ಬಾಂದಾರಗೆ ಗೇಟ್ ಅಳವಡಿಸಲು ಆಗ್ರಹ

| Published : Oct 10 2024, 02:22 AM IST

ಸಾರಾಂಶ

ರಟ್ಟೀಹಳ್ಳಿ ತಾಲೂಕಿನ ಸಣ್ಣಗುಬ್ಬಿ-ಹಿರೇಮಾದಾಪುರ ಗ್ರಾಮಗಳ ಮಧ್ಯ ಕುಮದ್ವತಿ ನದಿಗೆ ನಿರ್ಮಿಸಿರುವ ಬಾಂದಾರಿಗೆ ಗೇಟ್ ಅಳವಡಿಬೇಕು ಎಂದು ಸ್ಥಳೀಯ ರೈತರು ಸ್ಥಳೀಯ ಆಡಳಿತಕ್ಕೆ ಮನವಿ ಸಲ್ಲಿಸಿದ್ದಾರೆ.

ರಟ್ಟೀಹಳ್ಳಿ: ತಾಲೂಕಿನ ಸಣ್ಣಗುಬ್ಬಿ-ಹಿರೇಮಾದಾಪುರ ಗ್ರಾಮಗಳ ಮಧ್ಯ ಕುಮದ್ವತಿ ನದಿಗೆ ನಿರ್ಮಿಸಿರುವ ಬಾಂದಾರಿಗೆ ಗೇಟ್ ಅಳವಡಿಬೇಕು ಎಂದು ಸ್ಥಳೀಯ ರೈತರು ಹಾಗೂ ತಾಲೂಕು ಬಿಜೆಪಿ ಕಾರ್ಯಕರ್ತರು ತಹಸೀಲ್ದಾರ್ ಕಚೇರಿಯ ಶಿರಸ್ತೇದಾರ ಎಂ.ಎಸ್. ಜಗತಾಪ್ ಅವರಿಗೆ ಮನವಿ ಸಲ್ಲಿಸಿದರು.

ದೇವರಾಜ ನಾಗಣ್ಣನವರ ಮಾತನಾಡಿ, ಸಣ್ಣಗುಬ್ಬಿ ಹಿರೇಮಾದಾಪುರ ಗ್ರಾಮಗಳ ಮಧ್ಯ ಕುಮದ್ವತಿ ನದಿಗೆ ನಿರ್ಮಿಸಿರುವ ಬಾಂದಾರಗೆ ಆದಷ್ಟು ಬೇಗ ಗೇಟ್ ಅಳವಡಿಸಲು ಸಂಬಂಧಪಟ್ಟ ಇಲಾಖೆಗೆ ಸೂಚನೆ ನೀಡಬೇಕು. ಕಳೆದ ವರ್ಷ ಸಾಕಷ್ಟು ಬಾರಿ ಮನವಿ ಮಾಡಿದರೂ ಅಧಿಕಾರಿಗಳು, ಜನಪ್ರತಿನಿಧಿಗಳು ಸ್ಪಂದಿಸಿಲ್ಲ. ಈಗಲಾದರೂ ಗೇಟ್ ಅಳವಡಿಸಿ ಎಂದು ಮನವಿ ಮಾಡಲಾಯಿತು.

ಬಾಂದಾರಗೆ ಗೇಟ್ ಅಳವಡಿಸುವುದರಿಂದ ದೊಡ್ಡಗುಬ್ಬಿ, ಯಡಗೋಡಿ, ಮಾದಾಪುರ, ಸಣ್ಣಗುಬ್ಬಿ ಗ್ರಾಮಗಳ ನೂರಾರು ರೈತರಿಗೆ ಅನಕೂಲವಾಗುವುದು. ಜನಜಾನುವಾರು, ಅಂತರ್ಜಲ ಮಟ್ಟ ಹೆಚ್ಚುತ್ತದೆ. ಬೋರ್‌ವೆಲ್‌ಗಳು ರೀಚಾರ್ಜ್‌ ಆಗುವುದಲ್ಲದೆ ಬೇಸಿಗೆ ಸಮಯದಲ್ಲಿ ರೈತರಿಗೆ ಬೆಳೆ ಬೆಳೆಯಲು ಸಾಕಷ್ಟು ಅನುಕೂಲವಾಗುವುದು. ಆದ್ದರಿಂದ ಕಳೆದ ವರ್ಷ ಸಂಬಂಧಪಟ್ಟ ಅಧಿಕಾರಿಗಳಿಗೆ, ತಹಸೀಲ್ದಾರ್‌ಗೆ ಮನವಿ ಮಾಡಿದರೂ ಅದಕ್ಕೆ ಸ್ಪಂದಿಸಿಲ್ಲ. ಗೇಟ್ ಅಳವಡಿಸಿ ನೂರಾರು ಎಕರೆಗೆ ನೀರುಣಿಸಿದಂತಾಗುತ್ತದೆ, ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ತಹಸೀಲ್ದಾರ್ ಕಚೇರಿ ಆವರಣಕ್ಕೆ ಜಾನುವಾರುಗಳು, ಕುರಿ, ಮೇಕೆ ಹಸುಗಳನ್ನು ತಂದು ಅನಿರ್ದಿಷ್ಟಾವಧಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ರೈತ ಮುಖಂಡರಾದ ಕರಬಸಪ್ಪ ಬಸಾಪುರ, ಮಲ್ಲೇಶಪ್ಪ ಶಿರಗೇರಿ, ಶಿವಾನಂದಪ್ಪ ಬಸಾಪುರ, ಬಸವರಾಜ ಏಶಪ್ಪನವರ, ಶಿವಾಜಿ ದುಂಡಪ್ಪನವರ, ರವೀಂದ್ರ ಮಸವಳ್ಳಿ, ನಾರಾಯಣಗೌಡ, ಮಂಜುನಾಥ ಮಲ್ಲಾಡದ, ನಾರಾಯಣಪ್ಪ ಜಾಧವ, ಮಂಜಪ್ಪ ಅಸುಂಡಿ, ಶರಣಪ್ಪ ಶಿದ್ಲಿಂಗಪ್ಪನವರ, ಶಂಕ್ರಪ್ಪ ಮಳಗಿ, ಮೌನೇಶಪ್ಪ ಬಿಲ್ಲಳ್ಳಿ, ಶಿವಕುಮಾರ ಹಂಸಭಾವಿ, ಈರನಗೌಡ ಹುಲ್ಲತ್ತಿ, ಪ್ರಭು ಯತ್ನಳ್ಳಿ, ಶಿವನಗೌಡ ಚನ್ನಗೌಡ್ರ, ಪ್ರಶಾಂತ ಕಮ್ಮಾರ, ನಾಗರಾಜ ಬೈರೋಜಿ ಮುಂತಾದವರು ಇದ್ದರು.