ಗಿರೀಶ್ ಮಟ್ಟಣ್ಣನವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹ

| Published : Sep 30 2024, 01:18 AM IST

ಗಿರೀಶ್ ಮಟ್ಟಣ್ಣನವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಜೈನ ಧರ್ಮ ಪುರಾತನ ಹಾಗೂ ಪವಿತ್ರದ್ದಾಗಿದ್ದು ಶಾಂತಿ ಮತ್ತು ಅಹಿಂಸೆ ಇದರ ಉದ್ದೇಶವಾಗಿದೆ. ಇಂತಹ ಜೈನ ಧರ್ಮ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡುತ್ತಿರುವ ಗಿರೀಶ್ ಮಟ್ಟಣ್ಣನವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಹಾವೇರಿ ಜಿಲ್ಲಾ ದಿಗಂಬರ ಜೈನ ಸಮಾಜದವರಿಂದ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಹಾವೇರಿ: ಜೈನ ಧರ್ಮ ಪುರಾತನ ಹಾಗೂ ಪವಿತ್ರದ್ದಾಗಿದ್ದು ಶಾಂತಿ ಮತ್ತು ಅಹಿಂಸೆ ಇದರ ಉದ್ದೇಶವಾಗಿದೆ. ಇಂತಹ ಜೈನ ಧರ್ಮ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡುತ್ತಿರುವ ಗಿರೀಶ್ ಮಟ್ಟಣ್ಣನವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಹಾವೇರಿ ಜಿಲ್ಲಾ ದಿಗಂಬರ ಜೈನ ಸಮಾಜದವರಿಂದ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಹಾವೇರಿ ಜಿಲ್ಲಾ ದಿಗಂಬರ ಜೈನ ಸಮಾಜದ ಅಧ್ಯಕ್ಷ ಮಂಜಪ್ಪ ತಡಸದ ನೇತೃತ್ವದಲ್ಲಿ ನಡೆದ ಪ್ರತಿಭಟನಾ ಕಾರ್ಯಕ್ರಮದಲ್ಲಿ ಜೈನ ಧರ್ಮ ಶಾಂತಿ ಮತ್ತು ಅಹಿಂಸಾ ತತ್ವಗಳನ್ನು ಪುರಾತನ ಕಾಲದಿಂದಲೂ ತೀರ್ಥಂಕರು ಪಾಲಿಸುತ್ತಿದ್ದು, ಅದನ್ನೇ ಈಗಲು ಜೈನ ಧರ್ಮ ಪಾಲಿಸುತ್ತಿದೆ. ಕನ್ನಡದ ಕವಿಗಳಾದ ರನ್ನ, ಪಂಪ, ಪೊನ್ನ, ಜನ್ನ , ನಾಗಚಂದ್ರ ಕನ್ನಡ ಸಾಹಿತ್ಯಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ. ಇಂತಹ ಧರ್ಮವನ್ನು ನೆನಪಿನಲ್ಲಿಟ್ಟುಕೊಳ್ಳುವುದು ಸಮಾಜದ ಕರ್ತವ್ಯ. ಆದರೆ ನೀಚ ಮತ್ತು ಭ್ರಷ್ಟನಾಗಿರುವ ಗಿರೀಶ ಮಟ್ಟಣ್ಣನವರ ಜೈನ ಧರ್ಮವನ್ನು ಹಿಂಸಾ ಧರ್ಮ ಹಿಂದೂ ರಾಜರುಗಳನ್ನು ಜೈನ ಧರ್ಮಕ್ಕೆ ಮತಾಂತರಿಸಿದ್ದಾರೆ, ಅಧಿಕಾರಕ್ಕಾಗಿ ಬ್ರಿಟಿಷರ ಕಾಲನ್ನು ನೆಕ್ಕಿ ಅಧಿಕಾರ ಪಡೆದರು ಎಂದು ಸಾಮಾಜಿಕ ಜಾಲತಾಣಗಳ ಮೂಲಕ ಅವಹೇಳನ ಮಾಡಿದ್ದಾರೆ. ಗೋಮಟೇಶ್ವರ ಮೂರ್ತಿಯನ್ನು ಕೆತ್ತಿದ ಶಿಲ್ಪಿಗಳ ಕೈಗಳನ್ನು ಕತ್ತರಿಸಿದ್ದಾರೆ, ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ವಿರುದ್ಧ ದುಷ್ಟರ ಕೂಟವನ್ನು ಕಟ್ಟಿಕೊಂಡು ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿದ್ದಾರೆ. ಇಂತಹ ಕಿಡಿಗೇಡಿಯನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಹಾವೇರಿ ಜಿಲ್ಲಾ ದಿಗಂಬರ ಜೈನ ಸಮಾಜದ ಗೌರವ ಅಧ್ಯಕ್ಷ ಭರತರಾಜ ಹಜಾರಿ, ಉಪಾಧ್ಯಕ್ಷ ಶಿವರಾಯಪ್ಪ ಅಪ್ಪಣ್ಣನವರ, ಪ್ರಧಾನ ಕಾರ್ಯದರ್ಶಿ ವಿಜಯಕುಮಾರ ಸಾತಗೊಂಡ, ಖಜಾಂಚಿ ಸುಧೀರ ಚಲ್ಸಿ, ಶಶಿಧರ ಗೌಡ್ರ, ರಮೇಶ ಕಳಸೂರ, ಶಿವಣ್ಣ ಜಾನಣ್ಣನವರ, ಪದ್ಮರಾಜ ಕಳಸೂರ, ಭರತೇಶ ಜಗಣ್ಣನವರ, ಪ್ರಶಾಂತ ಹೋಳಗಿ, ಸುರೇಶ ಹಂಚಿನಮನಿ, ಶ್ರೀಧರ ವರೂರ, ಶಂಕ್ರಪ್ಪ ದುಂಡಣ್ಣನವರ, ಜಿಲ್ಲೆಯ ಜೈನ ಸಮಾಜದ ಮುಖಂಡರು, ಎಲ್ಲಾ ಗ್ರಾಮಗಳ ಶ್ರಾವಕ-ಶ್ರಾವಕಿಯರು ಪಾಲ್ಗೊಂಡಿದ್ದರು.