ಸಾರಾಂಶ
ಕನ್ನಡಪ್ರಭ ವಾರ್ತೆ ಕವಿತಾಳವಿದ್ಯಾರ್ಥಿಗಳ ಜನಿವಾರ ತೆಗೆಸಿದ ಘಟನೆ ಮತ್ತು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕರ ದಾಳಿ ಖಂಡಿಸಿ ಹಿಂದೂ ಸಮಾಜದ ವತಿಯಿಂದ ಪಟ್ಟಣದಲ್ಲಿ ಶುಕ್ರವಾರ ಪ್ರತಿಭಟಿಸಿ ಉಪತಹಸೀಲ್ದಾರ್ ಮಂಜುನಾಥ ಅವರಿಗೆ ಮನವಿ ಸಲ್ಲಿಸಲಾಯಿತು.ಪ್ರತಿಭಟನೆಯಲ್ಲಿ ಮಾತನಾಡಿದ ಸಮಾಜದ ಮುಖಂಡರು, ಸಿ ಇ ಟಿ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಗಳ ಜನಿವಾರ ತೆಗೆಸುವ ಮೂಲಕ ಹಿಂದೂ ಸಮಾಜಕ್ಕೆ ಅವಮಾನ ಮಾಡಲಾಗಿದೆ, ಈ ರೀತಿ ಹಿಂದೂಗಳ ಭಾವನೆಗೆ ಧಕ್ಕೆ ತಂದ ಅಧಿಕಾರಿಗಳ ವಿರುದ್ದ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಮತ್ತು ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.ಪಹಲ್ಗಾಮ್‌ನಲ್ಲಿ ಹಿಂದೂಗಳ ಮೇಲೆ ಕ್ರೂರವಾಗಿ ದಾಳಿ ಮಾಡಿದ ಭಯೋತ್ಪಾದರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು ಭಯೋತ್ಪಾದನೆ ನಿರ್ಮೂಲನೆಗೆ ಮುಂದಾಗಬೇಕು ಎಂದು ಆಗ್ರಹಿಸಿದರು.ಘಟನೆಗಳನ್ನು ಖಂಡಿಸಿ ಘೋಷಣೆ ಕೂಗಲಾಯಿತು. ಇಲ್ಲಿನ ತ್ರಯಂಭಕೇಶ್ವರ ದೇವಸ್ಥಾನದಿಂದ ಕಲ್ಮಠ ರಸ್ತೆ ಮೂಲಕ ಆನ್ವರಿ ಕ್ರಾಸ್ ವರೆಗೆ ಕಪ್ಪು ಪಟ್ಟಿ ಧರಿಸಿ ಪ್ರತಿಭಟನಾ ಮೆರವಣಿಗೆ ನಡೆಸಿದ ಪ್ರತಿಭಟನಕಾರರು ಆನ್ವರಿ ಕ್ರಾಸ್ ನಲ್ಲಿ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಸಿದರು.
ಶ್ರೀಶೈಪ್ಪ ತಾತ, ಕರಿಯಣ್ಣ ತಾತ, ಸಿದ್ದಯ್ಯ ತಾತ,ಡಾ, ರಾಮಕೃಷ್ಣ ಡಾ. ಹಜಾರಿ,ಈರಣ್ಣ, ಸಿದ್ದಯ್ಯಸ್ವಾಮಿ, ಜಯತೀರ್ಥ ಆಚಾರಿ, ಮೌನೇಶ್ ಪೂಜಾರಿ, ಯಮನಪ್ಪ ದಿನ್ನಿ, ಎಂ.ರಾಘವೇಂದ್ರ, ಶಂಕರ ನಾಗಲೀಕರ, ಶಿವಕುಮಾರ ವಟಗಲ್, ಗುಂಡೂರಾವ್, ಲಕ್ಷ್ಮೀತಿ ಬಾಗೋಡಿ, ರಾಘವೇಂದ್ರ ಕುಲಕರ್ಣಿ, ವೆಂಕಟೇಶ, ತಾಯಣ್ಣ ಯಾದವ,ಅಲ್ಲಮಪ್ರಭು, ರಾಮಣ್ಣ ಕವಿತಾಳ, ವಿಶ್ವನಾಥ ಕಾಮರಡ್ಡಿ, ಯಮನಸಿಂಗ್ ದಾದ. ರಮೇಶ ದಾದಾ, ರಾಮಣ್ಣ, ಜನಾರ್ಧನ್ ಕೊಸಗಿ, ಸಂಗಮೇಶ, ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.