ಸಾರಾಂಶ
ಖೊಟ್ಟಿ ಪರಿಶಿಷ್ಟ ಜಾತಿ ಪ್ರಮಾಣಪತ್ರಗಳನ್ನು ಪಡೆದು ಸರ್ಕಾರದ ಸೌಲಭ್ಯಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ತುಳಿತಕ್ಕೆ ಒಳಗಾದ ಜನರ ಸೌಲಭ್ಯವನ್ನು ಅನರ್ಹರು ಕಸಿದುಕೊಳ್ಳುತ್ತಿದ್ದಾರೆ.
ಧಾರವಾಡ: ಖೊಟ್ಟಿ ಪರಿಶಿಷ್ಟ ಜಾತಿ ಪ್ರಮಾಣಪತ್ರಗಳನ್ನು ರದ್ದುಪಡಿಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಶ್ರೀ ಸಿದ್ಧರಾಮೇಶ್ವರ ಭೋವಿ ವಡ್ಡರ ಜೀರ್ಣೋದ್ಧಾರ ಸಮಿತಿ ಪರಿಶಿಷ್ಟ ಜಾತಿ ಎಸ್‌ಸಿ ಸಂಘಟನೆ ಸದಸ್ಯರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಖೊಟ್ಟಿ ಪರಿಶಿಷ್ಟ ಜಾತಿ ಪ್ರಮಾಣಪತ್ರಗಳನ್ನು ಪಡೆದು ಸರ್ಕಾರದ ಸೌಲಭ್ಯಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ತುಳಿತಕ್ಕೆ ಒಳಗಾದ ಜನರ ಸೌಲಭ್ಯವನ್ನು ಅನರ್ಹರು ಕಸಿದುಕೊಳ್ಳುತ್ತಿದ್ದಾರೆ. ಧಾರವಾಡ ತಾಲೂಕಿನ ಮುಗದ ಗ್ರಾಮದ ಬೈಯಾರ ಸಮುದಾಯದ ಜನರು ಖೊಟ್ಟಿ ಪರಿಶಿಷ್ಟ ಜಾತಿ ಪ್ರಮಾಣ ಪತ್ರಗಳನ್ನು ಪಡೆಯುತ್ತಿದ್ದಾರೆ. ಸರ್ಕಾರ ಈ ಕುರಿತು ಗಂಭೀರವಾಗಿ ಪರಿಗಣಿಸಿ ಖೊಟ್ಟಿ ಜಾತಿ ಪ್ರಮಾಣ ಪತ್ರಗಳನ್ನು ನೀಡುವ ಅಧಿಕಾರಿಗಳ ವಿರುದ್ಧ ಹಾಗೂ ಪ್ರಮಾಣ ಪತ್ರ ಪಡೆಯುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಹನುಮಂತ ಮೊರಬ, ಮಂಜುನಾಥ ಗಳ್ಳಿಗೇರಿ, ದಯಾನಂದ ಮೊರಬ ಇದ್ದರು.