ಸಾರಾಂಶ
ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ
7ನೇ ವೇತನ ಆಯೋಗದ ಜಾರಿ, ಎನ್‌ಪಿಎಸ್ ರದ್ದತಿ ಹಾಗೂ ಆರೋಗ್ಯ ಸಂಜೀವಿನಿ ಯೋಜನೆಯ ಜಾರಿಗೆ ಒತ್ತಾಯಿಸಿ ಶಾಸಕರು ಹಾಗೂ ತಹಸೀಲ್ದಾರ್‌ಗೆ ರಾಜ್ಯ ಸರ್ಕಾರಿ ನೌಕರ ಸಂಘದ ತಾಲೂಕು ಘಟಕದ ವತಿಯಿಂದ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಸಿಂದಗಿ ತಾಲೂಕಿನ ನೌಕರರ ಸಂಘದ ಅಧ್ಯಕ್ಷ ಅಶೋಕ ತೆಲ್ಲೂರ ಮಾತನಾಡಿ, 2 ವರ್ಷಗಳ ಹಿಂದೆಯೇ ಜಾರಿಯಾಗಬೇಕಿದ್ದ ವೇತನ ಆಯೋಗ ಇನ್ನೂ ಕೂಡಾ ಜಾರಿಯಾಗದಿರುವುದು ನೋವಿನ ಸಂಗತಿ. 2006ರ ಏಪ್ರಿಲ್ 1ರ ನಂತರ ಸೇವೆಗೆ ಸೇರಿರುವ ಸರ್ಕಾರಿ ನೌಕರರಿಗೆ ಇರುವ ಹೊಸ ಪಿಂಚಣಿ ಯೋಜನೆ ರದ್ದು ಮಾಡಿ ಹಳೆಯ ಪಿಂಚಣಿ ಯೋಜನೆ ಜಾರಿ ಮಾಡಿ ಆ ನೌಕರಸ್ಥರ ಸಂಕಟದ ಯಾತನೆಯನ್ನು ಸರ್ಕಾರ ಪರಿಹರಿಸಬೇಕು ಎಂದು ಆಗ್ರಹಿಸಿದರು.ದೇವರಹಿಪ್ಪರಗಿ ತಾಲೂಕಿನ ನೌಕರರ ಸಂಘದ ಅಧ್ಯಕ್ಷ ಎಂ.ಜಿ.ಯಂಕಂಚಿ, ಪ್ರಧಾನ ಕಾರ್ಯದರ್ಶಿ ಜಿ.ಪಿ.ಬಿರಾದಾರ ಹಾಗೂ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಚನ್ನವೀರ ಕುದುರಿ ಮಾತನಾಡಿದರು. ಕಂದಾಯ, ಶಿಕ್ಷಣ, ಆರೋಗ್ಯ ಸೇರಿದಂತೆ ವಿವಿಧ ಇಲಾಖೆಗಳ ನೌಕರರು ಉಪಸ್ಥಿತರಿದ್ದರು.ದೇವರಹಿಪ್ಪರಗಿ ಮತಕ್ಷೇತ್ರದ ಶಾಸಕ ರಾಜುಗೌಡ ಪಾಟೀಲ ಕುದುರಿಸಾಲವಾಡಗಿ ಮನವಿ ಸ್ವೀಕರಿಸಿ ಬೇಡಿಕೆ ಈಡೇರಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು. ನಂತರ ದೇವರಹಿಪ್ಪರಗಿ ತಾಲೂಕಿನ ತಹಸೀಲ್ದಾರ್ ಪ್ರಕಾಶ ಸಿಂದಗಿ ಅವರಿಗೆ ಮೂರು ಬೇಡಿಕೆಗಳ ಕುರಿತು ಸವಿವರವಾದ ವರದಿ ಸಲ್ಲಿಸಿ ಮನವಿ ಮಾಡಿದರು.ಈ ಸಂದರ್ಭದಲ್ಲಿ ಶಿರಸ್ತೇದಾರರಾದ ಸುರೇಶ ಮ್ಯಾಗೇರಿ, ಡಿ.ಬಿ.ಭೋವಿ, ಡಿ.ಟಿ.ಜೋಶಿ, ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎ.ಎಚ್.ವಾಲೀಕಾರ, ನೌಕರರ ಉಪಾಧ್ಯಕ್ಷ ಡಿ.ಎ.ಇನಾಮದಾರ, ಶಿಕ್ಷಕ ಸಂಘದ ಖಜಾಂಚಿ ಪಿ.ಸಿ.ತಳಕೇರಿ, ಸಂಘಟನಾ ಕಾರ್ಯದರ್ಶಿ ಎನ್.ಎಸ್.ನಾಗೂರ, ಉಪಾಧ್ಯಕ್ಷ ಎಸ್.ವಿ.ಕೊಟೀನ, ಆಹಾರ ಇಲಾಖಾಧಿಕಾರಿ ಅಮೋಘಸಿದ್ದ ದಳವಾಯಿ, ಪ್ರಥಮ ದರ್ಜೆ ಸಹಾಯಕರಾದ ಕುಮಾರ ಅವರಾದಿ, ಶಿವಶಂಕರ ಜಾಧವ, ಸದಾಶಿವ ಗುಡಿಮನಿ, ಕೆ.ಐ.ಕಿಲಾರಿ, ರವಿ ಕೊಟೀನ, ವಿಶ್ವರಾಜ ಬಿರಾದಾರ, ಪ್ರಭು ಹಿರೇಮಠ, ಎಸ್.ಜಿ.ತಾವರಖೇಡ, ವೈ.ಜಿ.ತಾವರಖೇಡ, ಕೆ.ಎಂ.ನಂದಿ, ಎ.ಸಿ.ಲೋಗಾವಿ, ಗೊಲ್ಲಾಳ ಬಿರಾದಾರ, ದ್ವಿತೀಯ ದರ್ಜೆ ಸಹಾಯಕರಾದ ಕಿಶೋರ ರಾಠೋಡ, ಅಬ್ದುಲ್ ಮೊಮಿನ್, ರಾಜು ಕಿಣಗಿ, ಚನಬಸು ಸೇರಿದಂತೆ ಅನೇಕ ನೌಕರರು ಉಪಸ್ಥಿತರಿದ್ದರು.
ರಾಜ್ಯ ಸರ್ಕಾರಿ ನೌಕರರ ಬೇಡಿಕೆಗಳು ನ್ಯಾಯಯುತವಾಗಿದ್ದು, ಸರ್ಕಾರ ಕೂಡಲೇ ಅವರ ಬೇಡಿಕೆಗಳನ್ನು ಈಡೇರಿಸಬೇಕು. ಈ ನಿಟ್ಟಿನಲ್ಲಿ ನಾನು ಬರುವ ಅಧಿವೇಶನದಲ್ಲಿ ಧ್ವನಿ ಎತ್ತುವೆ.-ರಾಜುಗೌಡ ಪಾಟೀಲ ಕುದುರಿಸಾಲವಾಡಗಿ,
ಶಾಸಕರು.