ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ವಿರುದ್ಧ ಪ್ರಕರಣ ದಾಖಲಿಸಲು ಆಗ್ರಹ

| Published : Dec 10 2024, 12:32 AM IST

ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ವಿರುದ್ಧ ಪ್ರಕರಣ ದಾಖಲಿಸಲು ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ದೇಶದಲ್ಲಿ ಸ್ವಾಮೀಜಿಗಳಿಗೆ ಅವರದೆ ಆದ ಘನತೆ, ಗೌರವವಿದೆ. ಶಾಂತಿ ಕಾಪಾಡಬೇಕಾಗಿರುವ ಸ್ವಾಮೀಜಿಗಳೇ ಸಂವಿಧಾನದ ವಿರುದ್ಧ ಮಾತನಾಡುವುದು ಸರಿಯಲ್ಲ. ಸ್ವಾಮೀಜಿ ದೇಶಕ್ಕೆ ಮಾದರಿಯಾಗಬೇಕೆ ಹೊರತು ಮಾರಕವಾಗಬಾರದು.

ಮುಂಡಗೋಡ: ಸಂವಿಧಾನದ ವಿರುದ್ಧ ಮಾತನಾಡಿದ ಉಡುಪಿಯ ಪೇಜಾವರ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ವಿರುದ್ಧ ಸರ್ಕಾರ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ದಲಿತ ರಕ್ಷಣಾ ವೇದಿಕೆ ಮತ್ತು ವಿವಿಧ ದಲಿತ ಸಂಘಟನೆಗಳ ವತಿಯಿಂದ ಸೋಮವಾರ ತಹಸೀಲ್ದಾರ್‌ ಮೂಲಕ ಮುಖ್ಯಮಂತ್ರಿಗೆ ಮನವಿ ಅರ್ಪಿಸಲಾಯಿತು.

ಸಂವಿಧಾನಕ್ಕೆ ಗೌರವ ಕೊಡುವುದು ಭಾರತದ ಪ್ರತಿಯೊಬ್ಬ ನಾಗರಿಕರ ಕರ್ತವ್ಯವಾಗಿದೆ. ಆದರೆ ಉಡುಪಿಯ ಪೇಜಾವರ ವಿಶ್ವಪ್ರಸನ್ನತೀರ್ಥ ಸ್ವಾಮೀಜಿಯವರು ಗೌರವ ಸಿಗುವ ಸಂವಿಧಾನ ಬರಬೇಕು ಎಂದು ಹೇಳುವ ಮೂಲಕ ಪರೋಕ್ಷವಾಗಿ ಸಂವಿಧಾನ ಬದಲಾವಣೆ ಆಗಬೇಕು ಎಂದಿದ್ದಾರೆ. ಇದು ಈ ದೇಶದ ಅಖಂಡ ಸಂವಿಧಾನಕ್ಕೆ ಮಾಡಿದ ಅಪಮಾನವಾಗಿದೆ ಎಂದು ಕಿಡಿಕಾರಿದರು.

ದೇಶದಲ್ಲಿ ಸ್ವಾಮೀಜಿಗಳಿಗೆ ಅವರದೆ ಆದ ಘನತೆ, ಗೌರವವಿದೆ. ಶಾಂತಿ ಕಾಪಾಡಬೇಕಾಗಿರುವ ಸ್ವಾಮೀಜಿಗಳೇ ಸಂವಿಧಾನದ ವಿರುದ್ಧ ಮಾತನಾಡುವುದು ಸರಿಯಲ್ಲ. ಸ್ವಾಮೀಜಿ ದೇಶಕ್ಕೆ ಮಾದರಿಯಾಗಬೇಕೆ ಹೊರತು ಮಾರಕವಾಗಬಾರದು ಎಂದರು.

ಆದ್ದರಿಂದ ಉಡುಪಿಯ ಪೇಜಾವರ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ವಿರುದ್ಧ ಕೂಡಲೇ ಸರ್ಕಾರ ಸ್ವಯಂಪ್ರೇರಣೆಯಿಂದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಸಂವಿಧಾನಕ್ಕೆ ಯಾರೇ ಅಪಮಾನ ಮಾಡಿದರೂ ಅವರ ವಿರುದ್ಧ ಕೂಡಲೇ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎಸ್. ಫಕ್ಕೀರಪ್ಪ, ದಲಿತ ರಕ್ಷಣಾ ವೇದಿಕೆ ರಾಜ್ಯ ಸಂಚಾಲಕ ಚಿದಾನಂದ ಹರಿಜನ, ಹನುಮಂತಪ್ಪ ಭಜಂತ್ರಿ, ಭೀಮಣ್ಣ ಬೋವಿ, ಎಸ್.ಎಸ್. ಪಾಟೀಲ, ಹನುಮಂತಪ್ಪ ಆರೆಗೊಪ್ಪ, ದಯಾನಂದ ಕಳಸಾಪುರ, ಮಾರ್ಟಿನ್ ಬಳ್ಳಾರಿ, ಗುಡ್ಡಪ್ಪ ವಾಸನ, ಜೂಜೆ ಸಿದ್ದಿ ಮುಂತಾದವರು ಉಪಸ್ಥಿತರಿದ್ದರು.ಶುಭಲತಾ ನಿಧನಕ್ಕೆ ಅಧಿವೇಶನದಲ್ಲಿ ಸಂತಾಪ

ಕಾರವಾರ: ವಿಧಾನಪರಿಷತ್ತಿನ ಮಾಜಿ ಸದಸ್ಯರಾಗಿದ್ದ ಶುಭಲತಾ ವಸಂತ್ ಅಸ್ನೋಟಿಕರ್ ಅವರ ನಿಧನಕ್ಕೆ ಬೆಳಗಾವಿ ಸುವರ್ಣ ಸೌಧದಲ್ಲಿ ನಡೆದ ಅಧಿವೇಶನದಲ್ಲಿ ಸಂತಾಪ ಸೂಚಿಸಲಾಯಿತು.ವಿಧಾನ ಪರಿಷತ್ತಿನಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಅವರು ಸಂತಾಪ ಸೂಚನೆಯ ನಿರ್ಣಯದ ಪ್ರತಿಯನ್ನು ಮಂಡಿಸಿದರು. ಸಭಾ ನಾಯಕ ಸಚಿವ ಬೋಸರಾಜು ಮತ್ತು ವಿರೋಧ ಪಕ್ಷದ ನಾಯಕ ಚಲವಾದಿ ನಾರಾಯಣ ಸ್ವಾಮಿ ಅವರು ಅಗಲಿದ ಶುಭಲತಾ ವಸಂತ್ ಅಸ್ನೋಟಿಕರ್ ಸೇವೆಯನ್ನು ಸ್ಮರಿಸಿ, ಅವರ ನಿಧನದಿಂದಾಗಿ ರಾಜ್ಯವು ಹಿರಿಯ ಜನಸೇವಕಿಯೊಬ್ಬರನ್ನು ಕಳೆದುಕೊಂಡಂತಾಗಿದೆ ಎಂದರು. ಮೃತರ ಗೌರವಾರ್ಥ ಸದನ ಒಂದು ನಿಮಿಷ ಮೌನಾಚಾರಣೆ ಮಾಡಿ ನಮನ ಸಲ್ಲಿಸಲಾಯಿತು.