ಬಾಂಗ್ಲಾ ನುಸುಳುಕೋರರಿಗೆ ನಕಲಿ ದಾಖಲೆ ಸೃಷ್ಟಿಸುವವರ ಮೇಲೆ ಕಠಿಣ ಕ್ರಮಕ್ಕೆ ಆಗ್ರಹ

| Published : Sep 04 2024, 01:49 AM IST

ಬಾಂಗ್ಲಾ ನುಸುಳುಕೋರರಿಗೆ ನಕಲಿ ದಾಖಲೆ ಸೃಷ್ಟಿಸುವವರ ಮೇಲೆ ಕಠಿಣ ಕ್ರಮಕ್ಕೆ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಅಕ್ರಮ ಬಾಂಗ್ಲಾ ವಲಸಿಗರರನ್ನು ದೇಶದಿಂದ ಹೊರಗೆ ಹಾಕಿ ಮತ್ತು ಅವರಿಗೆ ಭಾರತದೊಳಗೆ ನಕಲಿ ಐಡಿ ಕಾರ್ಡ್‌ಗಳನ್ನು ಮಾಡಿಕೊಳ್ಳಲು ಸಹಕರಿಸಿದವರ ವಿರುದ್ಧ ಮತ್ತು ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಕೊಟ್ಟಿರುವವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಎಬಿವಿಪಿ ನೇತೃತ್ವದಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ನಕಲಿ ಆಧಾರ್ ಕಾರ್ಡ್ ನಂತಹ ಮಹತ್ತರ ದಾಖಲೆಗಳನ್ನು ಸೃಷ್ಟಿಸಿ ಕೊಡುತ್ತಿರುವುದು ಮತ್ತು ಇದಕ್ಕೆ ಪ್ರಭಾವಿಗಳು ಮತ್ತು ಸರ್ಕಾರಿ ನೌಕರರೇ ಸಹಕರಿಸುತ್ತಿರುವುದು ದೇಶದ್ರೋಹವೇ ಸರಿ ಎಂದು ಆಕ್ರೋಶ ಹೊರಹಾಕಿದರು.

ಕನ್ನಡಪ್ರಭ ವಾರ್ತೆ ಹಾಸನ

ಅಕ್ರಮ ಬಾಂಗ್ಲಾ ವಲಸಿಗರರನ್ನು ದೇಶದಿಂದ ಹೊರಗೆ ಹಾಕಿ ಮತ್ತು ಅವರಿಗೆ ಭಾರತದೊಳಗೆ ನಕಲಿ ಐಡಿ ಕಾರ್ಡ್‌ಗಳನ್ನು ಮಾಡಿಕೊಳ್ಳಲು ಸಹಕರಿಸಿದವರ ವಿರುದ್ಧ ಮತ್ತು ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಕೊಟ್ಟಿರುವವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಎಬಿವಿಪಿ ನೇತೃತ್ವದಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಎಬಿವಿಪಿ ಆಂತರಿಕ ಸಮೀಕ್ಷೆ ಪ್ರಕಾರ ಹಾಸನ ಜಿಲ್ಲಾದ್ಯಂತ ೫೦೦೦ಕ್ಕೂ ಹೆಚ್ಚು ಬಾಂಗ್ಲಾದೇಶದ ನುಸುಳುಕೋರರು ವಾಸಿಸುತ್ತಿದ್ದಾರೆ. ಅವರಿಗೆ ಸ್ಥಳೀಯರೇ ಸಹಕರಿಸುತ್ತಿರುವುದು ದುರಾದೃಷ್ಟಕರ. ಅದಲ್ಲದೆ ಅವರಿಗೆ ನಕಲಿ ಆಧಾರ್ ಕಾರ್ಡ್ ನಂತಹ ಮಹತ್ತರ ದಾಖಲೆಗಳನ್ನು ಸೃಷ್ಟಿಸಿ ಕೊಡುತ್ತಿರುವುದು ಮತ್ತು ಇದಕ್ಕೆ ಪ್ರಭಾವಿಗಳು ಮತ್ತು ಸರ್ಕಾರಿ ನೌಕರರೇ ಸಹಕರಿಸುತ್ತಿರುವುದು ದೇಶದ್ರೋಹವೇ ಸರಿ. ಇಂತಹ ದೇಶದ್ರೋಹದ ಕೆಲಸ ಮಾಡುತ್ತಿರುವ ಅಧಿಕಾರಿಗಳು ಮತ್ತು ಅವರಿಗೆ ಸಹಕರಿಸುತ್ತಿರುವ ಸ್ಥಳೀಯರನ್ನು ದೇಶದ್ರೋಹದ ಪ್ರಕರಣದಲ್ಲಿ ಬಂಧಿಸಿ ಶಿಕ್ಷಿಸಬೇಕಾಗಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಆಗ್ರಹಿಸುತ್ತದೆ ಎಂದು ಹೇಳಿದರು. ಪ್ರತಿಭಟನೆಯಲ್ಲಿ ಎಬಿವಿಪಿ ಮುಖಂಡರಾದ ಶ್ರೀನಿವಾಸ್ ಸಾವರ್ಕರ್, ಜಿಲ್ಲಾ ಸಹಸಂಚಾಲಕ ಸಿ. ಭರತ್, ಜ್ಞಾನ, ಅದಿತಿ, ಮನೋಜ್ ಸೇರಿದಂತೆ ನೂರಾರು ಜನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.