ಕನ್ನಡಪ್ರಭ ವಾರ್ತೆ, ತುಮಕೂರು

ದೇಶದ ಸಂವಿಧಾನ ಕಾರ್ಮಿಕ ವಿಚಾರವನ್ನು ಸಮವರ್ತಿ ಪಟ್ಟಿಯಲ್ಲಿ ಇರಿಸಿದೆ. ಹಾಗಾಗಿ ರಾಜ್ಯ ಸರ್ಕಾರವು ಕಾರ್ಮಿಕ ವಿರೋಧಿ ಸಂಹಿತೆಗಳನ್ನು ರಾಜ್ಯ ಕಾರ್ಮಿಕರ ಹಿತ ದೃಷ್ಟಿಯಿಂದ ಜಾರಿ ಮಾಡದೆ ತನ್ನ ಸಂವಿಧಾನಿಕ ಹಕ್ಕು ಚಲಾಯಿಸಲು ಮುಂದಾಗಬೇಕೆಂದು ಸಿಐಟಿಯು ತುಮಕೂರು ಜಿಲ್ಲಾ ಅಧ್ಯಕ್ಷ ಸೈಯದ್ ಮುಜಿಬ್ ಒತ್ತಾಯಿಸಿದರು.

ಮಂಗಳವಾರ ಸಿಐಟಿಯು ಮತ್ತು ಸಂಯೋಜಿತ ಸಂಘಟನೆಗಳಿಂದ ತುಮಕೂರು ಜಿಲ್ಲಾ ಕಾರ್ಮಿಕ ಅಧಿಕಾರಿಗಳ ಕಚೇರಿ ಎದುರು ಪತ್ರಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ, ಕೇರಳದ ಕಮ್ಯುನಿಸ್ಟ್‌ ಸರ್ಕಾರ ಮಾಡಿದ್ದನ್ನು ನಮ್ಮ ರಾಜ್ಯದ ಕಾಂಗ್ರೆಸ್ ಸರ್ಕಾರ ಏಕೆ ಮಾಡಲಾಗುತ್ತಿಲ್ಲ ಎಂದು ಪ್ರಶ್ನಿಸಿದರು

ನಗರದ ಹನುಮಂತಪುರದ ಶ್ರೀ ಕೊಲ್ಲಾಪುರದಮ್ಮ ದೇವಸ್ಥಾನದ ಮುಂಭಾಗದಿಂದ ಮೆರವಣಿಗೆ ಮುಖಾಂತರ ತೆರಳಿ ಕಾರ್ಮಿಕ ಕಚೇರಿ ಬಳಿ ಪ್ರತಿಭಟನೆ ನಡೆಸಿ ಕಾರ್ಮಿಕ ಸಂಹಿತೆಗಳಿಗೆ ಕಾರ್ಮಿಕ ಅಧಿಕಾರಿ ಜಿ. ಇಬ್ರಾಹಿಂ ಸಾಬ್ ಮೂಲಕ ಆಕ್ಷೇಪಣೆ ಸಲ್ಲಿಸಲಾಯಿತು,

ಜಿಲ್ಲಾ ಖಜಾಂಚಿ ಲೋಕೇಶ್ ಮಾತನಾಡಿ ರಾಜ್ಯ ಸರ್ಕಾರ ಈ ಕೋಡಲೆ ಕನಿಷ್ಠ ಕೂಲಿ 41 ಸಾವಿರ ನಿಗದಿ ಮಾಡಲು ಒತ್ತಾಯಿಸಿದರು. ಅಂಗವಾಡಿ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುಲ್ಜಾರ್ ಬಾನು ಸೀಮ್ ನೌಕರರ ಸಾಮಾಜಿಕ ಭದ್ರತೆ ಮತ್ತು ಅವರನ್ನು ಕಾರ್ಮಿಕರಾಗಿ ಪರಿಗಣಿಸಲು ಒತ್ತಾಯಿಸಿದರು


ಕಸದ ಆಟೊ ಚಾಲಕರು, ಸಹಾಯಕರು, ಲೋಡರ್ಸ, ಕ್ಲೀನರ್ಸ ಸಂಘದ ಮುಖಂಡರು ಮಾತನಾಡಿದರು. ಸಿಐಟಿಯು ತುಮಕೂರು ಜಿಲ್ಲಾ ಕಾರ್ಯದರ್ಶಿ ಎನ್ ಕೆ ಸುಬ್ರಹ್ಮಣ್ಯ, ಜಿಲ್ಲಾ ಖಜಾಂಚಿ ಎ.ಲೋಕೇಶ್, ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಅನಸೂಯ, ಗೌರಮ್ಮ, ಜಬ್ಬಿನ ಬಾನು, ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕ ಸಂಘಟನೆಯ ಶಂಕರಪ್ಪ, ಇಬ್ರಾಹಿಂ ಕಲೀಲ್, ಸಿಐಟಿಯು ಜಿಲ್ಲಾ ಕಾರ್ಯದರ್ಶಿಗಳಾದ ರಂಗಧಮಯ್ಯ, ಸುಜಿತ್ ನಾಯಕ, ದಿಶಾ ಇಂಡಿಯಾ ಕಾರ್ಮಿಕ ಸಂಘಟನೆ ಮಧುಸೂದನ್, ಎಂಎಚ್ಐಎನ್‌ ಕಾರ್ಮಿಕ ಸಂಘಟನೆ ಉಮೇಶ್, ಶಶಿಕಿರಣ್, ಉಮೇಶ್, ಚೇತನ್, ದೀಪಕ್, ಸಿಂಧೂರ್ ಫೋರ್ಜಿಂಗ್ಸ್ ಕಾರ್ಮಿಕ ಸಂಘಟನೆ ಉಮೇಶ್, ದಕ್ಷ ಕಾರ್ಮಿಕ ಸಂಘಟನೆಯ ತಿಪ್ಪೇಸ್ವಾಮಿ, ನಾಗ್ ಭೂಷಣ್ , ಕುಣಿಗಲ್ ಕುದುರೆ ಸೆಟ್ ಫಾರ್ಮ್ ಕಾರ್ಮಿಕ ಸಂಘಟನೆಯ ಮುನಾಫ್, ಪೌರಕಾರ್ಮಿಕ ಸಂಘಟನೆಯ ಮಂಜು ಕೆಂಪರಾಜು, ತುಮಕೂರು ತಾಂತ್ರಿಕ ಮಹಾವಿದ್ಯಾಲಯದ ಭೂತಕೇತರ ಸಂಘದ ಮೀನಾಕ್ಷಿ, ಫಿಟ್ ವೆಲ್ ಟೂಲ್ಸ್ ಆ್ಯಂಡ್ ಫೋರ್ಜಿಂಗ್ ಕಾರ್ಮಿಕ ಸಂಘದ ಟಿ.ಎಸ್ ಭೀಮರಾಜು , ಸಮುದಾಯ ಸಂಘಟನೆಯ ಅಶ್ವತಯ್ಯ, ಹಲವು ಕೈಗಾರಿಕಾ ಕಾರ್ಮಿಕರು ಭಾಗವಹಿಸಿದ್ದರು.