ಸಾರಾಂಶ
ಪ್ರತಿ ವರ್ಷ ಜನಸಂಖ್ಯೆ ಹೆಚ್ಚುತ್ತಿರುವುದರಿಂದ ನಮಗೆ ಈಗಿರುವ ಈದ್ಗಾ ಮೈದಾನವು ಚಿಕ್ಕದಾಗುತ್ತಿದೆ. ಜನಸಂಖ್ಯೆ ಹೆಚ್ಚಾದಂತೆ ನಮಗೆ ನಮಾಜ್ ಮಾಡಲು ಜಾಗದ ಅಡಚಣೆ ಉಂಟಾಗುತ್ತಿದೆ
ಮುಳುಗುಂದ: ಪಟ್ಟಣದ ಈದ್ಗಾ ಮೈದಾನದ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಖಿದ್ಮತ್-ಎ-ಮಿಲ್ಲತ್ ಗ್ರುಪ್ ವತಿಯಿಂದ ಗದಗ ಜಿಲ್ಲಾ ವಕ್ಪ ಸಲಹಾ ಸಮಿತಿ ಅಧ್ಯಕ್ಷ ಜಿ.ಎಂ. ದಂಡಿನ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ತಾಜುದ್ದೀನ್ ಕಿಂಡ್ರಿ ಮಾತನಾಡಿ, ಪ್ರತಿ ವರ್ಷ ಜನಸಂಖ್ಯೆ ಹೆಚ್ಚುತ್ತಿರುವುದರಿಂದ ನಮಗೆ ಈಗಿರುವ ಈದ್ಗಾ ಮೈದಾನವು ಚಿಕ್ಕದಾಗುತ್ತಿದೆ. ಜನಸಂಖ್ಯೆ ಹೆಚ್ಚಾದಂತೆ ನಮಗೆ ನಮಾಜ್ ಮಾಡಲು ಜಾಗದ ಅಡಚಣೆ ಉಂಟಾಗುತ್ತಿದೆ,ಹಾಗಾಗಿ ಇನ್ನಷ್ಟು ವಿಸ್ತರಣೆ ಮಾಡಿ ಅಭಿವೃದ್ಧಿಗೊಳಿಸಲು ಅನುದಾನ ಕೊರತೆ ಇರುವುದರಿಂದ ಶೀಘ್ರವೇ ವಕ್ಫನಿಂದ ಅನುದಾನ ಬಿಡುಗಡೆ ಮಾಡಿ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ ಸಂಘದ ಹಿರಿಯರಾದ ಹಮೀದ ಮುಜಾವರ, ರಫೀಕ್ ದಲೀಲ,ರಾಜೇಸಾಬ್ ಸೈಯದಬಡೆ, ಚಮನಸಾಬ್ ಹಾದಿಮನಿ, ಹೈದರಅಲಿ ಖವಾಸ, ಮುನ್ನಾ ಢಾಲಯತ, ಹುಸೇನ ಅಕ್ಕಿ, ಮಾಬುಲಿ ದುರ್ಗಿಗುಡಿ, ಖಲಂದರ ಗಾಡಿ ಹಾಗೂ ದಾವೂದ್ ಜಮಾಲ್ ಇದ್ದರು.