ಲಕ್ಷೇಶ್ವರ ತಾಲೂಕು ಕೇಂದ್ರವಾಗಿ 10 ವರ್ಷ ಕಳೆದಿವೆ. ಆದರೂ ತಾಲೂಕಿನಲ್ಲಿ ಒಂದೂ ಸರ್ಕಾರಿ ಪದವಿ ಕಾಲೇಜು ಇಲ್ಲದೇ ವಿದ್ಯಾರ್ಥಿಗಳು ಪರದಾಡುವಂತಾಗಿದೆ.

ಲಕ್ಷ್ಮೇಶ್ವರ: ಪಟ್ಟಣದಲ್ಲಿ ಸರ್ಕಾರಿ ಪದವಿ ಕಾಲೇಜು ಆರಂಭಿಸುವಂತೆ ಆಗ್ರಹಿಸಿ ಹೊಸ ಬಸ್ ನಿಲ್ದಾಣ ಎದುರು ರಾಜ್ಯ ಹೆದ್ದಾರಿ ತಡೆದು ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ತಹಸೀಲ್ದಾರ್ ಎಂ. ಧನಂಜಯ ಅವರಿಗೆ ಮನವಿ ಸಲ್ಲಿಸಿದರು.

ಎಬಿವಿಪಿ ಜಿಲ್ಲಾ ಸಂಚಾಲಕ ಅಭಿಷೇಕ ಉಮಚಗಿ ಮಾತನಾಡಿ, ಲಕ್ಷೇಶ್ವರ ತಾಲೂಕು ಕೇಂದ್ರವಾಗಿ 10 ವರ್ಷ ಕಳೆದಿವೆ. ಆದರೂ ತಾಲೂಕಿನಲ್ಲಿ ಒಂದೂ ಸರ್ಕಾರಿ ಪದವಿ ಕಾಲೇಜು ಇಲ್ಲದೇ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ತಾಲೂಕಿನಲ್ಲಿ ಸಾವಿರಾರು ಬಡ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಈ ಕುರಿತು ಎಬಿವಿಪಿ ಹಲವು ಬಾರಿ ಮನವಿ ಮಾಡಿದರೂ ಸಂಬಂಧಪಟ್ಟ ಇಲಾಖೆ ಗಮನಹರಿಸಿಲ್ಲ. ರಾಜ್ಯ ಸರ್ಕಾರ 2026- 27ನೇ ಶೈಕ್ಷಣಿಕ ಅವಧಿ ಪ್ರಾರಂಭವಾಗುವ ಮೊದಲು ಸರ್ಕಾರಿ ಪದವಿ ಕಾಲೇಜನ್ನು ಹೊಸದಾಗಿ ಪ್ರಾರಂಭಿಸಿ ತರಗತಿಗಳು ಪ್ರಾರಂಭಿಸಬೇಕು. ಪದವಿ ಕಾಲೇಜನ್ನು ಆರಂಭಿಸದೇ ಹೋದಲ್ಲಿ ಲಕ್ಷ್ಮೇಶ್ವರ ಬಂದ್ ಕರೆ ನೀಡಿ ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.ಎಬಿವಿಪಿ ಕಾರ್ಯಕರ್ತೆ ಅನು ಅಣ್ಣಿಗೇರಿ ಮಾತನಾಡಿ, ಈ ಭಾಗದಲ್ಲಿ ಹಲವಾರು ವರ್ಷಗಳಿಂದ ಸರ್ಕಾರಿ ಪದವಿ ಕಾಲೇಜಿಗೆ ಬೇಡಿಕೆ ಇದ್ದು, ವಿದ್ಯಾರ್ಥಿನಿಯರು ಪದವಿ ಶಿಕ್ಷಣಕ್ಕಾಗಿ ದೂರದ ಊರುಗಳಿಗೆ ಹೋಗಿ ಕಲಿಯುವ ಸಂದರ್ಭದಲ್ಲಿ ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ವಿದ್ಯಾರ್ಥಿನಿಯರಿಗೆ ಬಸ್‌ನಲ್ಲಿ ಹೋಗಿ ಪದವಿ ಶಿಕ್ಷಣ ಕಲಿಯಲು ಹಲವಾರು ತೊಂದರೆ ಆಗಿದ್ದು, ಆದಷ್ಟು ಬೇಗನೆ ಸರ್ಕಾರಿ ಪದವಿ ಕಾಲೇಜ ತೆರೆಯಬೇಕು ಎಂದು ಆಗ್ರಹಿಸಿದರು.

ಸಂಚಾಲಕ ವಿನಾಯಕ ಕುಂಬಾರ, ಸಾಗರ, ಮೆಹರವಾಡೆ, ಪ್ರೀತಮ್‌ ರಾಜೋಳಿ, ವಿನಯ ಸಪ್ಪಡ್ಲ, ರತ್ನಾ ಕಮತದ, ಸವಿತಾ ಕರೆಯತ್ತಿನ, ಚೈತ್ರಾ ಕೊರಕೇರಿ, ತೇಜಶ್ವಿನಿ ಅರಳಿ, ಭಾಗ್ಯ ವಡವಿ, ಅಪೇಕ್ಷಾ ಶೇರಸೂರಿ, ಅಪೂರ್ವ ಹವಳದ, ಜ್ಯೋತಿ ಬಾಡಗಿ, ರಮ್ಯಾ ಮಹೇಂದ್ರಕರ, ರಾಜೇಶ್ವರಿ ಪಟ್ಟೆದ ಸೇರಿದಂತೆ ಅನೇಕರು ಇದ್ದರು.ಪ್ರೊ. ಸಿ.ಡಿ. ಪಾಟೀಲರ ಬದುಕು- ಬರಹ ಕುರಿತು ಉಪನ್ಯಾಸ

ಮುಂಡರಗಿ: 30 ವರ್ಷ ಸಸ್ಯಶಾಸ್ತ್ರದ ಪ್ರಾಧ್ಯಾಪಕರಾಗಿ ರಾಯಚೂರಿನಲ್ಲಿ ಸೇವೆ ಸಲ್ಲಿಸುವ ಮೂಲಕ ರಾಯಚೂರು ವಿಜ್ಞಾನ ಕೇಂದ್ರವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಪರಿಚಯಿಸಿದ ಕೀರ್ತಿ ವಿಜ್ಞಾನ ಲೇಖಕ ಸಿ.ಡಿ. ಪಾಟೀಲ ಅವರದಾಗಿದೆ ಎಂದು ವಿಶ್ರಾಂತ ಪ್ರಾ. ಸಿ.ಎಸ್. ಅರಸನಾಳ ತಿಳಿಸಿದರು.ಸ್ಥಳೀಯ ಅನ್ನದಾನೀಶ್ವರ ಕನ್ನಡ ಸಾಹಿತ್ಯ ಭವನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಮಾತೋಶ್ರೀ ಸಾವಿತ್ರಮ್ಮ ಚಾರಿಟೆಬಲ್ ಟ್ರಸ್ಟ್ ಹಮ್ಮಿಕೊಂಡಿರುವ ತಾಲೂಕು ಸಾಹಿತಿಗಳ ಕೃತಿಗಳ ಅವಲೋಕನ ಕಾರ್ಯಕ್ರಮದ ಉಪನ್ಯಾಸ- 3ರಲ್ಲಿ ವಿಜ್ಞಾನ ಲೇಖಕ ಪ್ರೊ. ಸಿ.ಡಿ. ಪಾಟೀಲರ ಬದುಕು- ಬರಹ ಕುರಿತು ಉಪನ್ಯಾಸ ನೀಡಿದರು.ಸಿ.ಡಿ. ಪಾಟೀಲ ಅವರು ರಚಿಸಿದ ಮಕ್ಕಳಿಗೆ ಸರಳವಾಗಿ ವಿಜ್ಞಾನದ ಚಟುವಟಿಕೆಗಳನ್ನು ಮಾಡುವ ನಿಟ್ಟಿನಲ್ಲಿ 101 ವಿಜ್ಞಾನ ಪ್ರಯೋಗಗಳು ಎಂಬ ಪುಸ್ತಕವು ವಿದ್ಯಾರ್ಥಿಗಳು ವಿಜ್ಞಾನ ಮಾದರಿಯನ್ನು ತಯಾರಿಸಲು ಉಪಯುಕ್ತವಾಗಿದೆ ಎಂದರು.

ಪ್ರಗತಿಪರ ರೈತ ಈಶ್ವರಪ್ಪ ಹಂಚಿನಾಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಿಜ್ಞಾನ ಲೇಖಕ ಪ್ರೊ. ಸಿ.ಡಿ. ಪಾಟೀಲ ಮಾತನಾಡಿದರು. ಕಾರ್ಯಕ್ರಮದಲ್ಲಿ ಪತ್ರಕರ್ತ ಕವಿ ಬಂಕಾಪೂರ ಅವರನ್ನು ಸನ್ಮಾನಿಸಲಾಯಿತು. ತಾಲೂಕು ಕಸಾಪ ಅಧ್ಯಕ್ಷ ಅಧ್ಯಕ್ಷ ಪ್ರೊ. ಎಂ.ಜಿ. ಗಚ್ಚಣ್ಣವರ ಅಧ್ಯಕ್ಷತೆ ವಹಿಸಿದ್ದರು.ಕಾರ್ಯಕ್ರಮದಲ್ಲಿ ಅಂದಾನಗೌಡ ಕುಲಕರ್ಣಿ, ಆರ್.ವೈ. ಪಾಟೀಲ, ಕೃಷ್ಣಾ ಸಾಹುಕಾರ, ಡಾ. ಬಿ.ಜಿ. ಜವಳಿ, ಆರ್.ಕೆ. ರಾಯನಗೌಡ್ರ, ಎಂ.ಎಸ್. ಹೊಟ್ಟಿನ, ಮಂಜುನಾಥ ಮುಧೋಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ರಮೇಶಗೌಡ ಪಾಟೀಲ ಸ್ವಾಗತಿಸಿದರು. ಪ್ರೊ. ಆರ್.ಎಲ್. ಪೊಲೀಸಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಕ್ಕಮ್ಮ ಕೊಟ್ಟೂರಶೆಟ್ಟರ ನಿರೂಪಿಸಿದರು. ವೀಣಾ ಪಾಟೀಲ ವಂದಿಸಿದರು.