈಖರಿ ಹಾಗೂ ಅಸಭ್ಯ ವರ್ತನೆಯಿಂದ ಬಡ ರೋಗಿಗಳು ಸಂಕಷ್ಟಕ್ಕಿಡಾಗಿದ್ದಾರೆ. ಕೂಡಲೇ ಪರಿಶೀಲಿಸಿ ಸೂಕ್ತ ಕ್ರಮವಹಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಜಿಲ್ಲಾಧಿಕಾರಿಗಳಿಗೆ ಒತ್ತಾಯಿಸಿ ಗುರುವಾರ ತಾಲೂಕು ಮಾದರ್ ಮಹಾ ಸಭಾದ ವತಿಯಿಂದ ತಹಸೀಲ್ದಾರ್ ವೈ.ರವಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.ತಾಲೂಕು ಮದಾರ್ ಮಹಾ ಸಭಾದ ನಿರ್ದೇಶಕ ಹಾಗೂ ವಕೀಲ ಟಿ.ಎನ್.ಪೇಟೆ ರಮೇಶ್ ಮಾತನಾಡಿ , ಪಾವಗಡ ಸರ್ಕಾರಿ ಆಸ್ಪತ್ರೆ ಸಂಪೂರ್ಣ ಅವ್ಯವಸ್ಥೆಯಿಂದ ಕೂಡಿದ್ದು ಇಲ್ಲಿ ಬಡ ರೋಗಿಗಳಿಗೆ ಸೂಕ್ತ ಸಿಗುತ್ತಿಲ್ಲ. ಸರಬರಾಜ್ ಇಲ್ಲ ಎಂದು ಔಷಧಿಗಳಿಗೆ ಖಾಸಗಿ ಮೆಡಿಕಲ್‌ಗಳಿಗೆ ಚೀಟಿ ಬರೆದುಕೊಡುತ್ತಿದ್ದಾರೆ. ಆಡಳಿತಾಧಿಕಾರಿ ಈ ಧೋರಣೆಯಿಂದ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ,. ಸರ್ಕಾರದಿಂದ ಸರಬರಾಜ್ ಅಗುತ್ತಿರುವ ಔಷಧಿಗಳು ಏನಾಗುತ್ತಿವೆಯೋ ಗೊತ್ತಾಗುತ್ತಿಲ್ಲ. ಸಣ್ಣಪುಟ್ಟ ಕಾಯಿಲೆಗೂ ಖಾಸಗಿ ಮೆಡಿಕಲ್‌ಗಳಿಗೆ ಚೀಟಿ ಬರೆದು ಕೊಡುವ ಪರಿಣಾಮ ಹಣ ನೀಡಿ ಔಷಧಿ ಖರೀದಿಸುವ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಬಡ ರೋಗಿಗಳು ತೀವ್ರ ಸಂಕಷ್ಟಕ್ಕಿಡಾಗಿದ್ದಾರೆಂದು ಆರೋಪಿಸಿದರು.ಅಲ್ಲದೇ ಇಲ್ಲಿನ ಸರ್ಕಾರಿ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.,ಗಣೇಶ್ ಬಾಬು ಅಧಿಕಾರ ವಹಿಸಿಕೊಂಡಾಗಿನಿಂದಲೂ ಆಸ್ಪತ್ರೆ ನಿರ್ವಹಣೆ ಸರಿಯಿಲ್ಲದೇ ಗ್ರಾಮೀಣ ಪ್ರದೇಶದ ಬಡರೋಗಿಗಳು ನಾನಾ ರೀತಿಯ ಹಿಂಸೆ ಅನುಭವಿಸುತ್ತಿದ್ದಾರೆ. ಆಸ್ಪತ್ರೆಯ ಮಹಿಳಾ ಸಿಬ್ಬಂದಿಯ ಈ ವೈದ್ಯಾದಿಕಾರಿ ಬಳಿ ಅವರ ಕಷ್ಟಗಳನ್ನು ಹೇಳಿಕೊಳ್ಳಲು ಹೋದರೆ ಅತ್ಯಂತ ಅಸಭ್ಯವಾಗಿ ನಡೆದುಕೊಳ್ಳುತ್ತಿರುವ ಬಗ್ಗೆ ನಿದರ್ಶಗಳಿವೆ. ಇಲ್ಲಿನ ಕಿರುಕುಳದ ಬಗ್ಗೆ ಆಸ್ಪತ್ರೆಯ ಅನೇಕ ಮಹಿಳೆಯರು ತಮ್ಮ ನೋವನ್ನು ಮೇಲಾಧಿಕಾರಿಗಳಿಗೆ ತಿಳಿಸಲಾಗದೆ ಹೆದರಿ ಪ್ರತಿನಿತ್ಯ ಕಾರ್ಯ ನಿರ್ವಹಿಸುವ ಸ್ಥಿತಿ ನಿರ್ಮಾಣವಾಗಿದೆ. ತನಿಖೆ ನಡೆಸಿ ಕೂಡಲೇ ಈ ಭ್ರಷ್ಟ ಅಧಿಕಾರಿ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಬೇಕು ಎಂದು ಆಗ್ರಹಿಸಿದರು.
ಮಾದರ್ ಮಹಾ ಸಭಾದ ಮುಖಂಡ ಕನ್ನಮೇಡಿ ಕೃಷ್ಣಮೂರ್ತಿ ಮಾತನಾಡಿ ಇಲ್ಲಿನ ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಗಣೇಶ್ ಬಾಬು ಈ ಹಿಂದೆ ಕುಣಿಗಲ್ ಸರ್ಕಾರಿ ಆಸ್ಪತ್ರೆ. ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ವೇಳೆ ಇವರ ಆಸ್ಪತ್ರೆಯ ಆರ್ಥಿಕ ವ್ಯವಹಾರಗಳ ಆಧಾರದ ಮೇಲೆ ಲೋಕಾಯುಕ್ತ ತನಿಖೆಯಾಗಿದೆ. ಇಂತಹ ಅನೇಕ ಅವ್ಯವಹಾರಗಳನ್ನು ಹೊಂದಿರುವ ಈ ವ್ಯಕ್ತಿಯನ್ನು ಇಲ್ಲಿನ ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳನ್ನಾಗಿ ನೇಮಿಸಿರುವುದು ದೊಡ್ಡ ದುರಂತ. ಇಂತಹವರಿಂದ ರೋಗಿಗಳಿಗೆ ವರವಾಗುವ ಬದಲು ಶಾಪವಾಗಿದೆ. ಆದ್ದರಿಂದ ತುಮಕೂರು ಡಿಎಚ್‌ಒ, ತಕ್ಷಣ ಮದ್ಯ ಪ್ರವೇಶಿಸಿ ಇವರ ವಿರುದ್ಧ ಸೂಕ್ತ ಕ್ರಮ ಜರಿಗಿಸುವಂತೆ ಆಗ್ರಹಿಸಿದರು.ತಾಲೂಕು ಡಿಎಸ್‌ಎಸ್ ಅಧ್ಯಕ್ಷ ಮೀನಗುಂಟೆನಹಳ್ಳಿ ನರಸಿಂಹಪ್ಪ ಮಾತನಾಡಿದರು. ಮನವಿ ಸ್ವೀಕರಿಸಿದ ಬಳಿಕ ತಹಸೀಲ್ದಾರ್ ವೈ.ರವಿ ಅವರು ಮಾತನಾಡಿ, ಸರ್ಕಾರಿ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಗಣೇಶ್‌ಬಾಬು ಅವರ ವಿರುದ್ಧ ನೀಡಿದ ದೂರಿನ ಮನವಿಯನ್ನು ಸ್ವೀಕರಿಸಿದ್ದು,ಸೂಕ್ತ ಕ್ರಮಕ್ಕೆ ಜಿಲ್ಲಾಧಿಕಾರಿ ಹಾಗೂ ಸಂಬಂಧಪಟ್ಟ ಸಚಿವರಿಗೆ ವರದಿ ಸಲ್ಲಿಸುವುದಾಗಿ ಹೇಳಿದರು.ಇದೇ ವೇಳೆ ಹಿರಿಯ ಮುಖಂಡ ವೆಟನರಿ ಉಗ್ರಪ್ಪ, ತಾಲೂಕು ಮದಾರ್ ಮಹಾ ಸಭಾದ ಅಧ್ಯಕ್ಷ ನರಸಿಂಹಪ್ಪ, ಹೊಸಹಳ್ಳಿ ಮಲ್ಲಿಕಾರ್ಜುನ, ನಾಗೇಶ್,ಬಿಎಸ್‌ಪಿ ಮಂಜುನಾಥ್, ಕಡಪಕರೆ ನರಸಿಂಹಪ್ಪ, ಗೋಪಾಲ್ ,ನಾಗಭೂಷಣ್, ಪಳವಳ್ಳಿ ನರಸಿಂಹಪ್ಪ, ನಾಗರಾಜು ಹನುಮಂತರಾಯ ಇತರೆ ಅನೇಕ ಮಂದಿ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.ಫೋಟೋ 16ಪಿವಿಡಿ1
ಸರ್ಕಾರಿ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಗಣೇಶ್‌ಬಾಬು ಧೋರಣೆ ಖಂಡಿಸಿ, ತಾಲೂಕು ಮದಾರ್ ಮಹಾ ಸಭಾದಿಂದ ತಹಸೀಲ್ದಾರ್ ವೈ.ರವಿಗೆ ಮನವಿ ಪತ್ರ ಸಲ್ಲಿಸಿದರು.