ಕಳೆದ ಮೂರು ತಿಂಗಳಿಂದ ಬಿಸಿಯೂಟ ತಯಾರಕರಿಗೆ ಕಳೆದ ಮೂರು ತಿಂಗಳಿಂದ ಗೌರವಧನ ಬಾಕಿ ಇರುವುದನ್ನು ಖಂಡಿಸಿ ತಹಸೀಲ್ದಾರ್‌ ಕಾರ್ಯಾಲಯದ ಮುಂದೆ ಪ್ರತಿಭಟನೆ ಕೈಗೊಂಡು ತಹಸೀಲ್ದಾರ್ ರವಿಕುಮಾರ ಕೊರವರ ಅವರಿಗೆ ಮನವಿ ಸಲ್ಲಿಸಲಾಯಿತು.

ಸವಣೂರು: ಕಳೆದ ಮೂರು ತಿಂಗಳಿಂದ ಬಿಸಿಯೂಟ ತಯಾರಕರಿಗೆ ಕಳೆದ ಮೂರು ತಿಂಗಳಿಂದ ಗೌರವಧನ ಬಾಕಿ ಇರುವುದನ್ನು ಖಂಡಿಸಿ ತಹಸೀಲ್ದಾರ್‌ ಕಾರ್ಯಾಲಯದ ಮುಂದೆ ಪ್ರತಿಭಟನೆ ಕೈಗೊಂಡು ತಹಸೀಲ್ದಾರ್ ರವಿಕುಮಾರ ಕೊರವರ ಅವರಿಗೆ ಮನವಿ ಸಲ್ಲಿಸಲಾಯಿತು.

ಮಧ್ಯಾಹ್ನ ಉಪಾಹಾರ ಯೋಜನೆಯಡಿ ಅಡುಗೆಯವರಾಗಿ ಕಾರ್ಯನಿರ್ವಹಿಸುತ್ತಿರುವ ಬಿಸಿಯೂಟ ತಯಾರಿಸುವವರಿಗೆ ಕಳೆದ ಮೂರು ತಿಂಗಳಿನಿಂದ ಗೌರವಧನ ಪಾವತಿಯಾಗಿಲ್ಲ. ಬಿಸಿಯೂಟ ತಯಾರಕರಿಗೆ ಮಾಸಿಕ 4,600 ಹಾಗೂ 4,700 ಗೌರವಧನ ದೊರೆಯುತ್ತಿದ್ದು, ಕಳೆದ ಮೂರು ತಿಂಗಳಿನಿಂದ ಗೌರವಧನ ಬಾಕಿ ಉಳಿದಿರುವುದರಿಂದ ಮನೆತನ ನಿರ್ವಹಣೆ ಹಾಗೂ ದಿನನಿತ್ಯದ ಅಗತ್ಯಗಳನ್ನು ಪೂರೈಸಲು ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಆದ್ದರಿಂದ ಬಿಸಿಯೂಟ ತಯಾರಕರಿಗೆ ಬಾಕಿ ಇರುವ ಮೂರು ತಿಂಗಳ ಗೌರವಧನವನ್ನು ಬಿಡುಗಡೆ ಮಾಡುವಂತೆ ಕೂಡಲೇ ಪಾವತಿಸುವಂತೆ ಅಗ್ರಹಿಸಿದರು.

ಈ ಸಂದರ್ಭದಲ್ಲಿ ಎಐಟಿಯುಸಿ ಉಪಾಧ್ಯಕ್ಷ ಹನುಮಂತಪ್ಪ ಕಬ್ಬಾರ, ಮಾದೇವಕ್ಕ ಡಂಬರಮತ್ತೂರ, ಶಕುಂತಲಾ ಸಜ್ಜನ, ಪ್ರೇಮಾ ಗುಂಡೂರ, ಜಾಕೀರಬಾನು ರಾಯಚೂರ, ರೇಖಾ ತಳವಾರ, ಪಾರ್ವತಿ ಅಪ್ಟೆ, ರೇಖಾ ಕುಲಕರ್ಣಿ ಹಾಗೂ ಇತರರು ಇದ್ದರು.