ನೇಹಾ ಕೊಲೆ ಆರೋಪಿಗೆ ಗಲ್ಲು ಶಿಕ್ಷೆಗೆ ಆಗ್ರಹ

| Published : Apr 21 2024, 02:22 AM IST

ಸಾರಾಂಶ

ಹುಬ್ಬಳ್ಳಿಯ ಬಿವಿಬಿ ಕಾಲೇಜಿನ ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಆಪಾದಿತನಿಗೆ ಕ್ಷಮೆ ಇಲ್ಲದಂತೆ ಗಲ್ಲು ಶಿಕ್ಷೆಗೆ ಗುರಿಪಡಿಸಬೇಕೆಂದು ಬಡದಾಳ ನಾಗರಿಕ ಹೋರಾಟ ಸಮಿತಿಯಿಂದ ಆಗ್ರಹಿಸಲಾಯಿತು.

ಕನ್ನಡಪ್ರಭ ವಾರ್ತೆ ಚವಡಾಪುರ

ಹುಬ್ಬಳ್ಳಿಯ ಬಿವಿಬಿ ಕಾಲೇಜಿನ ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಆಪಾದಿತನಿಗೆ ಕ್ಷಮೆ ಇಲ್ಲದಂತೆ ಗಲ್ಲು ಶಿಕ್ಷೆಗೆ ಗುರಿಪಡಿಸಬೇಕೆಂದು ಬಡದಾಳ ನಾಗರಿಕ ಹೋರಾಟ ಸಮಿತಿಯಿಂದ ಆಗ್ರಹಿಸಲಾಯಿತು.

ಶನಿವಾರ ಅಫಜಲ್ಪುರ ಪಟ್ಟಣದ ತಹಸಿಲ್ದಾರ ಕಚೇರಿಯಲ್ಲಿ ತಹಸೀಲ್ದಾರ ಸಂಜೀವಕುಮಾರ ದಾಸರ್ ಮುಖಾಂತರ ಪ್ರಧಾನಮಂತ್ರಿಗಳು, ಮುಖ್ಯಮಂತ್ರಿಗಳು ಹಾಗೂ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ರಾಜ್ಯದಲ್ಲಿ ಮಹಿಳೆಯರು ಆತಂಕರಹಿತವಾಗಿ ಓಡಾಡುವಂತಿಲ್ಲ. ಶಾಲೆ, ಕಾಲೇಜುಗಳಲ್ಲಿ, ಕಚೇರಿ ಸ್ಥಳಗಳಲ್ಲಿ, ಸಾರ್ವಜನಿಕ ಸ್ಥಳದಲ್ಲಿ, ಉದ್ಯೋಗ ಸ್ಥಳದಲ್ಲಿ ಎಲ್ಲಾ ಕಡೆ ಮಹಿಳೆಯರಿಗೆ ಶೋಷಣೆ ನಡೆಯುತ್ತಿದೆ. ದಿನೇ ದಿನೇ ದೌರ್ಜನ್ಯ, ಕೊಲೆ,ಸುಲಿಗೆ, ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿದೆ. ಕಾನೂನು ಸುವ್ಯವಸ್ಥೆ ಹದಗೆಡುತ್ತಿದೆ. ಕೂಡಲೇ ರಾಜ್ಯ ಪೊಲೀಸ್ ಇಲಾಖೆ ಇಂತಹ ಕೃತ್ಯಗಳು ನಡೆದಾಗ ಯಾವುದೇ ಪ್ರಭಾವಕ್ಕೆ ಒಳಗಾಗದೆ ಆಪಾದಿತರಿಗೆ ಶಿಕ್ಷಿಸುವ ಕೆಲಸ ಮಾಡಬೇಕು. ಜನಪ್ರತಿನಿಧಿಗಳು ಕೂಡ ಪರಿಸ್ಥಿತಿಯನ್ನು ಅರಿತು ಜವಾಬ್ದಾರಿಯಿಂದ ನಡೆದುಕೊಳ್ಳುವುದನ್ನು ಕಲಿಯಬೇಕು. ಕೂಡಲೇ ನೇಹಾ ಹಿರೇಮಠ ಕೊಲೆ ಆಪಾದಿತನಿಗೆ ಗಲ್ಲು ಶಿಕ್ಷೆಗೆ ಗುರಿಪಡಿಸಿ ಮುಂದೆ ಇಂತಹ ಕೃತ್ಯಗಳಾಗದಂತೆ ನೋಡಿಕೊಳ್ಳಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ಚಂದ್ರಕಾಂತ ಕಲ್ಲೂರ, ಸುಭಾಷ ಪೊಲೀಸ್‌ಪಾಟೀಲ, ಪ್ರಭಾವತಿ ಮೇತ್ರಿ, ಪ್ರತಿಭಾ ಮಹಿಂದ್ರಕರ, ಬಸು ನಿಂಬಾಳ, ಸಂತೋಷ ಫುಲಾರಿ, ಭಾಗೇಶ ನಿಂಬಾಳ, ಪ್ರಕಾಶ ಫುಲಾರಿ, ಸಿದ್ದು ಖೈರಾಟ, ಶರಣಯ್ಯ ಗುತ್ತೇದಾರ, ಚಿಚಲಪ್ಪ ಜಮಾಣಿ, ಶರಣಬಸಪ್ಪ ತಳವಾರ, ರಾಹುಲ್ ದೊಡ್ಮನಿ ಸೇರಿದಂತೆ ಅನೇಕರು ಇದ್ದರು.