ಅವಿಶ್ವಾಸ ಗೊತ್ತುವಳಿ ವಿಶೇಷ ಸಭೆ ಕರೆಯಲು ಆಗ್ರಹ

| Published : Jul 06 2025, 01:48 AM IST

ಸಾರಾಂಶ

ಕಮತಗಿ ಪಟ್ಟಣ ಪಂಚಾಯಿತಿಯ ಹಾಲಿ ಅಧ್ಯಕ್ಷ ರಮೇಶ ಎಸ್. ಜಮಖಂಡಿ ಅವರ ವಿರುದ್ಧ ಅವಿಶ್ವಾಸ ಗೊತ್ತುವಳಿ ನಿರ್ಣಯ ಮಂಡಿಸಲು ವಿಶೇಷ ಸಾಮಾನ್ಯ ಸಭೆ ಕರೆಯುವಂತೆ ಆಡಳಿತ ಕಾಂಗ್ರೆಸ್‌ ಹಾಗೂ ಬಿಜೆಪಿ ಸದಸ್ಯರು ಶನಿವಾರ ಪಟ್ಟಣ ಪಂಚಾಯತಿ ಉಪಾಧ್ಯಕ್ಷೆ ನೇತ್ರಾವತಿ ದೇವಿಪ್ರಸಾದ ನಿಂಬಲಗುಂದಿ ಅವರಿಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಕಮತಗಿ

ಕಮತಗಿ ಪಟ್ಟಣ ಪಂಚಾಯಿತಿಯ ಹಾಲಿ ಅಧ್ಯಕ್ಷ ರಮೇಶ ಎಸ್. ಜಮಖಂಡಿ ಅವರ ವಿರುದ್ಧ ಅವಿಶ್ವಾಸ ಗೊತ್ತುವಳಿ ನಿರ್ಣಯ ಮಂಡಿಸಲು ವಿಶೇಷ ಸಾಮಾನ್ಯ ಸಭೆ ಕರೆಯುವಂತೆ ಆಡಳಿತ ಕಾಂಗ್ರೆಸ್‌ ಹಾಗೂ ಬಿಜೆಪಿ ಸದಸ್ಯರು ಶನಿವಾರ ಪಟ್ಟಣ ಪಂಚಾಯತಿ ಉಪಾಧ್ಯಕ್ಷೆ ನೇತ್ರಾವತಿ ದೇವಿಪ್ರಸಾದ ನಿಂಬಲಗುಂದಿ ಅವರಿಗೆ ಮನವಿ ಸಲ್ಲಿಸಿದರು.ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರು ಸಹಿ ಮಾಡಿ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಗೊತ್ತುವಳಿ ನಿರ್ಣಯಕ್ಕೆ ವಿಶೇಷ ಸಭೆ ಕರೆಯುವಂತೆ ಜೂ.20ರಂದು ಪಪಂ ಮುಖ್ಯಾಧಿಕಾರಿಗಳ ಮೂಲಕ ಅಧ್ಯಕ್ಷರಿಗೆ ಮನವಿ ನೀಡಲಾಗಿತ್ತು. ಆದರೆ 15 ದಿನಗಳಾದರೂ ಪಪಂ ಅಧ್ಯಕ್ಷರು ಸಾಮಾನ್ಯ ಸಭೆ ಕರೆದಿಲ್ಲ. 1964ರ 47(3) (2) ಉಪ ಪ್ರಕರಣದಲ್ಲಿ ಉಪಬಂಧಿಸಿದಂತೆ ಅಧ್ಯಕ್ಷರು ವಿಶೇಷ ಸಾಮಾನ್ಯ ಸಭೆ ಕರೆಯಲು ತಪ್ಪಿದರೆ, ಉಪಾಧ್ಯಕ್ಷರು 15 ದಿನಗಳೊಳಗೆ ವಿಶೇಷ ಸಾಮಾನ್ಯ ಸಭೆ ಕರೆಯಲು ಅವಕಾಶ ಇದ್ದು, ತಾವು ಸಭೆ ಕರೆಯುವಂತೆ ಜು.5ರಂದು ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ನೇತ್ರಾವತಿ ದೇವಿಪ್ರಸಾದ ನಿಂಬಲಗುಂದಿ ಅವರಿಗೆ ಸದಸ್ಯರು ಮನವಿ ಪತ್ರ ನೀಡಿ ಆಗ್ರಹಿಸಿದ್ದಾರೆ.

ಪಪಂ ಸದಸ್ಯರಾದ ಬಸವರಾಜ ಕುಂಬಳಾವತಿ, ಸಂಗಪ್ಪ ಗಾಣಗೇರ, ಹುಚ್ಚೇಶ ಮದ್ಲಿ, ರತ್ನಾ ಗಾಣಗೇರ, ಹುಚ್ಚವ್ವ ಹಗೇದಾಳ, ಲಕ್ಷ್ಮಣ ಮಾದರ, ದೇವಿಪ್ರಸಾದ ನಿಂಬಲಗುಂದಿ, ನಂದಾ ದ್ಯಾಮಣ್ಣವರ, ಸುಮಿತ್ರಾ ಲಮಾಣಿ, ಮಂಜುಳಾ ಮುರಾಳ, ಕಸ್ತೂರಿಬಾಯಿ ಬಾಗೇವಾಡಿ, ಚಂದ್ರಪ್ಪ ಕುರಿ ಇದ್ದರು.