ಸಾರಾಂಶ
ಗ್ರಾಮದಲ್ಲಿನ ನೀರು ಹೊರಗೆ ಹೋಗಲು ಚರಂಡಿ ಇಲ್ಲದೆ ನಮ್ಮ ಮನೆ ಮುಂದೆ ನಿಲ್ಲುತ್ತಿದೆ. ಮನೆಯ ಮುಂದೆ ನಡೆದಾಡಲು ಕೂಡ ಸ್ಥಳವಕಾಶವಿಲ್ಲದ ಹಾಗೆ ಆಗಿದೆ
ಯಲಬುರ್ಗಾ: ತಾಲೂಕಿನ ಚೌಡಾಪುರ ಗ್ರಾಮದಲ್ಲಿ ತ್ಯಾಜ್ಯ ನೀರು ಸರಾಗವಾಗಿ ಹರಿದು ಹೋಗಲು ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ನಿವಾಸಿಗಳು ಸಮಸ್ಯೆ ಎದುರಿಸುತ್ತಿದ್ದಾರೆ.
ತಾಳಕೇರಿ ಗ್ರಾಮ ಪಂಚಾಯಿತಿಗೆ ಒಳಪಡುವ ಚೌಡಾಪುರದಲ್ಲಿ ಓಣಿಯಲ್ಲಿ ಚರಂಡಿ ಮೂಲಕ ಹರಿದು ಮುಂದಕ್ಕೆ ಹೋಗಲು ಅವಕಾಶ ಇಲ್ಲದ ಪರಿಣಾಮ ಒಂದೇ ಕಡೆ ಸಂಗ್ರಹವಾಗುತ್ತಿದೆ. ಇದರಿಂದ ಅಲ್ಲಿನ ನಿವಾಸಿಗಳು ಸೊಳ್ಳೆ ಕಾಟ ಹೆಚ್ಚಾಗಿದ್ದರಿಂದ ಸಾಂಕ್ರಾಮಿಕ ರೋಗಗಳ ಭೀತಿ ಎದುರಿಸುವಂತಾಗಿದೆ. ಗ್ರಾಮದ ಜಗದೇವಪ್ಪ ಹಡಪದ ಮನೆಯ ಹತ್ತಿರ ತ್ಯಾಜ್ಯ ನೀರು ನಿಲ್ಲುತ್ತಿದ್ದು, ಕಳೆದ ಐದಾರು ವರ್ಷಗಳಿಂದ ಸಮಸ್ಯೆ ಎದುರಿಸುವಂತಾಗಿದೆ.ಗ್ರಾಮದಲ್ಲಿನ ನೀರು ಹೊರಗೆ ಹೋಗಲು ಚರಂಡಿ ಇಲ್ಲದೆ ನಮ್ಮ ಮನೆ ಮುಂದೆ ನಿಲ್ಲುತ್ತಿದೆ. ಮನೆಯ ಮುಂದೆ ನಡೆದಾಡಲು ಕೂಡ ಸ್ಥಳವಕಾಶವಿಲ್ಲದ ಹಾಗೆ ಆಗಿದೆ. ಪಕ್ಕದ ಜಮೀನಿನ ಮಾಲೀಕರು ಹೊಲಕ್ಕೆ ನೀರು ನುಗ್ಗುತ್ತದೆ ಎಂದು ರಸ್ತೆಗೆ ಮಣ್ಣು ಹಾಕಿರುವ ಹಿನ್ನೆಲೆಯಲ್ಲಿ ನೀರು ನಿಂತು ಓಣಿಯಲ್ಲಿ ದುರ್ನಾತ ಬೀರುತ್ತಿದೆ. ಇದರಿಂದ ಮಲಿನ ವಾತಾವರಣ ನಿರ್ಮಾಣವಾಗಿದೆ. ಸಮಸ್ಯೆ ಬಗ್ಗೆ ಸಂಬಂಧಿಸಿದ ಗ್ರಾಪಂ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಸ್ಪಂದಿಸುತ್ತಿಲ್ಲ. ಇನ್ನಾದರೂ ತೊಂದರೆ ಬಗೆಹರಿಸಲು ಸಂಬಂಧಿಸಿದವರು ಮುಂದಾಗಬೇಕು ಎಂದು ಗ್ರಾಮಸ್ಥರಾದ ಚಂದನಗೌಡ ಮಾಲಿಪಾಟೀಲ್, ಮುದಕಣ್ಣ ಜಾಲಿಹಾಳ, ಹನುಮೇಶ ಮ್ಯಾಗೇರಿ, ಹನುಮೇಶ ಕಾಸನಕಂಡಿ ಒತ್ತಾಯಿಸಿದರು.