ಸಾರಾಂಶ
ಅರ್ಹ ಅಂಗವಿಲರಿಗೆ ಮೋಟಾರ್ ಚಾಲಿತ ವಾಹನ ನೀಡಬೇಕು ಎಂದು ನಗರಸಭೆ ಅಧ್ಯಕ್ಷ ರೂಪೇಶ್‌ಕುಮಾರ ಅವರಿಗೆ ಬುಧವಾರ ನಗರ ಘಟಕ ವಿಕಲಚೇತನರ ಸಂಘಟನೆ ವತಿಯಿಂದ ಬುಧವಾರ ಮನವಿ ಸಲ್ಲಿಸಲಾಯಿತು.
ನಗರ ಘಟಕ ವಿಕಲಚೇತನರ ಸಂಘಟನೆ ವತಿಯಿಂದ ನಗರಸಭೆ ಅಧ್ಯಕ್ಷರಿಗೆ ಮನವಿ
ಕನ್ನಡಪ್ರಭ ವಾರ್ತೆ ಹೊಸಪೇಟೆಅರ್ಹ ಅಂಗವಿಲರಿಗೆ ಮೋಟಾರ್ ಚಾಲಿತ ವಾಹನ ನೀಡಬೇಕು ಎಂದು ನಗರಸಭೆ ಅಧ್ಯಕ್ಷ ರೂಪೇಶ್‌ಕುಮಾರ ಅವರಿಗೆ ಬುಧವಾರ ನಗರ ಘಟಕ ವಿಕಲಚೇತನರ ಸಂಘಟನೆ ವತಿಯಿಂದ ಬುಧವಾರ ಮನವಿ ಸಲ್ಲಿಸಲಾಯಿತು.
ನಗರಸಭೆಯ ಶೇ.5ರ ಅಂಗವಿಲರ ಅನುದಾನದಲ್ಲಿ ಮೋಟಾರ್ ಚಾಲಿತ ವಾಹನ ವಿತರಣೆ ಮಾಡಲಿದ್ದು, ಸರ್ಕಾರದ ನಿಮಯಗಳು ಮತ್ತು ವಿಕಲಚೇತನರ ಇಲಾಖೆಯ ನಿಯಮವಳಿಗಳನ್ನು ಅನುಸರಿಸಿ ಇಲ್ಲಿವರೆಗೂ ಯಾರಿಗೆ ಮೋಟಾರ್ ಚಾಲಿತ ವಾಹನಗಳು ಸಿಕ್ಕಿಲ್ಲವೋ ಅಂತವರನ್ನು ಪರಿಗಣಿಸಿ ನೀಡಬೇಕು. ಈ ಹಿಂದೆ ನಗರಸಭೆ ವತಿಯಿಂದ ಪಡೆದವರಿಗಾಗಲಿ, ದಾನಿಗಳಿಂದ ಪಡೆದವರಿಗಾಗಲಿ, ವಿಕಲಚೇತನರ ಇಲಾಖೆಯಿಂದ ಪಡೆದವರಿಗಾಗಲಿ, ಸಂಘ-ಸಂಸ್ಥೆಗಳಿಂದ ಪಡೆದವರಿಗಾಗಲಿ ಮತ್ತು ರಾಜಕಾರಣಿಗಳಿಂದ ಪಡೆದವರಿಗಾಗಲಿ ನೀಡದೆ ಅರ್ಹ ವಿಕಲಚೇತನರಿಗೆ ನೀಡಬೇಕು ಎಂದು ಒತ್ತಾಯಿಸಿದರು.ನಗರಸಭೆ ಅಧ್ಯಕ್ಷ ರೂಪೇಶ್ ಮನವಿ ಸ್ವೀಕರಿಸಿ ಅರ್ಹ ವಿಕಲಚೇತನರಿಗೆ ನೀಡಲು
ಅಧಿಕಾರಿ ವರ್ಗದವರೊಂದಿಗೆ ಚರ್ಚೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.ಸಂಘಟನೆಯ ನಗರ ಘಟಕ ಅಧ್ಯಕ್ಷ ಲೋಹಿತ್ ತಳವಾರ್, ಉಪಾಧ್ಯಕ್ಷ ಮೆಹಬೂಬ್ ಬಾಷಾ, ಕಾರ್ಯದರ್ಶಿ ಪಾಂಡು ನಾಯ್ಕ, ಸಂಘಟನೆಯ ಸಲಹೆಗಾರರಾದ ಎನ್. ವೆಂಕಟೇಶ್, ಎನ್. ಹುಲಿಗೆಮ್ಮ, ಸದಸ್ಯರಾದ ರಾಜಸಾಬ್, ಹುಲುಗಪ್ಪ, ತಾಯಣ್ಣ, ಹಜರತ್ ಅಲಿ, ದಾದು, ಮಾಬಾಷಾ, ತಾಯಮ್ಮ, ಗಂಗಮ್ಮ ಮತ್ತಿತರರಿದ್ದರು.