ಸಾರಾಂಶ
ತಾಲೂಕಿನ ಬಿಸಲಹಳ್ಳಿ ಹಾಗೂ ತಿಮ್ಮೇನಹಳ್ಳಿ ಗ್ರಾಮದಲ್ಲಿ ಮದ್ಯ ಮಾರಾಟವನ್ನು ನಿಲ್ಲಿಸುವಂತೆ ಆಗ್ರಹಿಸಿ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಗ್ರಾಮಸ್ಥರು ಶುಕ್ರವಾರ ಅಬಕಾರಿ ಉಪ ಅಧೀಕ್ಷಕ ಶಂಕರ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಬ್ಯಾಡಗಿ: ತಾಲೂಕಿನ ಬಿಸಲಹಳ್ಳಿ ಹಾಗೂ ತಿಮ್ಮೇನಹಳ್ಳಿ ಗ್ರಾಮದಲ್ಲಿ ಮದ್ಯ ಮಾರಾಟವನ್ನು ನಿಲ್ಲಿಸುವಂತೆ ಆಗ್ರಹಿಸಿ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಗ್ರಾಮಸ್ಥರು ಶುಕ್ರವಾರ ಅಬಕಾರಿ ಉಪ ಅಧೀಕ್ಷಕ ಶಂಕರ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹನುಮಂತಪ್ಪ ಮಾತನಾಡಿ, ಕಳೆದ ಕೆಲವು ದಿನಗಳ ಹಿಂದೆ ಯಾರಿಗೂ ಹೇಳದೆ ಕೇಳದೆ ಬಿಸಲಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ತಿಮ್ಮೇನಹಳ್ಳಿ ಗ್ರಾಮದಲ್ಲಿ ನೂತನವಾಗಿ ಮದ್ಯ ಮಾರಾಟ ಮಳಿಗೆಯನ್ನು ತೆರೆಯಲಾಗಿತ್ತು, ಸಂದರ್ಭದಲ್ಲಿ ಗ್ರಾಮಸ್ಥರು ಹಾಗೂ ಗ್ರಾಮ ಪಂಚಾಯತಿ ಸದಸ್ಯರು ಸೇರಿ ಕೊಂಡು ಮದ್ಯ ಮಾರಾಟ ಮಾಡದಂತೆ ಪ್ರತಿಭಟನೆ ನಡೆಸಿ ಮದ್ಯದಂಗಡಿಯನ್ನು ಬಂದ ಮಾಡಿಸಲಾಗಿತ್ತು. ಆದರೆ ಶುಕ್ರವಾರ ಮತ್ತೆ ಗ್ರಾಮದಲ್ಲಿ ವಿರೋಧದ ನಡುವೆಯೇ ಮದ್ಯದಂಗಡಿಯನ್ನು ತೆರೆಯಲಾಗಿದೆ ಇದು ಖಂಡನೀಯ. ಆದ್ದರಿಂದ ಯಾವುದೇ ಕಾರಣಕ್ಕೂ ಬಿಸಲಹಳ್ಳಿ ಹಾಗೂ ತಿಮ್ಮೇನಹಳ್ಳಿ ಗ್ರಾಮದಲ್ಲಿ ಅಂಗಡಿಯಿಂದ ತೆರೆಯಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು.ಗ್ರಾಪಂ.ಸದಸ್ಯ ವೀರನಗೌಡ ಗೌಡ್ರ ಮಾತನಾಡಿ, ಗ್ರಾಮದ ಹಿತರಕ್ಷಣೆಗಾಗಿ ಇಡೀ ಗ್ರಾಮಸ್ಥರೇ ಮದ್ಯದ ಅಂಗಡಿ ಬೇಡ ಎನ್ನುತ್ತಿರುವಾಗ ಅಬಕಾರಿ ಅಧಿಕಾರಿಗಳಿಗೆ ಇಷ್ಟೊಂದು ಅವರ ಮೇಲೆ ಪ್ರೀತಿ ತಿಳಿಯುತ್ತಿಲ್ಲ, ಕೂಡಲೇ ಮದ್ಯದಂಗಡಿಯನ್ನು ತೆರೆಯದಂತೆ ಮತ್ತು ಇಲ್ಲಿಂದ ಸ್ಥಳಾಂತರಿಸಲು ಸೂಚನೆ ನೀಡಬೇಕು ಇಲ್ಲದಿದ್ದಲ್ಲಿ ನಮ್ಮ ಹೋರಾಟ ನಿಲ್ಲಲ್ಲ ಎಂದರು. ಈ ಸಂದರ್ಭದಲ್ಲಿ ಮಾರುತಿ ಕಬ್ಬಾರ, ಷಣ್ಮುಖ ಮುಚ್ಚಟ್ಟಿ, ಕರಬಸಪ್ಪ, ಸುರೇಶ ಹೊಸಳ್ಳಿ, ಚೆನ್ನಮ್ಮ ಮುಚ್ಚಟ್ಟಿ, ಟಿಪ್ಪುಸುಲ್ತಾನ ಹುಲ್ಮನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.