ಸಾರಾಂಶ
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತಹಸೀಲ್ದಾರರ ಮೂಲಕ ಸಿಎಂಗೆ ಮನವಿ ಸಲ್ಲಿಸಲಾಯಿತು.
ಸಿದ್ದಾಪುರ: 7ನೇ ವೇತನ ಆಯೋಗದ ಅನುಷ್ಠಾನದಲ್ಲಿ ೨೦೨೨ರ ಜು. 1ರಿಂದ ೨೦೨೪ರ ಜು. 31ರ ಅವಧಿಯಲ್ಲಿ ನಿವೃತ್ತರಾದ ನೌಕರರಿಗೆ ಪರಿಷ್ಕೃತ ವೇತನ ಶ್ರೇಣಿಯಲ್ಲಿ ನಿವೃತ್ತಿ ಸೌಲಭ್ಯ ಒದಗಿಸಲು ಆಗ್ರಹಿಸಿ ಕರ್ನಾಟಕ ನಿವೃತ್ತರ ವೇದಿಕೆಯ ಸ್ಥಳೀಯ ಪದಾಧಿಕಾರಿಗಳು ಮುಖ್ಯಮಂತ್ರಿಗಳಿಗೆ ತಹಸೀಲ್ದಾರರ ಮೂಲಕ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಕರ್ನಾಟಕ ನಿವೃತ್ತರ ವೇದಿಕೆ ಸ್ಥಳೀಯ ಸಂಚಾಲಕ ಎಂ.ಎಸ್. ಭಟ್, ಎನ್.ಐ. ಗೌಡ ಹಾಗೂ ರಾಜು ನಾಯ್ಕ, ಎಂ.ಎಂ. ಅಂಬಿಗ, ಶ್ರೀಮತಿ ಭಟ್, ಸವಿತಾ ಹೆಗಡೆ, ಶ್ರೀಮತಿ ವಿ. ಭಟ್, ಯಶವಂತ ಅಪ್ಪಿಬೈಲ್, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಗೌಡರ್ ಮುಂತಾದವರು ಪಾಲ್ಗೊಂಡಿದ್ದರು.ಸಂಚಾಲಕ ಎಂ.ಎಸ್. ಭಟ್, ಎನ್.ಐ. ಗೌಡ ನೀಡಿದ ಮನವಿಯನ್ನು ಸ್ವೀಕರಿಸಿದ ತಹಸೀಲ್ದಾರ್ ಎಂ.ಆರ್. ಕುಲಕರ್ಣಿ ಸ್ವೀಕರಿಸಿದರು.19ರಂದು ನಿವೃತ್ತ ನೌಕರರಿಂದ ಮನವಿ ನೀಡಲು ನಿರ್ಧಾರ
ಭಟ್ಕಳ: 7ನೇ ವೇತನದ ಜಾರಿಯಲ್ಲಿ ನಿವೃತ್ತ ನೌಕರರಿಗೆ ಆದ ನ್ಯೂನತೆಯನ್ನು ಸರಿಪಡಿಸಲು ಸರ್ಕಾರದ ಮೇಲೆ ಒತ್ತಡವನ್ನು ತರಲು ಸೆ. 19ರಂದು ತಾಲೂಕು ನಿವೃತ್ತ ಸರ್ಕಾರಿ ನೌಕರರ ಸಂಘದಿಂದ ಇಲ್ಲಿನ ಸಹಾಯಕ ಆಯುಕ್ತರ ಮೂಲಕ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಲು ತೀರ್ಮಾನಿಸಲಾಗಿದೆ.ತಾಲೂಕಿನ ಎಲ್ಲ ನಿವೃತ್ತ ನೌಕರರ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು, ನಿವೃತ್ತ ನೌಕರರು ಸೆ. 19ರಂದು ಬೆಳಗ್ಗೆ ೧೦ ಗಂಟೆಯೊಳಗೆ ಸಂಘದ ಕಚೇರಿಯಲ್ಲಿ ಹಾಜರಿದ್ದು, ಬೆಳಗ್ಗೆ ೧೦.೩೦ ಗಂಟೆಗೆ ಸಹಾಯಕ ಆಯುಕ್ತರ ಕಚೇರಿಗೆ ತೆರಳಿ ಮುಖ್ಯಮಂತ್ರಿ ಅವರಿಗೆ ಸಲ್ಲಿಸಲಾಗುವುದು ಎಂದು ಸಂಘದ ಅಧ್ಯಕ್ಷ ವಿ.ಡಿ. ಆಚಾರ್ಯ, ಉಪಾಧ್ಯಕ್ಷ ಬಿ.ಐ. ಶೇಖ ಹಾಗೂ ಕಾರ್ಯದರ್ಶಿ ಕೆ. ಆರ್. ನಾಯ್ಕ ತಿಳಿಸಿದ್ದಾರೆ.