ಒಳಮೀಸಲಾತಿ ತಕ್ಷಣ ಜಾರಿಗೊಳಿಸಲು ಆಗ್ರಹ

| Published : Aug 22 2024, 12:57 AM IST / Updated: Aug 22 2024, 12:58 AM IST

ಸಾರಾಂಶ

ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ರಾಜ್ಯ ಸರ್ಕಾರ ತಕ್ಷಣ ಒಳಮೀಸಲಾತಿ ಜಾರಿಗೆ ತರುವ ನಿಟ್ಟಿನಲ್ಲಿ ಕ್ರಮವಹಿಸುವಂತೆ ಕರ್ನಾಟಕ ಪ್ರದೇಶ ಮಾದಿಗರ ಸಂಘದ ಜಿಲ್ಲಾಧ್ಯಕ್ಷ ಕುಮಾರ ಗಸ್ತಿ ಆಗ್ರಹಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕಾಗವಾಡ

ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ರಾಜ್ಯ ಸರ್ಕಾರ ತಕ್ಷಣ ಒಳಮೀಸಲಾತಿ ಜಾರಿಗೆ ತರುವ ನಿಟ್ಟಿನಲ್ಲಿ ಕ್ರಮವಹಿಸುವಂತೆ ಕರ್ನಾಟಕ ಪ್ರದೇಶ ಮಾದಿಗರ ಸಂಘದ ಜಿಲ್ಲಾಧ್ಯಕ್ಷ ಕುಮಾರ ಗಸ್ತಿ ಆಗ್ರಹಿಸಿದ್ದಾರೆ.

ಸೋಮವಾರ ಕರ್ನಾಟಕ ಪ್ರದೇಶ ಮಾದಿಗರ ಸಂಘ ಹಾಗೂ ಜಿಲ್ಲಾ ಆದಿಜಾಂಬವ ಸೇವಾ ಅಭಿವೃದ್ಧಿ ಸಂಘ, ಮಾದಿಗ ಸಂಘಟನೆಗಳ ಒಕ್ಕೂಟ ಮೂಲಕ ಕಾಗವಾಡ ತಹಸೀಲ್ದಾರ್‌ ಗೆ ಮನವಿ ಸಲಿಸಿ ಮಾತನಾಡಿ, ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗ ವರದಿ ಜಾರಿಗೊಳಿಸಲು ಸರ್ವೋಚ್ಚ ನ್ಯಾಯಾಲಯ ಆದೇಶಿಸಿದೆ.

ಈ ಆದೇಶದಂತೆ ಆಂಧ್ರಪ್ರದೇಶ, ಮೊದಲಾದ ರಾಜ್ಯಗಳು ಒಳಮೀಸಲಾತಿ ಜಾರಿಗೆ ತಂದಿದ್ದು, ನಮ್ಮ ರಾಜ್ಯ ಸರ್ಕಾರ ಕೂಡ ಒಳ ಮೀಸಲಾತಿ ಜಾರಿಗೆಗೊಳಿಸುವಂತೆ ಆಗ್ರಹಿಸಿದರು.

ಮುಖಂಡರಾದ ಪರಸುರಾಮ ಅವಳೆ ಮಾತನಾಡಿದರು. ಆದಿಜಾಂಬವ ಸೇವಾ ಅಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಮಹಾದೇವ ಹಾದಿಮನಿ, ರಾಜು ರಾಜಂಗಳೆ, ಸಂತೋಷ ಮಾದರ, ಭರಮು ಮಾದರ, ಬಸು ಮಾಂಗ, ರವೀಂದ್ರ ಮಾದರ, ಮಹೇಶ ಮಾದರ, ವಿನೋದ ಮಾದರ, ಸಂಜಯ ಮಾದರ, ಸಂದೀಪ ಮಾದರ, ಮಹೇಶ ಮಾಂಗ, ಅನೀಲ ಮಾಂಗ, ಸುನೀತಾ ಐಹೊಳೆ, ಪರಶುರಾಮ ಮಾದಿಗ, ಶಂಕರ ಪೂಜಾರಿ, ಅನೀಲ ಮಾದಿಗ, ಕಾಶಿರಾಮ ಮಾದಿಗ, ತುಕಾರಾಮ ಗೊಡಬೊಲೆ, ರಾಜು ಮಾದಿಗ, ದೀಪಕ ದಾವಣೆಕರ ಇತರರು ಇದ್ದರು.