ಶುಭಂ ಗ್ಯಾಸ್ ಏಜೆನ್ಸಿ ಕಪ್ಪು ಪಟ್ಟಿಗೆ ಸೇರಿಸಲು ಆಗ್ರಹ

| Published : Oct 22 2024, 12:18 AM IST

ಶುಭಂ ಗ್ಯಾಸ್ ಏಜೆನ್ಸಿ ಕಪ್ಪು ಪಟ್ಟಿಗೆ ಸೇರಿಸಲು ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಶುಭಂ ಗ್ಯಾಸ್ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರ್ಪಡೆ ಮಾಡಬೇಕು ಎಂದು ಆಗ್ರಹಿಸಿ ಜಯಕರ್ನಾಟಕ ಹಾಗೂ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಗದಗ: ನಗರದ ಮುಳಗುಂದ ನಾಕಾದ ರಸ್ತೆಗೆ ಹೊಂದಿರುವ ಉಡುಪಿ ಹೊಟೇಲ್ ಮುಂಭಾಗದಲ್ಲಿ ಗ್ಯಾಸ್ ಪೈಪ್ ಲೈನ್ ಕಾಮಗಾರಿ ಮಾಡುವ ವೇಳೆಯಲ್ಲಿ ಮೃತಪಟ್ಟ ಕಾರ್ಮಿಕ ನಜೀರಸಾಬಗೆ ಸೂಕ್ತ ಪರಿಹಾರ ಕೊಡಬೇಕು. ನಿರ್ಲಕ್ಷ್ಯ ವಹಿಸಿದ ಗ್ಯಾಸ್ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರ್ಪಡೆ ಮಾಡಬೇಕು ಎಂದು ಆಗ್ರಹಿಸಿ ಜಯಕರ್ನಾಟಕ ಹಾಗೂ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಜಯ ಕರ್ನಾಟಕ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಕಾಂತ ಚವ್ಹಾಣ, ಜಿಲ್ಲಾ ಉಪಾಧ್ಯಕ್ಷ ಬಾಷಾಸಾಬ ಮಲ್ಲಸಮುದ್ರ, ನಾಗರಾಜ ಕ್ಷತ್ರಿಯ, ಹಾಜಿಅಲಿ ಕೊಪ್ಪಳ, ಮೆಹಬೂಬ ಮುಲ್ಲಾ, ಇರ್ಫಾನ್‌ ಮಾಳೆಕೊಪ್ಪ, ಸಾಧಿಕ ಗುಳಗುಂದಿ, ಇಮ್ಮಿಯಾಜ್ ಢಾಲಾಯತ, ಜಬ್ಬಾರ್‌, ನಿಜಾಮ, ದಾದು ಮುಂಡರಗಿ, ಮೆಹಬೂಬ ಹಣಗಿ ಉಸ್ಮಾನ ಮಾಳೆಕೊಪ್ಪ, ಮುಜಮ್ಮಿಲ್ ಶಿಗ್ಗಿ, ಮುಜಾಹಿದ್, ಮತೀನ್ ಹುಬ್ಬಳ್ಳಿ, ರಿಯಾಜ್ ಗುಡಿಸಲಮನಿ, ರಿಯಾಜ್‌ ಫಾಮಡಿ, ಸುಲೇಮಾನ್ ಮಾಳೆಕೊಪ್ಪ, ಯೂಸುಫ್‌ ಶಿರವಾರ, ಮೆಹಬೂಬ ಅತ್ತಾರ, ಮಹಮ್ಮದ ಬರದೂರ ಮುಂತಾದವರು ಉಪಸ್ಥಿತರಿದ್ದರು.