ಈ ಬಾರಿ ಬಜೆಟ್ ನಲ್ಲಿ ನೇಕಾರರಿಗೆ ಹಲವು ಬೇಡಿಕೆಗಳನ್ನು ಈಡೇರಿಸಲು ₹2000 ಕೋಟಿ ಮೀಸಲಿಡಲು ಮತ್ತು ಲಾಳಿ ಸಹಿತ ಮಗ್ಗಗಳಲ್ಲಿ ಉತ್ಪಾದಿಸಿದ ಸೀರೆಗಳನ್ನು ಸರ್ಕಾರ ಖರೀದಿಸಲು ಒತ್ತಾಯಿಸಲಾಯಿತು,
ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ
ಕರ್ನಾಟಕ ರಾಜ್ಯ ನೇಕಾರರ ಹಿತಕ್ಷಣ ಸಮಿತಿ ಮತ್ತು ಕರ್ನಾಟಕ ರಾಜ್ಯ ಸೇವಾ ಸಂಘಟನೆಗಳ ನೇತೃತ್ವದಲ್ಲಿ ಜವಳಿ ಸಚಿವ ಶಿವಾನಂದ ಪಾಟೀಲ್ ಅವರನ್ನು ಭೇಟಿ ಮಾಡಿ ನೇಕಾರರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಮನವಿ ಪತ್ರ ಸಲ್ಲಿಸಲಾಯಿತು.ಈ ಬಾರಿ ಬಜೆಟ್ ನಲ್ಲಿ ನೇಕಾರರಿಗೆ ಹಲವು ಬೇಡಿಕೆಗಳನ್ನು ಈಡೇರಿಸಲು ₹2000 ಕೋಟಿ ಮೀಸಲಿಡಲು ಮತ್ತು ಲಾಳಿ ಸಹಿತ ಮಗ್ಗಗಳಲ್ಲಿ ಉತ್ಪಾದಿಸಿದ ಸೀರೆಗಳನ್ನು ಸರ್ಕಾರ ಖರೀದಿಸಲು ಒತ್ತಾಯಿಸಲಾಯಿತು,
ಪವರ್ ಲೂಂ ರಿಸರ್ವೇಶನ್ ಆಕ್ಟ್ ಜಾರಿಗೆ ತರಲು ಕ್ರಮ ಕೈಗೊಳ್ಳಬೇಕು. ದೊಡ್ಡಬಳ್ಳಾಪುರದಲ್ಲಿನೇಕಾರರ ಮಾರಾಟ ಮಳಿಗೆ ನಿರ್ಮಾಣ ಕಾರ್ಯವನ್ನು ಶೀಘ್ರವಾಗಿ ಪೂರೈಸಬೇಕು. ನಿಂತು ಹೋಗಿರುವ ಒನ್ ಪ್ಲಸ್ ಒನ್ ಮಗ್ಗ ಮತ್ತು ಜಕಾರ್ಡ್ ಬಡ ನೇಕಾರರಿಗೆ ನೀಡಲು ಮತ್ತು ಶೇ.75ರಷ್ಟು ಸಬ್ಸಿಡಿ ಒದಗಿಸಬೇಕು. ರಾಜ್ಯದಲ್ಲಿ ಕಟ್ಟಡ ಕಾರ್ಮಿಕರಿಗೆ ಸಿಗುತ್ತಿರುವ ಸೌಲಭ್ಯಗಳು ನೇಕಾರರೆಲ್ಲರಿಗೂ ಸಿಗಬೇಕು. ಈ ನಿಟ್ಟಿನಲ್ಲಿ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಯಿತು.
ವಿದ್ಯುತ್ ಮಗ್ಗಗಳ ನೇಕಾರ ಸಮ್ಮಾನ್ ಯೋಜನೆಯಲ್ಲಿ ಮಾಸಿಕ ₹2000, ವಾರ್ಷಿಕ ₹24,000ಕ್ಕೆ ಏರಿಕೆ ಮಾಡಬೇಕು, ಮುಖ್ಯಮಂತ್ರಿಗಳ ಜೊತೆಗೆ ಚರ್ಚಿಸಲು ಒಮ್ಮೆ ಸಭೆ ನಿಗಧಿಪಡಿಸಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮನವಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ರಾಜ್ಯ ಕೈಮಗ್ಗ ಮತ್ತು ಜವಳಿ ಇಲಾಖೆ ಆಯುಕ್ತರಾದ ಜ್ಯೋತಿ,
ನೇಕಾರರ ಸಂಘಟನೆಯ ಅಧ್ಯಕ್ಷ ಪಿ.ಎ.ವೆಂಕಟೇಶ್, ಶಿವಲಿಂಗ ಟರ್ಕಿ, ಉಪಾಧ್ಯಕ್ಷ ಸುರೇಶ್ ಸಿ, ಖಜಾಂಚಿ ಮಲ್ಲೇಶ್, ಸಹಕಾರ್ಯದರ್ಶಿ ಎಂ.ಮುನಿರಾಜು ಮತ್ತಿತರರು ಉಪಸ್ಥಿತರಿದ್ದರು.