ಹಿರೇಕೆರೂರು: ವಿದ್ಯುತ್ ಖಾಸಗೀಕರಣ ಸೇರಿದಂತೆ ವಿದ್ಯುತ್‌ಗೆ ಸಂಬಂಧಿಸಿದ ರೈತರ ವಿವಿಧ ಬೇಡಿಕೆಗಳ ಈಡೇರಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ಘಟಕದಿಂದ ಪಟ್ಟಣದ ಹೆಸ್ಕಾಂ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.ಈ ವೇಳೆ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಮಾತನಾಡಿ, ರೈತರ ಹೊಸ ಪಂಪ್‌ಸೆಟ್‌ಗಳಿಗೆ ರು. 20 ಸಾವಿರ ಪಾವತಿ ಮಾಡಿಕೊಂಡು ಕಂಬ, ವೈಯರ್, ಟಿಸಿಯನ್ನು ಹೆಸ್ಕಾಂ ಕಂಪನಿ ನೀಡಬೇಕು. ವಿದ್ಯುತ್ ಖಾಸಗೀಕರಣ ಮಾಡಿ ರೈತ ಹಿತ್ತಾಸಕ್ತಿಯನ್ನು ಬಲಿಕೊಡುವುದನ್ನು ನಿಲ್ಲಿಸಬೇಕು. ಅಧಿಕ ಕಾರ್ಯ ಒತ್ತಡ ಇರುವ ವಿದ್ಯುತ್ ಪರಿವರ್ತಕಗಳನ್ನು ಬದಲಾಯಿಸಿ ಅವುಗಳನ್ನು ಮೇಲ್ದರ್ಜೆಗೆ ಏರಿಸಬೇಕು. ಹಿಂದೆ ಅಕ್ರಮ ಸಕ್ರಮ ಟಿ.ಸಿ. ಎಂದು ಎಸ್ಟಿಮೆಂಟ್ ಮಾಡಿ ಈಗ ಎಲ್.ಟಿ. ಎಂದು ಮಾಡಿದ್ದು ಅವುಗಳಿಗೆ ಟಿ.ಸಿ. ಮಂಜೂರು ಮಾಡಬೇಕು. ರಟ್ಟಿಹಳ್ಳಿ ಹಾಗೂ ಹಿರೇಕೆರೂರು ತಾಲೂಕಿನ ಗ್ರೀಡ್ ಮಂಜೂರಾದ ಕಾಮಗಾರಿ ಬೇಗ ಮುಗಿಸಬೇಕು. ಮನೇಗೆ ಹೊಸದಾಗಿ ವಿದ್ಯುತ್ ಪಡೆಯುವ ಗ್ರಾಹಕರಿಗೆ ಮೀಟರ್‌ಗಳಿಗೆ ಐದು ಸಾವಿರ ಪಡೆಯುತ್ತಿದ್ದು, ಮೊದಲಿನ ದರ 850 ರು. ಗೆ ದರ ನಿಗದಿ ಮಾಡಬೇಕು. ಸರ್ವೆ ನಂಬರ್‌ನಲ್ಲಿ ಮನೆ ಕಟ್ಟಿದವರಿಗೆ ವಿದ್ಯುತ್‌ ಒದಗಿಸಬೇಕು. ಹಂಸಬಾವಿಯಲ್ಲಿ ಹೊಸದಾಗಿ ಗ್ರಿಡ್ ಉದ್ಘಾಟನೆಯಾಗಿದ್ದು, ನಿರಂತರ 7 ತಾಸು ವಿದ್ಯುತ್ ಕೊಡಬೇಕು ಎಂದು ಮನವಿಯಲ್ಲಿ ಅಗ್ರಹಿಸಿದರು,ಈ ಸಂದರ್ಭದಲ್ಲಿ ರೈತ ಸಂಘದ ತಾಲೂಕು ಅಧ್ಯಕ್ಷೆ ಪ್ರಭುಗೌಡ ಪ್ಯಾಟಿ, ಕಾರ್ಯದರ್ಶಿ ಗಂಗನಗೌಡ ಮುದಿಗೌಡ್ರ, ರಾಜ್ಯ ಸಂಚಾಲಕ ಮಾಲತೇಶ ಪೂಜಾರ, ಎಚ್.ಎಚ್.ಮುಲ್ಲಾ, ಮಹ್ಮದ್ ಗೌಸ್ ಪಾಟೀಲ, ಫಕೀರಪ್ಪ ಸಣ್ಣಗೌಡ್ರ, ಮರಿಗೌಡ ಪಾಟೀಲ, ಬಸನಗೌಡ ಕಿರವಾಡಿ, ಶೇಖಪ್ಪ ಹಿತ್ತಲಮನಿ, ಪ್ರಕಾಶ ಕರೇಗೌಡ್ರ, ರಾಜು ನೇಶ್ವಿ, ಮಂಜಪ್ಪ ಕೋಎಟಿಕೇರಿ, ಶಿವಪುತ್ರಪ್ಪ ಶಿರಸಂಗಿ,ಸಣ್ಣಗೌಡ ಚಿಕ್ಕಣಜಿ, ಸೋಮನಗೌಡ ಮರಿಗೌಡ್ರ.ಕಲ್ಲಪ್ಪ ಅಣ್ಣೆಗೇರಿ,ಉಕಪ್ಪ ಬಾಳಂಬೀಡ, ಸೋಮಪ್ಪ ಕಳೇರ,ನಾಗಪ್ಪ ಚಪ್ಪರದಹಳ್ಳಿ, ರಾಜು ಹುಚ್ಚಗೊಂಡರ, ಮಹೇಶ ಅಗಸನಹಳ್ಳಿ,ಹಾಲೇಶ ಕಿರೋಡಿ,ಶಿವಪುತ್ರಪ್ಪ ಕೋಡೇರ,ನಿಂಗಪ್ಪ ಹಂಚಿನಮನಿ,ರುದ್ರಪ್ಪ ಬಿಲ್ಲಳ್ಳಿ,ಮಾಲತೇಶ ಶಿಂಗಾಪುರ, ರಾಜು ಮಾಳಗೊಂಡರ, ಮಲ್ಲಿಕಾರ್ಜುನ ಬಳ್ಳಾರಿ, ಶಂಕ್ರಪ್ಪ ಶಿರಗಂಬಿ, ಶಂಭಣ್ಣ ಮುತ್ತಗಿ ಸೇರಿ ವಿವಿಧ ಗ್ರಾಮಗಳ ರೈತ ಮುಖಂಡರು ಇದ್ದರು.