ರೈಲ್ವೆ ನಿಲ್ದಾಣದಲ್ಲಿ ಇನ್ನಷ್ಟು ಸೌಲಭ್ಯಕ್ಕೆ ಆಗ್ರಹ, ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿಗೆ ಮನವಿ

| Published : May 22 2025, 11:47 PM IST

ರೈಲ್ವೆ ನಿಲ್ದಾಣದಲ್ಲಿ ಇನ್ನಷ್ಟು ಸೌಲಭ್ಯಕ್ಕೆ ಆಗ್ರಹ, ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿಗೆ ಮನವಿ
Share this Article
  • FB
  • TW
  • Linkdin
  • Email

ಸಾರಾಂಶ

ಗದಗ ರೈಲು ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಇನ್ನುಷ್ಟು ಸೌಲಭ್ಯಗಳು ಹಾಗೂ ಬೇಡಿಕೆಗಳ ಒದಗಿಸುವಂತೆ ಬೆಟಗೇರಿ ರೇಲ್ವೆ ಹೋರಾಟ ಸಮಿತಿಯಿಂದ ಸಮಿತಿ ಅಧ್ಯಕ್ಷ ಗಣೇಶಸಿಂಗ್ ಬ್ಯಾಳಿ ಅವರ ನೇತೃತ್ವದಲ್ಲಿ ಗುರುವಾರ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಹಾಗೂ ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಅವರಿಗೆ ಮನವಿ ಸಲ್ಲಿಸಲಾಯಿತು.

ಗದಗ: ಗದಗ ರೈಲು ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಇನ್ನುಷ್ಟು ಸೌಲಭ್ಯಗಳು ಹಾಗೂ ಬೇಡಿಕೆಗಳ ಒದಗಿಸುವಂತೆ ಬೆಟಗೇರಿ ರೇಲ್ವೆ ಹೋರಾಟ ಸಮಿತಿಯಿಂದ ಸಮಿತಿ ಅಧ್ಯಕ್ಷ ಗಣೇಶಸಿಂಗ್ ಬ್ಯಾಳಿ ಅವರ ನೇತೃತ್ವದಲ್ಲಿ ಗುರುವಾರ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಹಾಗೂ ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಅವರಿಗೆ ಮನವಿ ಸಲ್ಲಿಸಲಾಯಿತು. ಮನವಿಯಲ್ಲಿ ಗದಗ ಕೋಟುಮಚಗಿ-ನರೇಗಲ್ಲ- ಗಜೇಂದ್ರಗಡ ಇಲಕಲ್ಲ ಮಾರ್ಗವಾಗಿ ಕೃಷ್ಣಾನಗರಕ್ಕೆ, ಗದಗ ಯಲವಿಗಿ, ಗದಗ ಹರಪನಹಳ್ಳಿಗಳಿಗೆ ಹೊಸ ರೈಲು ಮಾರ್ಗಗಳು ಕಲ್ಪಿಸುವುದು, ಬೆಟಗೇರಿ ಕುರಹಟ್ಟಿ ಪೇಟೆ ಕಡೆಗೆ ಟಿಕೆಟ್ ಮತ್ತು ರಿಜರ್ವೇಶನ್ ಕೌಂಟರಗಳು, ಗದಗ ರೇಲ್ವೆ ಪೊಲೀಸ್ ಠಾಣೆಗೆ ಬೇಕಾಗುವಷ್ಟು ಸ್ಥಳಾವಕಾಶ ರೈಲು ನಿಲ್ದಾಣದಲ್ಲಿ ಕಲ್ಪಿಸುವುದು, ಹೊಸದಾಗಿ ಮಾಡಲಾಗಿರುವ 4 ಟಿಕೆಟ್ ಕೌಂಟರ್‌ಗಳಲ್ಲಿ 2 ಸಾಮಾನ್ಯ ದರ್ಜೆ ಕೌಂಟರಗಳು, 1 ತತ್ಕಾಲ್, 1 ಸ್ಲೀಪರ್ ಟಿಕೆಟ್‌ಗಳು ವಿತರಣೆಗೆ ಅವಕಾಶ ಹಾಗೂ ಅದಕ್ಕೆ ಬಿದ್ದರೆ ಹೆಚ್ಚುವರಿ ಸಿಬ್ಬಂದಿ ನಿಯೋಜಿಸುವದು, ನಿಲ್ದಾಣದ ಹೊರಗಡೆಗೆ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಅಟೋರಿಕ್ಷಾ ಸ್ಟ್ಯಾಂಡ್‌ಗೆ ಸ್ಥಳಾವಕಾಶ ಒದಗಿಸುವುದು ನಗರದ ಹೊರ ವಲಯದವರೆಗೆ ರೈಲು ಮಾರ್ಗ ಎಡ ಬಲ ಬದಿಯಲ್ಲಿ ಕಾಂಪೌಂಡ್ ಗೋಡೆ ನಿರ್ಮಿಸುವುದು ಸೇರಿದಂತೆ ಹಲವಾರು ಬೇಡಿಕೆಗಳ ಮನವಿಪತ್ರವನ್ನು ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಎಸ್.ವಿ. ಸುಲಾಖೆ, ಮನ್ಸೂಖಲಾಲ ಪುಣೇಕರ್, ನಾಮದೇವ ಜಗದಾಳೆ, ಶ್ರೀಮತಿ ಸಂಧ್ಯಾ ಗುಂಡಿ, ಲಿಂಗರಾಜ ಬಗಲಿ, ಎಂ.ಟಿ. ಕಬ್ಬಿನ, ಈರಣ್ಣ ಜ್ಯೋತಿ, ಜಂಬಣ್ಣ ಹುಡೇದ, ಬಸವರಾಜ ತಡಸದ, ಕೆ.ಆರ್. ಮೇರವಾಡೆ, ಅರ್ಜುನಸಾ ಮೇರವಾಡೆ, ಅಶೋಕ ಅಂಗಡಿ, ಆಂಜನೇಯ ಗುಂತಕಲ್ಲ, ಭೋಜಪ್ಪ ಹೆಗ್ಗಡಿ, ಯಲ್ಲಪ್ಪ ಕಾಂಬಳೇಕರ, ಈರಣ್ಣ ಪಟ್ಟಣಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.