ಕಿಡಿಗೇಡಿಗಳ ಗಡಿಪಾರಿಗೆ ಒತ್ತಾಯಿಸಿ ಮನವಿ

| Published : Jan 24 2024, 02:00 AM IST

ಸಾರಾಂಶ

ಬಾಬಾಸಾಹೇಬರು ತಮ್ಮ ಜೀವತಾವಧಿಯಲ್ಲಿ ಎಲ್ಲರ ಏಳಿಗೆಯನ್ನು ಬಯಸಿ ಸರ್ವರಿಗೂ ಅನುಕೂಲವಾಗುವ ಸಂವಿಧಾನವನ್ನು ರಚಿಸಿ ವಿಶ್ವದಲ್ಲಿಯೇ ಮಾದರಿಯಾಗಿದ್ದಾರೆ. ಇಂತಹ ಮಹಾನ್ ನಾಯಕರ ವಿರುದ್ದ ಕೆಲ ಕಿಡಿಗೇಡಿಗಳು ಅವರ ಪುತ್ತಳಿಗೆ ಅವಮಾನ ಮಾಡಿ ಇಡಿ ದೇಶವೇ ತಲೆ ತಗ್ಗಿಸುವ ಕೆಲಸ ಮಾಡಿದ್ದು ಇಂತಹ ಕೃತ್ಯ ಎಸಗಿರುವ ಕಿಡಿಗೇಡಿಗಳನ್ನು ಬಂದಿಸಿ ಅವರಿಗೆ ಗಡಿಪಾರು ಮಾಡಬೇಕು.

ಕನ್ನಡಪ್ರಭ ವಾರ್ತೆ ಚಿತ್ತಾಪುರ

ಸರ್ವರಿಗೂ ಸಮಬಾಳು ಹಾಗೂ ಸಮಪಾಲು ಎನ್ನುವ ಸಿದ್ದಾಂತದಲ್ಲಿ ಸರ್ವರಿಗೂ ನ್ಯಾಯ ಒದಗಿಸಲು ಬಾಬಾಸಾಹೇಬರು ತಮ್ಮ ಜೀವತಾವಧಿಯಲ್ಲಿ ಎಲ್ಲರ ಏಳಿಗೆಯನ್ನು ಬಯಸಿ ಸರ್ವರಿಗೂ ಅನುಕೂಲವಾಗುವ ಸಂವಿಧಾನವನ್ನು ರಚಿಸಿ ವಿಶ್ವದಲ್ಲಿಯೇ ಮಾದರಿಯಾಗಿದ್ದಾರೆ. ಇಂತಹ ಮಹಾನ್ ನಾಯಕರ ವಿರುದ್ದ ಕೆಲ ಕಿಡಿಗೇಡಿಗಳು ಅವರ ಪುತ್ತಳಿಗೆ ಅವಮಾನ ಮಾಡಿ ಇಡಿ ದೇಶವೇ ತಲೆ ತಗ್ಗಿಸುವ ಕೆಲಸ ಮಾಡಿದ್ದು ಇಂತಹ ಕೃತ್ಯ ಎಸಗಿರುವ ಕಿಡಿಗೇಡಿಗಳನ್ನು ಬಂದಿಸಿ ಅವರಿಗೆ ಗಡಿಪಾರು ಮಾಡಬೇಕು ಎಂದು ದಲಿತ ಸಂಘಟನೆಗಳ ಸಮನ್ವಯ ಸಮಿತಿ ಮುಖಂಡ ಆನಂದ ಕಲ್ಲಕ್ಕ್ ಒತ್ತಾಯಿಸಿದರು.

ಪಟ್ಟಣದ ಲಾಡ್ಜಿಂಗ್ ಕ್ರಾಸ್ ಬಳಿ ಬೃಹತ್ ಪ್ರತಿಭಟನೆ ನಂತರ ಮಾತನಾಡಿದ ಅವರು ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಕೆಲಸ ಮಾಡುತ್ತಿರುವ ಕಿಡಿಗೇಡಿಗಳು ಯಾರೇ ಆದರೂ ಅವರ ವಿರುದ್ದ ಕಠೀಣ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಮುಖಂಡರಾದ ಮಹೇಶ ಕಾಶಿ ಪ್ರತಿಭಟನೆಕಾರರನ್ನು ಉದ್ದೇಶಿಸಿ ಮಾತನಾಡಿದರು. ದಲಿತ ಸಂಘಟನೆಗಳ ಮುಖಂಡರಾದ ಶ್ರೀಕಾಂತ ಶೀಂಧೆ, ಜಗನಾಥ ಮುಡಬೂಳಕರ್, ನಾಗೇಂದ್ರ ಬುರ್ಲಿ, ಸಂಜಯ ಬುಳಕರ್, ವಿಜಯ ಕಲ್ಲಕ್, ಸಾಯಬಣ್ಣ ಆರಬೋಳ, ಕುಶಾಲ ನಾಟೀಕಾರ, ಗಂಗಾಧರ ಕೊಡದೂರ, ಚಂದ್ರಪ್ಪ ನಾಟೀಕಾರ, ಮಾರುತಿ ಅಳ್ಳೊಳ್ಳಿ, ದುರಗೇಶ ಅಣ್ಣಕೇರಿ, ದೇವಿದಾಸ ಜೌರಸಂಗ, ಶಿವರಾಜ ಕ್ಯಾಂಟಿ, ಸುನಿಲ್ ಬಡಿಗೇರ, ಸಾಬಣ್ಣ ನಾಗಾವಿ ಚೌಕ, ವಿಕಾಸ ಮತ್ತಿಮೂಡ ಇತರರು ಇದ್ದರು.