ಕನ್ನಡ ನಾಮಫಲಕ ಅಳವಡಿಕೆಗೆ ಒತ್ತಾಯ

| Published : Oct 15 2025, 02:07 AM IST

ಸಾರಾಂಶ

ಸರ್ಕಾರದ ಆಡಳಿತ ಭಾಷೆ ಕನ್ನಡ ಆಗಿರುವುದರಿಂದ ಕರ್ನಾಟಕದಲ್ಲಿ ವ್ಯವಹಾರಿಕ ನಾಮಫಲಕಗಳಲ್ಲಿ ಶೇ. 40ರಷ್ಟು ಅನ್ಯಭಾಷೆಯ ಅಕ್ಷರ ಕಾಣಿಸಬೇಕು. ಶೇ. 60ರಷ್ಟು ಕನ್ನಡ ಅಕ್ಷರಗಳ ಪದ ಬಳಕೆಯಾಗಬೇಕೆಂದು ಸರ್ಕಾರ ಆದೇಶಿಸಿದರೂ ಶೇ. 80ರಷ್ಟು ಅಂಗಡಿಗಳ ಮಾಲೀಕರು ಅನ್ಯಭಾಷೆಯಲ್ಲಿಯೇ ನಾಮಫಲಕ ಹಾಕಿಸಿ ಕನ್ನಡ ಭಾಷೆಗೆ ಅವಮಾನ ಮಾಡುತ್ತಿದ್ದಾರೆ.

ಮುಂಡರಗಿ: ಕನ್ನಡ ನಾಮಫಲಕಗಳನ್ನೇ ಬಳಕೆ ಮಾಡಬೇಕೆಂದು ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ಮಂಗಳವಾರ ಪುರಸಭೆ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿ ಒತ್ತಾಯಿದೆ.

ಸರ್ಕಾರದ ಆಡಳಿತ ಭಾಷೆ ಕನ್ನಡ ಆಗಿರುವುದರಿಂದ ಕರ್ನಾಟಕದಲ್ಲಿ ವ್ಯವಹಾರಿಕ ನಾಮಫಲಕಗಳಲ್ಲಿ ಶೇ. 40ರಷ್ಟು ಅನ್ಯಭಾಷೆಯ ಅಕ್ಷರ ಕಾಣಿಸಬೇಕು. ಶೇ. 60ರಷ್ಟು ಕನ್ನಡ ಅಕ್ಷರಗಳ ಪದ ಬಳಕೆಯಾಗಬೇಕೆಂದು ಸರ್ಕಾರ ಆದೇಶಿಸಿದರೂ ಶೇ. 80ರಷ್ಟು ಅಂಗಡಿಗಳ ಮಾಲೀಕರು ಅನ್ಯಭಾಷೆಯಲ್ಲಿಯೇ ನಾಮಫಲಕ ಹಾಕಿಸಿ ಕನ್ನಡ ಭಾಷೆಗೆ ಅವಮಾನ ಮಾಡುತ್ತಿದ್ದಾರೆ.

ಕಳೆದ ವರ್ಷವೂ ತಮ್ಮ ಸಂಘಟನೆಯಿಂದ ಪುರಸಭೆಗೆ ಮನವಿ ಸಲ್ಲಿಸಿದಾಗ ಅದಕ್ಕೆ ಸ್ಪಂದಿಸಿ ತೆರವುಗೊಳಿಸಿತ್ತು. ಇದೀಗ ಮತ್ತೆ ಎಲ್ಲೆಡೆ ಅನ್ಯಭಾಷೆ ನಾಮಫಲಕಗಳು ಕಂಡುಬರುತ್ತಿದ್ದು, ಪುರಸಭೆ ಮತ್ತೊಮ್ಮೆ ತೆರವು ಕಾರ್ಯಕ್ಕೆ ಮುಂದಾಗಬೇಕೆಂದು ಮನವಿಯಲ್ಲಿ ಒತ್ತಾಯಿಸಿದೆ.

ಜನಜಾಗೃತಿಗಾಗಿ ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪಟ್ಟಣದಲ್ಲಿ ಕನ್ನಡ ಭಾಷೆಯಲ್ಲಿ ನಾಮಫಲಕಗಳನ್ನು ಹಾಕುವಂತೆ ಜಾಗೃತಿ ಮೂಡಿಸಿತು. ಈ ಸಂದರ್ಭದಲ್ಲಿ ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಚಂದ್ರಶೇಖರ ಪೂಜಾರ, ತಾಲೂಕು ಅಧ್ಯಕ್ಷ ವಿಶ್ವನಾಥ ಎಲಿಗಾರ, ರಾಜಾಭಕ್ಷಿ ಸೊಟಕನಾಳ, ಶಿವನಗೌಡ ಹಳೆಮನಿ, ಚಂದ್ರು ನಾವಿ, ನಾಗರಾಜ ಮುಡಿಯಮ್ಮನವರ, ಮಲ್ಲಪ್ಪ ಮಾದರ, ಮಾಬುಸಾಬ್ ಗರಡಿಮನಿ, ಸಂತೋಷ ಮ್ಯಾಗೇರಿ, ನಿಂಗಪ್ಪ ಉಪ್ಪಾರ, ರಾಜಾಭಕ್ಷಿ ಕೆಂಪಸಾಬಣ್ಣವರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಸಾರಿಗೆ ಬಸ್ ಪಲ್ಟಿಯಾಗಿ ನಾಲ್ವರಿಗೆ ಗಾಯ

ಲಕ್ಷ್ಮೇಶ್ವರ: ತಾಲೂಕಿನ ಉಂಡೇನಹಳ್ಳಿ ಕ್ರಾಸ್ ಹತ್ತಿರ ಸಾರಿಗೆ ಇಲಾಖೆಗೆ ಸೇರಿದ ಬಸ್ ಪಲ್ಟಿಯಾಗಿ ನಾಲ್ವರು ಗಾಯಗೊಂಡ ಘಟನೆ ಮಂಗಳವಾರ ಜರುಗಿದೆ.ಬಸ್ ಲಕ್ಷ್ಮೇಶ್ವರದಿಂದ ಸೂರಣಗಿ ಕಡೆ ತೆರಳುತ್ತಿತ್ತು ಎಂದು ತಿಳಿದುಬಂದಿದೆ. ಘಟನೆಯಲ್ಲಿ ಇಬ್ಬರು ಪ್ರಯಾಣಿಕರು ತೀವ್ರವಾಗಿ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಗದುಗಿನ ಜಿಮ್ಸ್‌ಗೆ ದಾಖಲಿಸಲಾಗಿದೆ. ಈ ಕುರಿತು ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.