ರೈತರ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹ

| Published : May 09 2025, 12:34 AM IST

ಸಾರಾಂಶ

ರೈತ ಸಂಘದಿಂದ ತಹಸೀಲ್ದಾರ್ ಬೀಭಿ ಪಾತೀಮಾಗೆ ಮನವಿ

ಕನ್ನಡಪ್ರಭ ವಾರ್ತೆ ಹೊಳಲ್ಕೆರೆ:

ದೇಶದಾದ್ಯಂತ ಇರುವ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಹೊಳಲ್ಕೆರೆ ತಹಸೀಲ್ದಾರ್ ಬೀಭಿ ಪಾತೀಮಾ ಅವರಿಗೆ ರೈತ ಸಂಘದಿಂದ ಮನವಿ ಸಲ್ಲಿಸಲಾಯಿತು.

ವಿಶ್ವ ರೈತ ನಾಯಕ ಪ್ರೊಫೆಸರ್ ಎಂ.ಡಿ.ನಂಜುಂಡಸ್ವಾಮಿ ಸ್ಥಾಪಿತ ಹಾಗೂ ರಾಷ್ಟ್ರೀಯ ಮಹತ್ವವಾದ ಬೃಹತ್ ರೈತ ಸಂಘ ಹಸಿರು ಸೇನೆ ವತಿಯಿಂದ ದೇಶದಲ್ಲಿರುವ ಸುಮಾರು ನಾನೂರಕ್ಕು ಹೆಚ್ಚು ನದಿಗಳ ನೀರನ್ನು ರೈತರಿಗೆ ಕೃಷಿ ಮಾಡಲು ಅನುಕೂಲವಾಗುವಂತಹ ಯೋಜನೆಗಳನ್ನು ಸರ್ಕಾರ ತರಬೇಕು ಎಂದು ಕಂಚೇನಹಳ್ಳಿ ಪಟೇಲ್ ಕೆ.ಎಚ್.ಎಸ್.ಪ್ರಸನ್ನಕುಮಾರ್ ಹಾಸನ ಜಿಲ್ಲೆ ಅರಸೀಕೆರೆ.

ತಾಲೂಕಿನಿಂದ ರೈತ ಮುಖಂಡರ ನೇತೃತ್ವದಲ್ಲಿ ಹೊರಟು ವಿವಿಧ ರಾಜ್ಯಗಳಲ್ಲಿ ಸಂಚರಿಸಿ ಜಿಲ್ಲಾಧಿಕಾರಿಗಳು ಹಾಗೂ ತಹಸೀಲ್ದಾರ್‌ಗಳಿಗೆ ನದಿಗಳ ಜೋಡಣೆ ಮಾಡಬೇಕೆಂದು ಮನವಿ ಸಲ್ಲಿಸಿ ಕೊನೆಗೆ ದೆಹಲಿಗೆ ರೈತರೊಂದಿಗೆ ತೆರಳಿ ಪ್ರಧಾನ ಮಂತ್ರಿಗಳು ಹಾಗೂ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಗುತ್ತದೆ ಎಂದು ತಿಳಿಸಿದರು.

ಅಲ್ಲದೇ ಹಾಸನ ಜಿಲ್ಲೆ ಬೇಲೂರು ತಾಲೂಕು ಹಳೇಬೀಡು ಹೋಬಳಿ ಐದಾಳು ಕಾವಲು ಸರ್ವೇ ನಂಬರ್ ಒಂದರಲ್ಲಿ 2,555 ಎಕರೆ ಜಮೀನನ್ನು ರೈತರಿಗೆ ಸಮರ್ಪಕವಾಗಿ ಹಂಚಿಕೆ ಮಾಡಿಲ್ಲ ಈ ವಿಚಾರವಾಗಿ ಭೂಮಿಗಾಗಿ ಹೋರಾಟ ಮಾಡಿದಂತಹ 885 ಜನ ರೈತರು ಅರ್ಜಿ ಸಲ್ಲಿಸಿದ್ದು ನಮಗೆ ಸರ್ಕಾರಿ ದಾಖಲೆಗಳನ್ನು ನೀಡಬೇಕು ಎಂದರು. ಈ ಸಂದರ್ಭದಲ್ಲಿ ರಾಜ್ಯ ಕಾರ್ಯಧ್ಯಕ್ಷ ಎಜೆಎಸ್ ಪಾಷಾ ಮಹಮ್ಮದ್ ದಸ್ತಗಿರಿ, ಸಂಘಟನಾ ಕಾರ್ಯದರ್ಶಿ ಮಹಮ್ಮದ್ ಖಾನ್, ನಂಜಮ್ಮ, ರಾಷ್ಟ್ರೀಯ ಯುವ ಸಮ್ಮಾನ್ ಪ್ರಶಸ್ತಿ ಪುರಸ್ಕೃತರು ಆದ ಚಿತ್ತಪ್ಪ, ಸೇರಿದಂತೆ ವಿವಿಧ ರೈತ ಮುಖಂಡರು ಇದ್ದರು.

ದೇಶದಾದ್ಯಂತ ಇರುವ ರೈತರ ವಿವಿಧ ಬೇಡಿಕೆ ಈಡೇರಿಸಬೇಕೆಂದು ಹೊಳಲ್ಕೆರೆ ತಹಸೀಲ್ದಾರ್ ಬೀಭಿ ಪಾತೀಮಾ ಅವರಿಗೆ ರೈತ ಸಂಘದಿಂದ ಮನವಿ ಸಲ್ಲಿಸಲಾಯಿತು. ವಿಶ್ವ ರೈತ ನಾಯಕ ಪ್ರೊಫೆಸರ್ ಎಂ.ಡಿ.ನಂಜುಂಡಸ್ವಾಮಿ ಸ್ಥಾಪಿತ ಹಾಗೂ ರಾಷ್ಟ್ರೀಯ ಮಹತ್ವವಾದ ಬೃಹತ್ ರೈತ ಸಂಘ ಹಸಿರು ಸೇನೆ ವತಿಯಿಂದ ದೇಶದಲ್ಲಿರುವ ಸುಮಾರು ನಾನುರಕ್ಕು ಹೆಚ್ಚು ನದಿಗಳ ನೀರನ್ನು ರೈತರಿಗೆ ಕೃಷಿ ಮಾಡಲು ಅನುಕೂಲವಾಗುವಂತಹ ಯೋಜನೆಗಳನ್ನು ಸರ್ಕಾರ ತರಬೇಕು ಎಂದು ಕಂಚೇನಹಳ್ಳಿ ಪಟೇಲ್ ಕೆ.ಎಚ್.ಎಸ್.ಪ್ರಸನ್ನ ಕುಮಾರ್ ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನಿಂದ ರೈತ ಮುಖಂಡರ ನೇತೃತ್ವದಲ್ಲಿ ಹೊರಟು ವಿವಿಧ ರಾಜ್ಯಗಳಲ್ಲಿ ಸಂಚರಿಸಿ ಜಿಲ್ಲಾಧಿಕಾರಿಗಳು ಹಾಗೂ ತಹಸೀಲ್ದಾರ್ ಗಳಿಗೆ ನದಿಗಳ ಜೋಡಣೆ ಮಾಡಬೇಕೆಂದು ಮನವಿ ಸಲ್ಲಿಸಿ ಕೊನೆಗೆ ದೆಹಲಿಗೆ ರೈತರೊಂದಿಗೆ ತೆರಳಿ ಪ್ರಧಾನ ಮಂತ್ರಿಗಳು ಹಾಗೂ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಗುತ್ತದೆ ಎಂದು ತಿಳಿಸಿದರು. ಅಲ್ಲದೇ ಹಾಸನ ಜಿಲ್ಲೆ ಬೇಲೂರು ತಾಲೂಕು ಹಳೇಬೀಡು ಹೋಬಳಿ ಐದಾಳು ಕಾವಲು ಸರ್ವೇ ನಂಬರ್ ಒಂದರಲ್ಲಿ 2,555 ಎಕರೆ ಜಮೀನನ್ನು ರೈತರಿಗೆ ಸಮರ್ಪಕವಾಗಿ ಹಂಚಿಕೆ ಮಾಡಿಲ್ಲ ಈ ವಿಚಾರವಾಗಿ ಭೂಮಿಗಾಗಿ ಹೋರಾಟ ಮಾಡಿದಂತಹ 8,85 ಜನ ರೈತರು ಅರ್ಜಿ ಸಲ್ಲಿಸಿದ್ದು ನಮಗೆ ಸರ್ಕಾರಿ ದಾಖಲೆಗಳನ್ನು ನೀಡಬೇಕು ಎಂದರು. ಈ ವೇಳೆ ರಾಜ್ಯ ಕಾರ್ಯಧ್ಯಕ್ಷ ಎಜೆಎಸ್ ಪಾಷಾ ಮಹಮ್ಮದ್ ದಸ್ತಗಿರಿ, ಸಂಘಟನಾ ಕಾರ್ಯದರ್ಶಿ ಮಹಮ್ಮದ್ ಖಾನ್, ನಂಜಮ್ಮ, ರಾಷ್ಟ್ರೀಯ ಯುವ ಸಮ್ಮಾನ್ ಪ್ರಶಸ್ತಿ ಪುರಸ್ಕೃತರು ಆದ ಚಿತ್ತಪ್ಪ, ಸೇರಿದಂತೆ ವಿವಿಧ ರೈತ ಮುಖಂಡರು ಇದ್ದರು.