ಸಾರಾಂಶ
ಲೋಕಾಪುರ ಪಟ್ಟಣದಲ್ಲಿ ಗುರುವಾರ ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ ಪುತ್ಥಳಿ ಸ್ಥಾಪಿಸಲು ಜಾಗೆ ನೀಡಲು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಅವರಿಗೆ ಪಟ್ಟಣದ ಡಾ.ಬಾಬಾಸಾಹೇಬ ಅಂಬೇಡ್ಕರ್ ಅಭಿಮಾನಿ ಬಳಗದಿಂದ ಮನವಿ ಸಲ್ಲಿಸಲಾಯಿತು.
ಕನ್ನಡಪ್ರಭ ವಾರ್ತೆ ಲೋಕಾಪುರ
ಪಟ್ಟಣದಲ್ಲಿ ಗುರುವಾರ ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ ಪುತ್ಥಳಿ ಸ್ಥಾಪಿಸಲು ಜಾಗೆ ನೀಡಲು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಅವರಿಗೆ ಪಟ್ಟಣದ ಡಾ.ಬಾಬಾಸಾಹೇಬ ಅಂಬೇಡ್ಕರ್ ಅಭಿಮಾನಿ ಬಳಗದಿಂದ ಮನವಿ ಸಲ್ಲಿಸಲಾಯಿತು.ಮನವಿಗೆ ಸ್ಪಂದಿಸಿದ ಸಚಿವರು ಆದಷ್ಟು ಶೀಘ್ರ ಸರ್ಕಾರದ ಜಾಗೆ ಕೊಡಿಸುವುದಾಗಿ ಭರವಸೆ ನೀಡಿದರು. ಹೊಳಬಸು ದಂಡಿನ, ರವಿ ಬೋಳಿಶೆಟ್ಟಿ, ಲಕ್ಷ್ಮಣ ಮಾಲಗಿ, ಗೋವಿಂದ ಕೌಲಗಿ, ಲೋಕಣ್ಣ ಉಳ್ಳಾಗಡ್ಡಿ, ಮಹೇಶ ಹುಗ್ಗಿ, ಕುಮಾರ ಕಾಳಮ್ಮನವರ, ಮುತ್ತಪ್ಪ ಗಡ್ಡದವರ, ಸಿಂಧೂರ ಆನೆಗುದ್ದಿ, ಗೋವಿಂದಪ್ಪ ಹುಗ್ಗಿ, ಯಶವಂತ ಮಾದರ, ಅಶೋಕ ದೊಡಮನಿ, ರಂಗನಾಥ ಚಿಪ್ಪಲಕಟ್ಟಿ, ಸುರೇಶ ಪೂಜಾರಿ, ಶಿವನಗೌಡ ಪಾಟೀಲ, ಶಂಕರೆಪ್ಪ ಪೂಜಾರಿ, ಮಹೇಶ ಪೂಜಾರ ಸೇರಿದಂತೆ ಪಟ್ಟಣದ ನಿವಾಸಿಗಳು ಇದ್ದರು.