ಗೋವನ್ನು ರಾಷ್ಟ್ರೀಯ ಪ್ರಾಣಿಯೆಂದು ಘೋಷಿಸಿ ಗೋ ಸಂಪತ್ತನ್ನು ರಕ್ಷಿಸಬೇಕೆಂದು ಹಿಂದೂ ರಾಷ್ಟ್ರ ರಕ್ಷಣಾ ಸೇನೆಯು ರಾಷ್ಟ್ರಪತಿಗಳನ್ನು ಆಗ್ರಹಿಸಿದೆ.

ತುರುವೇಕೆರೆ: ಗೋವನ್ನು ರಾಷ್ಟ್ರೀಯ ಪ್ರಾಣಿಯೆಂದು ಘೋಷಿಸಿ ಗೋ ಸಂಪತ್ತನ್ನು ರಕ್ಷಿಸಬೇಕೆಂದು ಹಿಂದೂ ರಾಷ್ಟ್ರ ರಕ್ಷಣಾ ಸೇನೆಯು ರಾಷ್ಟ್ರಪತಿಗಳನ್ನು ಆಗ್ರಹಿಸಿದೆ. ಗೋಮಾತೆಯ ಗೌರವದ ಅಭಿಯಾನ ಆಹ್ವಾನ ವೇದಿಕೆಯಡಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಗೋ ಉಳಿಸುವ ಸಂಬಂಧ ಘೋಷಣೆ ಕೂಗಿದ ಹಿಂದೂ ರಾಷ್ಟ್ರ ರಕ್ಷಣಾ ಸೇನೆಯ ಕಾರ್ಯಕರ್ತರು ತಹಸೀಲ್ದಾರ್‌ ಮೂಲಕ ರಾಷ್ಟ್ರಪತಿಗಳು, ಪ್ರಧಾನ ಮಂತ್ರಿ, ಮುಖ್ಯಮಂತ್ರಿಗಳು, ರಾಜ್ಯಪಾಲರಿಗೆ ಮನವಿ ಪತ್ರವನ್ನು ಸಲ್ಲಿಸಿದರು.

ಈ ವೇಳೆ ವಿರಕ್ತ ಮಠದ ಕಿರಿಯ ಶ್ರೀಗಳಾದ ಅಭಿನವ ಕಾಡಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಅದಷ್ಟು ಬೇಗ ಗೋವನ್ನು ರಾಷ್ಟ್ರೀಯ ಪ್ರಾಣಿಯೆಂದು ಘೋಷಣೆ ಮಾಡಬೇಕು. ಗೋ ಹತ್ಯೆಯನ್ನು ಕಡ್ಡಾಯವಾಗಿ ನಿಷೇಧಿಸಬೇಕು. ಈ ಮೂಲಕ ಗೋ ಸಂತತಿಯನ್ನು ರಕ್ಷಣೆ ಮಾಡಬೇಕೆಂದು ಒತ್ತಾಯಿಸಿದರು. ಹಿಂದೂ ರಾಷ್ಟ್ರ ರಕ್ಷಣಾ ಸೇನೆಯ ಸಂಚಾಲಕ ನವೀನ್ ಬಾಬು ಮಾತನಾಡಿದರು. ಈ ವೇಳೆ ಯಜಮಾನ್ ಮಹೇಶ್, ಜಗರಾಮ್ ಪಟೇಲ್, ಜಗದೀಶ್, ಯೋಗೀಶ್, ಸರವಣ್ ಪಟೇಲ್ ಯತೀಶ್, ಗುಡ್ಡದ್ ರಾಮ್, ಗಿರೀಶ್, ವೆಂಕಟೇಶ್, ಪ್ರಶಾಂತ್, ಬಿಷ್ಣೋಯಿ, ಲೋಕೇಶ್, ನಾಗರಾಜು, ನಿಶಾಂತ್, ಕಾರ್ತಿಕ್, ಶ್ರೀನಿವಾಸ್ ಸೇರಿದಂತೆ ಹಲವಾರು ಗೋ ಪ್ರೇಮಿಗಳು ಭಾಗವಹಿಸಿದ್ದರು. ಶಿರಸ್ತೇದಾರ್‌ ಸುನಿಲ್‌ ಗೋ ಪ್ರೇಮಿಗಳ ಮನವಿಯನ್ನು ಸ್ವೀಕರಿಸಿದರು.