ಸಾರಾಂಶ
ವಿಜಯಪುರ: ನರ್ಸಿಂಗ್ ಕೋರ್ಸ್ ಬೇಡಿಕೆ ಹೆಚ್ಚಾಗಿದ್ದು, ಈ ಕ್ಷೇತ್ರವೂ ಪವಿತ್ರವಾಗಿದೆ ಎಂದು ಕಾಂಗ್ರೆಸ್ ಮುಖಂಡ ಅಬ್ದುಲರಜಾಕ ಹೊರ್ತಿ ಹೇಳಿದರು. ನಗರದ ಅಲ್ ಅಮೀನ್ ಫಾತಿಮಾ ಸ್ಕೂಲ್ ಮತ್ತು ಕಾಲೇಜ ಆಫ್ ನರ್ಸಿಂಗ್ ಅಲ್ ಅಮೀನ್ ಮೆಡಿಕಲ್ ಕಾಲೇಜ ಹಾಗೂ ಆಸ್ಪತ್ರೆಯಲ್ಲಿ 19ನೇ ಬ್ಯಾಚ್ ನ ಡಿಪ್ಲೋಮಾ ನರ್ಸಿಂಗ್ ಮತ್ತು 25ನೇ ಬ್ಯಾಚ್ ನ ಬೇಸಿಕ್ ಬಿಎಸ್ಸಿ ನರ್ಸಿಂಗ್, 2019ನೇ ಬ್ಯಾಚ್ ನ ಬಿಎಸ್ಸಿ ನರ್ಸಿಂಗ್ ಹಾಗೂ 2021ನೇ ಬ್ಯಾಚ್ ನ ಪೋಸ್ಟ್ ಬೇಸಿಕ್ ಬಿಎಸ್ಸಿ ನರ್ಸಿಂಗ್ ಘಟಕೋತ್ಸವ ಉದ್ಘಾಟಿಸಿ ಮಾತನಾಡಿದರು.
ವಿಜಯಪುರ: ನರ್ಸಿಂಗ್ ಕೋರ್ಸ್ ಬೇಡಿಕೆ ಹೆಚ್ಚಾಗಿದ್ದು, ಈ ಕ್ಷೇತ್ರವೂ ಪವಿತ್ರವಾಗಿದೆ ಎಂದು ಕಾಂಗ್ರೆಸ್ ಮುಖಂಡ ಅಬ್ದುಲರಜಾಕ ಹೊರ್ತಿ ಹೇಳಿದರು. ನಗರದ ಅಲ್ ಅಮೀನ್ ಫಾತಿಮಾ ಸ್ಕೂಲ್ ಮತ್ತು ಕಾಲೇಜ ಆಫ್ ನರ್ಸಿಂಗ್ ಅಲ್ ಅಮೀನ್ ಮೆಡಿಕಲ್ ಕಾಲೇಜ ಹಾಗೂ ಆಸ್ಪತ್ರೆಯಲ್ಲಿ 19ನೇ ಬ್ಯಾಚ್ ನ ಡಿಪ್ಲೋಮಾ ನರ್ಸಿಂಗ್ ಮತ್ತು 25ನೇ ಬ್ಯಾಚ್ ನ ಬೇಸಿಕ್ ಬಿಎಸ್ಸಿ ನರ್ಸಿಂಗ್, 2019ನೇ ಬ್ಯಾಚ್ ನ ಬಿಎಸ್ಸಿ ನರ್ಸಿಂಗ್ ಹಾಗೂ 2021ನೇ ಬ್ಯಾಚ್ ನ ಪೋಸ್ಟ್ ಬೇಸಿಕ್ ಬಿಎಸ್ಸಿ ನರ್ಸಿಂಗ್ ಘಟಕೋತ್ಸವ ಉದ್ಘಾಟಿಸಿ ಮಾತನಾಡಿದರು. ನರ್ಸಿಂಗ್ ಕಲಿತ ನಂತರ ಯಾವ ವಿದ್ಯಾರ್ಥಿಗಳು ಕೆಲಸವಿಲ್ಲದೆ ಖಾಲಿ ಇರುವದಿಲ್ಲ. ವೈದ್ಯರು ಮಾಡದೆ ಇರುವಂತಹ ಕೆಲಸವನ್ನು ಶುಶ್ರೂಷಕರು ಮಾಡುತ್ತಾರೆ ಯಾವುದೇ ಜಾತಿ ಭೇದ ಭಾವವಿಲ್ಲದೆ ತಮ್ಮ ಸೇವೆಯನ್ನು ಸಮಾಜಕ್ಕೆ ನೀಡುತ್ತಿದ್ದಾರೆ ಎಂದರು. ಮೇಯರ್ ಮಹೇಜಬಿನ ಹೊರ್ತಿ, ರಿಯಾಜ್ ಫಾರೂಕಿ, ರಹಿಮಾ ಸೈಯದ, ಸಾದಿಕ ಅಹ್ಮದ ಶೇಖ ಮುಂತಾದವರು ಇದ್ದರು.