ಕಳಪೆ ಮಾಂಸ ಸರಬರಾಜು ಮಾಡಿದವರ ವಿರುದ್ಧ ಕಾನೂನು ಕ್ರಮಕ್ಕೆ ಹಿಂದೂ ರಾಷ್ಟ್ರ ಸಮನ್ವಯ ಸಮಿತಿ ಆಗ್ರಹ

| Published : Aug 09 2024, 12:54 AM IST / Updated: Aug 09 2024, 01:19 PM IST

ಕಳಪೆ ಮಾಂಸ ಸರಬರಾಜು ಮಾಡಿದವರ ವಿರುದ್ಧ ಕಾನೂನು ಕ್ರಮಕ್ಕೆ ಹಿಂದೂ ರಾಷ್ಟ್ರ ಸಮನ್ವಯ ಸಮಿತಿ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಈ ಕುರಿತ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಮತ್ತು ಮಾಂಸ ಸರಬರಾಜು ರೂವಾರಿಯನ್ನು ಬಂಧಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

 ಪುತ್ತೂರು :   ಬೆಂಗಳೂರಿಗೆ ಅಕ್ರಮವಾಗಿ ಕಳಪೆ ಗುಣಮಟ್ಟದ ಮಾಂಸ ಸರಬರಾಜು ಮಾಡುವವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯು ಪುತ್ತೂರು ಸಹಾಯಕ ಆಯುಕ್ತರ ಮೂಲಕ ರಾಜ್ಯಪಾಲರಿಗೆ ಮನವಿ ನೀಡಿದೆ. 

ಕಳೆದ ಅನೇಕ ವರ್ಷಗಳಿಂದ ಅಕ್ರಮವಾಗಿ ಹೊರರಾಜ್ಯಗಳಿಂದ ರೈಲುಗಳ ಮೂಲಕ ಬೇರೇ ಬೇರೆ ರೆಸ್ಟೋರೆಂಟ್‌ಗಳಿಗೆ, ಹೋಟೆಲ್‌ಗಳಿಗೆ ಮಾಂಸ ಸರಬರಾಜಾಗುತ್ತಿದೆ. ಆಹಾರ ಇಲಾಖೆಯ ನಿಯಮಗಳನ್ನು ಗಾಳಿಗೆ ತೂರಿ ಥರ್ಮಾಕೋಲ್ ಬಾಕ್ಸ್ ಮೂಲಕ, ವಿವಿಧ ರಾಸಾಯನಿಕಗಳಿಂದ ತೊಳೆದು ಸರಬರಾಜು ಮಾಡಲಾಗುತ್ತಿದೆ. 

ಸಾರ್ವಜನಿಕರ ಆರೋಗ್ಯಕ್ಕೆ ಹಾನಿಕಾರಕವಾಗಿದ್ದು. ಹಲವು ರೋಗಳಿಗೆ ತುತ್ತಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಜು.26  ರಂದು ಸಂಜೆ ಬೆಂಗಳೂರು ಮೆಜೆಸ್ಟಿಕ್‌ಗೆ ರಾಜಸ್ಥಾನದಿಂದ 90 ಬಾಕ್ಸ್‌ಗಲ್ಲಿ ಮಾಂಸ ಬಂದಿದ್ದು, ಅದು ದುರ್ವಾಸನೆಯಿಂದ ಕೂಡಿತ್ತು. ಈ ಸಂದರ್ಭದಲ್ಲಿ ಪರಿಶೀಲನೆ ಮಾಡುವಂತೆ ಸಾರ್ವಜನಿಕರು ಪಟ್ಟು ಹಿಡಿದಿದ್ದರು. 

ಆಗ ಅಲ್ಲಿದ್ದ ಅಬ್ದುಲ್ ರಝಾಕ್ ಎಂಬಾತ ಪರಿಶೀಲನೆ ಮಾಡಲು ಇಲಾಖೆಯವರಿಗೆ ಅಡ್ಡಿಪಡಿಸಿದ್ದ. ಆದರೆ ರಝಾಕ್ ಮೇಲೆ ಯಾವುದೇ ಕ್ರಮಕೊಳ್ಳಲಾಗಿಲ್ಲ. ಇದೊಂದು ಕೋಟ್ಯಂತರ ರುಪಾಯಿಗಳ ಅಕ್ರಮ ಮಾಂಸದ ದಂಧೆಯಾಗಿದೆ. ತಕ್ಷಣ ಈ ಕುರಿತ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಮತ್ತು ಮಾಂಸ ಸರಬರಾಜು ರೂವಾರಿಯನ್ನು ಬಂಧಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಮನವಿ ಸಲ್ಲಿಸುವ ಸಂದರ್ಭದಲ್ಲಿ ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯ ಚಂದ್ರ ಮೊಗವೀರ, ಹರಿಪ್ರಸಾದ್ ರೈ ನೆಲ್ಲಿಕಟ್ಟೆ, ಕೃಷ್ಣಪ್ರಸಾದ್ರ ಬೆಟ್ಟ, ಬಾಲಚಂದ್ರ ಸೊರಕೆ ಮತ್ತಿತರರು ಇದ್ದರು.