ಲೇಖಕ ರವಿ ಹಂಜ್ ಅವರು ರಚಿಸಿದ `ಬಸವ ಮಂಟಪ' ಕೃತಿಯಲ್ಲಿ ಕರ್ನಾಟಕ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಕುರಿತಾದ ಅವಹೇಳನಕಾರಿ ಅಂಶಗಳನ್ನು ತೀವ್ರವಾಗಿ ಖಂಡಿಸಿ, ಲೇಖಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಹಾವೇರಿಯ ಬಸವ ಬಳಗ, ಬಸವ ದಳ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಅಖಿಲ ಭಾರತ ಲಿಂಗಾಯತ ಮಹಾಸಭಾ, ಅಕ್ಕನ ಬಳಗ, ಹಾವೇರಿ ಶಹರ ಬಣಜಿಗ ಕ್ಷೇಮಾಭಿವೃದ್ಧಿ ಸಂಘ ಇತರ ಬಸವಾಭಿಮಾನಿಗಳ ಸಂಘಟನೆಗಳಿಂದ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಹಾವೇರಿ: ಲೇಖಕ ರವಿ ಹಂಜ್ ಅವರು ರಚಿಸಿದ `ಬಸವ ಮಂಟಪ'' ಕೃತಿಯಲ್ಲಿ ಕರ್ನಾಟಕ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಕುರಿತಾದ ಅವಹೇಳನಕಾರಿ ಅಂಶಗಳನ್ನು ತೀವ್ರವಾಗಿ ಖಂಡಿಸಿ, ಲೇಖಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಹಾವೇರಿಯ ಬಸವ ಬಳಗ, ಬಸವ ದಳ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಅಖಿಲ ಭಾರತ ಲಿಂಗಾಯತ ಮಹಾಸಭಾ, ಅಕ್ಕನ ಬಳಗ, ಹಾವೇರಿ ಶಹರ ಬಣಜಿಗ ಕ್ಷೇಮಾಭಿವೃದ್ಧಿ ಸಂಘ ಇತರ ಬಸವಾಭಿಮಾನಿಗಳ ಸಂಘಟನೆಗಳಿಂದ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಲೇಖಕ ರವಿ ಹಂಜ್ ಬಸವಣ್ಣನವರು ಹಾಗೂ ಲಿಂಗಾಯತರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದು, ಅದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ, ಕೂಡಲೇ ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಹಾವೇರಿ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಬಸವ ಬಳಗದ ಅಧ್ಯಕ್ಷ ವಿ.ಜಿ. ಯಳಗೇರಿ, ವಕೀಲರಾದ ಕೆ.ಸಿ. ಪಾವಲಿ, ಪ್ರಭು ಬೆನ್ನೂರ್, ಮುರಿಗೆಪ್ಪ ಕಡೆಕೊಪ್ಪ, ಮಲ್ಲಿಕಾರ್ಜುನ ಹಿಂಚಿಗೇರಿ, ಶಿವಬಸಪ್ಪ ಮುದ್ದಿ, ಉಳಿವೆಪ್ಪ ಪಂಪಣ್ಣವರ, ಶಿವಯೋಗಿ ಬೆನ್ನೂರ, ಚಂದ್ರಶೇಖರ್ ಮಾಳಗಿ, ಎನ್.ಬಿ. ಕಾಳೆ, ಬಣಕಾರ, ಶಂಕ್ರಪ್ಪ ಜಾಯಗೊಂಡ, ಇಂದೂಧರ ಯರೇಸೀಮೆ, ಗಂಗಣ್ಣ ಮಾಸೂರು, ಜಗದೀಶ್ ಹತ್ತಿಕೋಟಿ, ನಾಗೇಂದ್ರಪ್ಪ ಮಂಡಕ್ಕಿ, ಚನ್ನಬಸವಣ್ಣ ರೊಡ್ಡನವರ, ನಾಗರಾಜ ವಿಭೂತಿ, ಪ್ರಭುಗೌಡ ಬಸನಗೌಡ, ಮಾಂತಣ್ಣ ಮಾಸೂರ, ಸಿದ್ದಲಿಂಗಪ್ಪ ಮಹಾರಾಜ ಪೇಟೆ, ಶಿವರಾಜ್ ಕಾಯಕದ, ಶಿವಬಸಪ್ಪ ಚೌಶೆಟ್ಟಿ ಶಿವಯೋಗಿ ಅಂಗಡಿ, ಜಗದೀಶ ಅಂಕಲಕೋಟಿ, ಸಿ.ಬಿ. ಇಟಗಿ, ಶಿವಾನಂದ ಅಂಗಡಿ, ಮಾಲತೇಶ ಕರಿಮಣ್ಣವರ, ಯು.ಜೆ. ಶಶಿಧರ್, ಬಸವರಾಜ್ ಮುಳಗುಂದ, ವಿಶ್ವನಾಥ ಅಂಗಡಿ, ಮಾಂತೇಶ ಯಡ್ರಾಮಿ, ಕುಬಸದ ವಾನಂದ ಹೊಸಮನಿ, ಗಿರೀಶ್ ಶೆಟ್ಟರ್, ಜಿ.ಬಿ. ನಾವಿ, ಜಯಶ್ರೀ ಶಿವಪುರ, ಚಂಪಾ ಹುಣಸಿಕಟ್ಟಿ, ಕಮಲ ಬುಕ್ಕಶೆಟ್ಟಿ, ರಾಜೇಶ್ವರಿ ಬಿಷ್ಟನಗೌಡ್ರು, ಕಾವ್ಯ ಅಂಗಡಿ, ಕವಿತಾ ಕಾಯಕದ ಇತರರಿದ್ದರು