ಸಾರಾಂಶ
ಮಾದಕ ವಸ್ತು ಮಾರಾಟ ಹಾಗೂ ಬಳಕೆಗೆ ಕಡಿವಾಣ ಹಾಕುವಂತೆ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ವತಿಯಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿ ಆಗ್ರಹಿಸಲಾಯಿತು.
ಉಡುಪಿ: ಉಡುಪಿ ಜಿಲ್ಲೆಯಲ್ಲಿ ಮಾದಕ ವಸ್ತು ಮಾರಾಟ ಹಾಗೂ ಬಳಕೆಗೆ ಕಡಿವಾಣ ಹಾಕುವಂತೆ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ವತಿಯಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿ ಆಗ್ರಹಿಸಲಾಯಿತು.
ಜಿಲ್ಲೆಯಲ್ಲಿ ಮಾದಕ ವಸ್ತುಗಳ ಮಾರಾಟ ಹಾಗೂ ಬಳಕೆ ಹೆಚ್ಚುತ್ತಿದ್ದು, ಅದಕ್ಕೆ ಬಲಿಯಾದ ಎಷ್ಟೋ ಕುಟುಂಬಗಳು ಬೀದಿಗೆ ಬಂದಿದೆ. ಇದಕ್ಕೆ ಬಲಿಯಾಗಿರುವ ಮಕ್ಕಳ ತಂದೆತಾಯಿಯರ ರೋದನ ಕೆಳತೀರದು. ಆದ್ದರಿಂದ ಮಾದಕ ದೃವ್ಯ ಜಾಲ ಸುಶಿಕ್ಷಿತರ ಜಿಲ್ಲೆಯನ್ನು ಬಲಿ ತೆಗೆದುಕೊಳ್ಳುವ ಮೊದಲು ಬುಡ ಸಮೇತ ಕಿತ್ತುಹಾಕಿ ಸ್ವಸ್ಥ ಹಾಗೂ ಅಪರಾಧರಹಿತ ಸಮಾಜವನ್ನು ನಿರ್ಮಿಸಬೇಕು ಎಂದು ಆಗ್ರಹಿಸಲಾಯಿತು.ವೇದಿಕೆಯ ಕಾರ್ಕಳ ತಾಲೂಕು ಅಧ್ಯಕ್ಷ ಹನೀಫ್ ಈ ಸಂದರ್ಭ ಮನವಿ ಮಾಡಿದರು.ಇತ್ತೀಚೆಗೆ ಹನಿಟ್ರ್ಯಾಪ್ ಜಾಲಕ್ಕೆ ಸಿಲುಕಿದ ಕಾರ್ಕಳದ ನಿಟ್ಟೆಯ ಅಭಿಷೇಕ್ ಆಚಾರ್ಯ ಮರ್ಯಾದೆಗಂಜಿ ಆತ್ಮಹತ್ಯೆಗೈದ ಘಟನೆಯನ್ನೂ ಪೊಲೀಸ್ ವರಿಷ್ಠಾಧಿಕಾರಿ ಗಮನ ಸೆಳೆಯಲಾಯಿತು ಮತ್ತು ನಿಷ್ಪಕ್ಷಪಾತ ತನಿಖೆ ನಡೆಸಿ ಈ ಜಾಲದ ಸತ್ಯಾಸತ್ಯತೆ ಜನತೆಯ ಮುಂದಿಡಬೇಕು ಎಂದು ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ್ ನಾಯ್ಕ್ ಅವರಿಗೆ ಮನವಿ ನೀಡಲಾಯಿತು.
ಸಂಘಟನೆ ಗೌರವಾಧ್ಯಕ್ಷ ಅನ್ಸಾರ್ ಅಹಮದ್, ಜಿಲ್ಲಾಧ್ಯಕ್ಷ ಸುಜಯ್ ಪೂಜಾರಿ, ಮಹಿಳಾ ಜಿಲ್ಲಾಧ್ಯಕ್ಷ ಜ್ಯೋತಿ ಸೇರಿಗಾರ್, ಉಪಾಧ್ಯಕ್ಷ ಸೈಯದ್ ನಿಜಾಮುದ್ದೀನ್, ಮಹಿಳಾ ಉಪಾಧ್ಯಕ್ಷೆ ದೇವಕಿ ಬಾರ್ಕೂರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನುಷಾ ಆಚಾರ್ ಪಳ್ಳಿ, ಗೌರವ ಸಲಹೆಗಾರ ಜಯ ಪ್ರಕಾಶ್ ಶೆಟ್ಟಿ, ಸಂಘಟನಾ ಕಾರ್ಯದರ್ಶಿ ನಾಗರಾಜ್, ಸದಸ್ಯರಾದ ಮಂಜುನಾಥ್, ಚಂದ್ರಕಲಾ, ಕಾರ್ಕಳ ತಾಲೂಕು ಅಧ್ಯಕ್ಷ ಹನೀಫ್, ಗೌರವಾಧ್ಯಕ್ಷ ಷಾ ನವಾಜ್ ಬೆಂಗ್ಗುಡ್ಡೆ, ಉಪಾಧ್ಯಕ್ಷರಾದ ರಿಝ್ವಾನ್, ಸೈಯ್ಯದ್ ಇಕ್ಬಾಲ್, ಇಮ್ತಿಯಾಝ್, ಪ್ರಧಾನ ಕಾರ್ಯದರ್ಶಿ ಸುರೇಶ್ ಆಚಾರ್ಯ, ಸಂಘಟನಾ ಅಧ್ಯಕ್ಷ ಮನಾವರ್ ಕೈಕಂಬ, ಸಂಘಟನಾ ಕಾರ್ಯದರ್ಶಿ ಅಬೂಬಕ್ಕರ್ ಮೊದಲಾದವರು ಉಪಸ್ಥಿತರಿದ್ದರು.;Resize=(128,128))
;Resize=(128,128))