ಲಕ್ಷ್ಮೇಶ್ವರ: ಪಟ್ಟಣದ ಹೊಸ ಬಸ್ ನಿಲ್ದಾಣದ ಎದುರು ಇರುವ ಐಡಿಎಸ್‌ಎಂಟಿ ಯೋಜನೆ ಅಡಿಯಲ್ಲಿ ನಿರ್ಮಿಸಿರುವ ಪುರಸಭೆಯ ವಾಣಿಜ್ಯ ಮಳಿಗೆಯಲ್ಲಿ ಬಾಡಿಗೆ ಇರುವ ಅಂಗಡಿಗಳ ಅವಧಿ ಮುಕ್ತಾಯಗೊಂಡಿದ್ದರೂ ಹಾಗೆ ಇರುವ ಅಂಗಡಿಗಳನ್ನು ತೆರವುಗೊಳಿಸಿ ಬೇರೆಯವರಿಗೆ ಹೆಚ್ಚಿನ ಬಾಡಿಗೆಗೆ ನೀಡುವಂತೆ ತಾಲೂಕು ಜಯಕರ್ನಾಟಕ ವೇದಿಕೆ ಹಾಗೂ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಸದಸ್ಯರು ಆಗ್ರಹಿಸಿದರು.
ಪುರಸಭೆಯ ಕಂದಾಯ ನಿರೀಕ್ಷಕ ನಾಗರಾಜ ಪೂಜಾರ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಸದಸ್ಯ ಬಸವರಾಜ ಹಿರೇಮನಿ ಅವರು, ಕಳೆದ ಹಲವು ವರ್ಷಗಳಿಂದ ಪುರಸಭೆಯ ವ್ಯಾಪ್ತಿಯಲ್ಲಿನ ಐಡಿಎಸ್‌ಎಂಟಿ ಯೋಜನೆಯಲ್ಲಿ ನಿರ್ಮಿಸಿರುವ ಅಂಗಡಿಗಳಲ್ಲಿ ಹಲವು ವರ್ಷಗಳಿಂದ ಕೆಲವರು ಮಾತ್ರ ಕಡಿಮೆ ಬಾಡಿಗೆಯಲ್ಲಿ ಇದ್ದಾರೆ. ಇದರಿಂದ ಪುರಸಭೆಗೆ ಲಕ್ಷಾಂತರ ರು. ಹಾನಿಯಾಗಿದೆ ಎಂದರು.ಇಷ್ಟಾದರೂ ಪುರಸಭೆಯ ಅಧಿಕಾರಿಗಳು ಮಾತ್ರ ತಮಗೇನು ಗೊತ್ತಿಲ್ಲವೆಂಬ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಕೂಡಲೆ ಈ ಹಿಂದೆ ಬಾಡಿಗೆ ಇರುವ ಅಂಗಡಿಕಾರರನ್ನು ಹೊರಹಾಕಿ ಬೇರೆಯವರಿಗೆ ಅಂದರೆ ಹೆಚ್ಚಿನ ಬಾಡಿಗೆ ನೀಡುವವರಿಗೆ ಕೊಡುವುದರಿಂದ ಪುರಸಭೆಗೆ ಹೆಚ್ಚಿನ ಆದಾಯ ಬರುತ್ತದೆ. ಕೂಡಲೆ ಬಾಡಿಗೆ ಅವಧಿ ಮುಗಿದಿರುವ ಅಂಗಡಿಯನ್ನು ತೆರವುಗೊಳಿಸಬೇಕು ಎಂದು ಮನವಿ ಮಾಡಿದರು.
ಸುರೇಶ ಹಟ್ಟಿ, ಇಸ್ಮಾಯಿಲ್ ಆಡೂರ, ಮಂಜುನಾಥ ಮುಳಗುಂದ, ಮಹಾಂತೇಶ, ಮೈಲಾರೆಪ್ಪ ಹೆಗ್ಗಣ್ಣವರ, ಭರಮಣ್ಣ ಶೆರಸೂರಿ, ಮಹೇಶ ಸೂರಣಗಿ, ಸಂಜೀವ ಶೆರಸೂರಿ ಇದ್ದರು.ಆಕಸ್ಮಿಕ ಬೆಂಕಿಗೆ ದನದ ಶೆಡ್ ಭಸ್ಮಲಕ್ಷ್ಮೇಶ್ವರ: ಪಟ್ಟಣದ ಹೊರವಲಯದ ದೊಡ್ಡೂರು ಗ್ರಾಮದ ಹದ್ದಿನಲ್ಲಿರುವ ಮಹ್ಮದಸಾಬ್ ಸಿದ್ದಿ ಎಂಬವರ ಜಮೀನಿನಲ್ಲಿ ನಿರ್ಮಿಸಿರುವ ದನದ ಶೆಡ್‌ಗೆ ಆಕಸ್ಮಿಕ ಬೆಂಕಿ ತಗುಲಿ ನೀರಾವರಿಗೆ ಸಂಬಂಧಿಸಿದ ಪರಿಕರಗಳು ಹಾಗೂ ಗೋವಿನಜೋಳದ ಬೀಜ ಮತ್ತು ಗೊಬ್ಬರ ಸುಟ್ಟ ಕರಕಲಾದ ಘಟನೆ ಬುಧವಾರ ತಡರಾತ್ರಿ ನಡೆದಿದೆ.ಘಟನೆಯಲ್ಲಿ ನೀರಾವರಿಯ ಪೈಪ್ ಗಳು, ಕೃಷಿ ಪರಿಕರಗಳು, ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಲು ಇಟ್ಟಿದ್ದ ಗೊಬ್ಬರದ ಚೀಲಗಳು ಹಾಗೂ 8- 10 ಪಾಕೀಟ್ ಗೋವಿನ ಜೋಳದ ಬಿತ್ತನೆಯ ಬೀಜ ಸೇರಿದಂತೆ ಲಕ್ಷಾಂತರ ರು. ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾಗಿವೆ. ಈ ಕುರಿತು ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಂದಾಯ ಅಧಿಕಾರಿಗಳ ಭೇಟಿ: ದೊಡ್ಡೂರು ಗ್ರಾಮದ ಹದ್ದಿನಲ್ಲಿ ಬರುವ ಮಹ್ಮದ್ ಸಾಬ್ ಸಿದ್ದಿ ಅವರ ಜಮೀನಿನಲ್ಲಿ ನಿರ್ಮಿಸಿರುವ ದನದ ಶೆಡ್‌ಗೆ ಆಕಸ್ಮಿಕ ಬೆಂಕಿ ತಗುಲಿ ಸುಟ್ಟ ಹೋದ ಸ್ಥಳಕ್ಕೆ ಗ್ರಾಮಲೆಕ್ಕಾಧಿಕಾರಿ ಕೃಷ್ಣ ಪಾಟೀಲ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿ ಹಾನಿಯ ವರದಿಯನ್ನು ತಹಸೀಲ್ದಾರ್ ಧನಂಜಯ ಎಂ. ಅವರಿಗೆ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.