ಬಾಂಗ್ಲಾದಲ್ಲಿರುವ ಹಿಂದೂಗಳ ರಕ್ಷಣೆಗೆ ಆಗ್ರಹ

| Published : Aug 13 2024, 12:48 AM IST

ಬಾಂಗ್ಲಾದಲ್ಲಿರುವ ಹಿಂದೂಗಳ ರಕ್ಷಣೆಗೆ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಬಾಂಗ್ಲಾ ದೇಶದಲ್ಲಿ ನಡೆಯುತ್ತಿರುವ ಹಿಂದೂಗಳ ಮೇಲಿನ ದೌರ್ಜನ್ಯ ಖಂಡನೀಯ. ನಮ್ಮ ದೇಶ ಸರ್ವ ಧರ್ಮಗಳ ಆಶ್ರಯ ತಾಣವಾಗಿದ್ದು, ಎಲ್ಲಾ ಸಮುದಾಯಗಳನ್ನು ಪ್ರೀತಿಸುತ್ತೇವೆ. ಆದರೆ ನಮ್ಮ ನೆರೆಯ ದೇಶ ಬಾಂಗ್ಲಾದಲ್ಲಿ ಹಿಂದೂ ಧಾರ್ಮಿಕ ಕೇಂದ್ರಗಳಿಗೆ ಕೋಮುವಾದಿಗಳು ನುಗ್ಗಿ ದಾಂಧಲೆ ಮಾಡಿರುವುದು ಸರಿಯಲ್ಲ,

ಕನ್ನಡಪ್ರಭವಾರ್ತೆ ಚನ್ನರಾಯಪಟ್ಟಣ

ಪಟ್ಟಣದ ಕೆ.ಆರ್. ವೃತ್ತದ ಬಳಿ ಹಿಂದೂ ಹಿತರಕ್ಷಣಾ ಸಮಿತಿ ವತಿಯಿಂದ ಬಾಂಗ್ಲಾ ದೇಶದಲ್ಲಿರುವ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಅವರ ಸುರಕ್ಷತೆಗೆ ಕ್ರಮ ಕೈಗೊಳ್ಳಬೇಕಾಗಿ ಆಗ್ರಹಿಸಿ ಜನ ಜಾಗೃತಿಗೋಸ್ಕರ ಮಾನವ ಸರಪಳಿ ಹಮ್ಮಿಕೊಳ್ಳಲಾಗಿತ್ತು.

ಕತ್ತರಿಘಟ್ಟದ ಚಂದ್ರಶೇಖರ ಗುರೂಜಿ, ನುಗ್ಗೇಹಳ್ಳಿ ಮಹೇಶ್ವರ ಸ್ವಾಮೀಜಿ, ಶಕ್ತಿಮಠದ ಬಸವೇಶ್ವರ ಚೈತನ್ಯ ಸ್ವಾಮೀಜಿ ನೇತೃತ್ವ ವಹಿಸಿದ್ದರು.

ಬಿಜೆಪಿ ಮುಖಂಡ ಅಣತಿ ಆನಂದ್ ಮಾತನಾಡಿ, ಬಾಂಗ್ಲಾ ದೇಶದಲ್ಲಿ ನಡೆಯುತ್ತಿರುವ ಹಿಂದೂಗಳ ಮೇಲಿನ ದೌರ್ಜನ್ಯ ಖಂಡನೀಯ. ನಮ್ಮ ದೇಶ ಸರ್ವ ಧರ್ಮಗಳ ಆಶ್ರಯ ತಾಣವಾಗಿದ್ದು, ಎಲ್ಲಾ ಸಮುದಾಯಗಳನ್ನು ಪ್ರೀತಿಸುತ್ತೇವೆ. ಆದರೆ ನಮ್ಮ ನೆರೆಯ ದೇಶ ಬಾಂಗ್ಲಾದಲ್ಲಿ ಹಿಂದೂ ಧಾರ್ಮಿಕ ಕೇಂದ್ರಗಳಿಗೆ ಕೋಮುವಾದಿಗಳು ನುಗ್ಗಿ ದಾಂಧಲೆ ಮಾಡಿರುವುದು ಸರಿಯಲ್ಲ, ಹಿಂದೂಗಳು ಶಾಂತಿಪ್ರಿಯರು, ಅವರ ಧಾರ್ಮಿಕತೆಗೆ ದಕ್ಕೆ ಉಂಟಾದರೆ ಭಾರತೀಯರಾದ ನಾವು ಸಹಿಸುವುದಿಲ್ಲ, ಕೂಡಲೇ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಮಧ್ಯ ಪ್ರವೇಶಿಸಿ ಹಿಂದೂಗಳ ರಕ್ಷಣೆಗೆ ಮುಂದಾಗಬೇಕು ಹಾಗೂ ಇದೇ ರೀತಿ ಬಾಂಗ್ಲಾದಲ್ಲಿ ಹಿಂದೂಗಳ ಹತ್ಯೆ ಮುಂದುವರೆದರೆ ಹಿಂದೂಗಳು ಉಗ್ರ ಹೋರಾಟ ನಡೆಸುತ್ತೇವೆ ಎಂದರು.

ಆರ್‌ಎಸ್‌ಎಸ್ ಮುಖಂಡರಾದ ಗಜಾನನ ಮನೋಹರ್, ಗಿರೀಶ್ ನಿಂಬೇಹಳ್ಳಿ, ಧರಣಿ ನಾಗೇಶ್, ಜಗದೀಶ್, ಹರೀಶ್‌ ಮೆಡಿಕಲ್, ಲೋಕೇಶ್ ಹಡೇನಹಳ್ಳಿ, ಓಬಳಾಪುರ ರಂಗೇಗೌಡ, ರವಿದಮ್ಮನಿಂಗಲ, ಪ್ರಸನ್ನವಡ್ಡರಹಳ್ಳಿ, ಶರತ್, ದಿನೇಶ್, ರಘುಗೌಡ, ನವೀನ್, ಜಾಂಟಿ, ರುದ್ರೇಶ್, ದುಶ್ಯಂತ್, ರೂಪೇಶ್, ಚೇತನ್, ವೆಂಕಟೇಶಚಾರ್, ಮೂರ್ತಿ, ಗೋಪಿ ರೈತ ಸಂಘದ ಕುಮಾರ್, ಮೀಸೆಮಂಜಣ್ಣ, ತಾರಾ, ಛಾಯಕೃಷ್ಣ, ಮತ್ತಿತರಿದ್ದರು.