ಸಾರಾಂಶ
ಸರ್ಕಾರಿ ಬಸ್ ಸೌಲಭ್ಯ ಕಲ್ಪಿಸುವಂತೆ ತಾಲೂಕಿನ ಅರಸೀಕೆರೆ ಮಾರ್ಗದ ಪ್ರೌಢಶಾಲಾ ಹಾಗೂ ಪಿಯು ಹಾಗೂ ಪದವಿ ಕಾಲೇಜಿನ ಅನೇಕ ಮಂದಿ ವಿದ್ಯಾರ್ಥಿಗಳು ಇಲ್ಲಿನ ಡಿಪೋ ಕಚೇರಿಯಲ್ಲಿ ಇಲ್ಲಿನ ಸಾರಿಗೆ ಘಟಕದ ನಿರೀಕ್ಷಕ ಶಿವಲಿಂಗಪ್ಪ ಅವರಿಗೆ ಸೋಮವಾರ ಮನವಿ ಪತ್ರ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ಪಾವಗಡ
ನಿಗದಿತ ಅವಧಿಗೆ ಪಾವಗಡ ನಗರಕ್ಕೆ ಸರಿಯಾದ ಬಸ್ ವ್ಯವಸ್ಥೆ ಕಲ್ಪಿಸದ ಪರಿಣಾಮ ಪಾಠ ಪ್ರವಚನ ಕೇಳಲು ಸಾಧ್ಯವಾಗದೆ ವಂಚಿತರಾಗುತ್ತಿದ್ದೇವೆ. ಕೂಡಲೇ ಸೂಕ್ತ ಕ್ರಮ ವಹಿಸಿ ಸರ್ಕಾರಿ ಬಸ್ ಸೌಲಭ್ಯ ಕಲ್ಪಿಸುವಂತೆ ತಾಲೂಕಿನ ಅರಸೀಕೆರೆ ಮಾರ್ಗದ ಪ್ರೌಢಶಾಲಾ ಹಾಗೂ ಪಿಯು ಹಾಗೂ ಪದವಿ ಕಾಲೇಜಿನ ಅನೇಕ ಮಂದಿ ವಿದ್ಯಾರ್ಥಿಗಳು ಇಲ್ಲಿನ ಡಿಪೋ ಕಚೇರಿಯಲ್ಲಿ ಇಲ್ಲಿನ ಸಾರಿಗೆ ಘಟಕದ ನಿರೀಕ್ಷಕ ಶಿವಲಿಂಗಪ್ಪ ಅವರಿಗೆ ಸೋಮವಾರ ಮನವಿ ಪತ್ರ ಸಲ್ಲಿಸಿದರು.ಇದೇ ವೇಳೆ ವಿದ್ಯಾರ್ಥಿ ಮುಖಂಡ ಅರಸೀಕೆರೆ ಶಿವಕುಮಾರ್ ಮಾತನಾಡಿ ಬೆಳಿಗ್ಗೆ 8ಗಂಟೆಗೆ ಶಿರಾ ಡಿಪೋದಿಂದ ಅರಸೀಕೆರೆ ಗ್ರಾಮಕ್ಕೆ ಸಾರಿಗೆ ಬಸ್ ಸೌಲಭ್ಯ ಕಲ್ಪಿಸಲಾಗಿತ್ತು. ಈಗ ಅದನ್ನು ನಿಲ್ಲಿಸಲಾಗಿದೆ. ಇದರಿಂದಾಗಿ ಗಡಿಯ ಅರಸೀಕೆರೆ ಗ್ರಾಮ ಮಾರ್ಗದಲ್ಲಿ ಬರುವ 12ಕ್ಕಿಂತ ಹೆಚ್ಚುಹಳ್ಳಿಗಳ ವಿದ್ಯಾರ್ಥಿಗಳು ನಿಗದಿಪಡಿಸಿದ ವೇಳೆಯಲ್ಲಿ ಶಾಲಾ ಕಾಲೇಜುಗಳಿಗೆ ಆಗಮಿಸಲು ಸಾಧ್ಯವಾಗುತ್ತಿಲ್ಲ. ಅರಸೀಕೆರೆ, ಮಂಗಳವಾಡ ಸಿ.ಕೆ.ಪುರ ವಿ.ಎಚ್.ಪಾಳ್ಯ ಗುಂಡಾರ್ಲಹಳ್ಳಿ ಮಾರ್ಗವಾಗಿ ನಾಳೆಯಿಂದಲೇ ಸರ್ಕಾರಿ ಬಸ್ ನಿಯೋಜಿಸುವ ಮೂಲಕ ವಿದ್ಯಾರ್ಥಿಗಳ ಭವಿಷ್ಯಕ್ಕೆ ಅನುಕೂಲ ಕಲ್ಪಿಸುವಂತ ಒತ್ತಾಯಿಸಿದರು.ಈ ವೇಳೆ ವಿದ್ಯಾರ್ಥಿ ಮುಖಂಡ ಅನಿಲ್ ಮಹಾದೇವ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಾದ ಸಾಗರ್, ಸೋಮಶೇಖರ್, ರಾಜೇಶ್, ವಿರುಪಾಕ್ಷ, ಧನುಶ್, ಚಿರಂಜೀವಿ,ಅಭಿಲಾಷ್,ದರ್ಶನ್,ಆರ್.ಸಾಗರ್ ಹಾಗೂ ಇತರೆ ಅನೇಕ ಮಂದಿ ವಿದ್ಯಾರ್ಥಿಗಳು ಇದ್ದರು.