ಸಾರಾಂಶ
ಸಮರ್ಪಕ ಕುಡಿವ ನೀರು ಪೂರೈಸಬೇಕು ಎಂದು ಆಗ್ರಹಿಸಿ ತಾಲೂಕಿನ ಕೊಂಡಗೂಳಿ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಬಿ.ಬಿ.ಇಂಗಳಗಿ ಗ್ರಾಮದ ಜನರು ತಹಸೀಲ್ದಾರ್ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.
ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ
ಸಮರ್ಪಕ ಕುಡಿವ ನೀರು ಪೂರೈಸಬೇಕು ಎಂದು ಆಗ್ರಹಿಸಿ ತಾಲೂಕಿನ ಕೊಂಡಗೂಳಿ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಬಿ.ಬಿ.ಇಂಗಳಗಿ ಗ್ರಾಮದ ಜನರು ತಹಸೀಲ್ದಾರ್ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಮಡಿವಾಳಮ್ಮ ಅಗಸರ, ಸಹಿರಿಭಾನು ಬಾಗಲಕೋಟ, ಗ್ರಾಪಂ ಸದಸ್ಯ ಸಲೀಂ ವಟಾರೆ, ಪ್ರತಿವರ್ಷ ಬೇಸಿಗೆ ಬಂತು ಅಂದರೆ ಸಾಕು ನಮ್ಮ ಗ್ರಾಮಸ್ಥರಿಗೆ ಕುಡಿಯುವ ನೀರು ಸಿಗದೇ ನಮಗೆ ತುಂಬಾ ತೊಂದರೆಯಾಗುತ್ತದೆ. ಗ್ರಾಮದಲ್ಲಿರುವ ಬೋರ್‌ವೇಲ್ ನೀರು ಕುಡಿಯಲು ಯೋಗ್ಯವಿಲ್ಲ. ಅದರಲ್ಲಿ ಕೆಲವು ಬೋರ್‌ವೆಲ್‌ಗಳು ಕೆಟ್ಟು ಹೋಗಿವೆ. ಕುಡಿಯುವ ನೀರು ಪೂರೈಕೆಗಾಗಿ ಒಂದು ಬಾವಿ ಇದೆ. ಆ ಬಾವಿಯಲ್ಲೂ ಕೂಡಾ ಅಂತರ್ಜಲಮಟ್ಟ ಕುಸಿದಿದೆ. ಗ್ರಾಮ ಪಂಚಾಯಿತಿ ಅವರು ೧೫ ದಿನಗಳಿಗೆ ಒಮ್ಮೆ ನೀರು ಬಿಡುತ್ತಾರೆ. ಅವು ಕೂಡ ಸರಿಯಾಗಿ ಬರುವುದಿಲ್ಲ. ಬಾವಿ ಪಕ್ಕದಲ್ಲಿ ಒಂದು ಬೋರ್‌ವೆಲ್ ಕೊರೆಸಿ ಗ್ರಾಮಕ್ಕೆ ಸಿಹಿ ನೀರು ಪೂರೈಕೆ ಮಾಡಬೇಕು. ಇಲ್ಲದಿದ್ದರೆ ಟ್ಯಾಂಕರ್‌ನಿಂದ ಕುಡಿಯುವ ನೀರು ಪೂರೈಕೆ ಮಾಡಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಶಾಹಜಾದಬಿ ಆವೇರಿ, ಪಾತಿಮಾ ಬಾಗಲಕೋಟ, ಲಾಲಬಿ ನದಾಫ, ಹಜರತಬಿ ನದಾಫ್, ಇದ್ರಂಬಾಯಿ ಅಗಸರ, ಹುಸೇನಬಿ ಶೇಖ, ಸಹಿರಾಬೇಗಂ ನದಾಫ್, ಇಮಾಮಬಿ ನದಾಫ್, ಆಯಿಷಾ ಆವೇರಿ, ರೋಸನಬಿ ಆವೇರಿ, ಹಲಮಾ ದೊಡಮನಿ, ಶಾರದಾ ಮೀನಗಾರ, ಶರಣಮ್ಮ ಕದ್ದನಳ್ಳಿ, ಹಲಿಮಾ ವಠಾರ, ಬಿಯಮಾ ಗಂಗೂರ, ಸಕಿರಾಬಾನು ಮುಜಾವಾರ, ಪರ್ವಿನ್ ಬಾಗಲಕೋಟ, ಖಾಜಾಬಿ ನದಾಫ್, ಬಿಸ್ಮಿಲ್ಲಾ ವಠಾರ, ಮಾದೇವಿ ಮಲ್ಲೇದ, ಜಯಶ್ರೀ ಮಲ್ಲೇದ, ಮಾಲಾನಬಿ ಬಾಗಲಕೋಟ, ಕೌಸರಬಿ ವಠಾರ ಸೇರಿದಂತೆ ಗ್ರಾಮಸ್ಥರು ಇದ್ದರು.