ಮತದಾನದಿಂದ ಮಾತ್ರ ಪ್ರಜಾಪ್ರಭುತ್ವದ ಉಳಿವು

| Published : Mar 31 2024, 02:04 AM IST

ಸಾರಾಂಶ

ಮತದಾನದಿಂದ ಮಾತ್ರ ಪ್ರಜಾಪ್ರಭುತ್ವದ ಉಳಿವು ಸಾಧ್ಯ. ಮತದಾನ ಎಂಬ ಅಮೂಲ್ಯವಾದ ಹಕ್ಕನ್ನು ಚಲಾಯಿಸುವ ಮೂಲಕ ನಮಗೆ ಬೇಕಾದ ವ್ಯಕ್ತಿಯನ್ನು ಆಯ್ಕೆ ಮಾಡುವ ಸ್ವಾತಂತ್ರ್ಯ ನಮಗಿದೆ

ಲಕ್ಷ್ಮೇಶ್ವರ: ಮತದಾನದಿಂದ ಮಾತ್ರ ಪ್ರಜಾಪ್ರಭುತ್ವದ ಉಳಿವು ಸಾಧ್ಯ. ತಪ್ಪದೆ ಪ್ರತಿಯೊಬ್ಬರು ಮತದಾನ ಮಾಡಬೇಕು ಎಂದು ಕೃಷಿ ಅಧಿಕಾರಿ ಚಂದ್ರಶೇಖರ ನರಸಮ್ಮನವರ ಹೇಳಿದರು.

ಶನಿವಾರ ಪಟ್ಟಣದ ತಾಪಂ ಕಚೇರಿಯಲ್ಲಿ ಕೃಷಿ ಇಲಾಖೆ ಹಾಗೂ ತೋಟಗಾರಿಕಾ ಇಲಾಖೆ ಸಹಯೋಗದಲ್ಲಿ ನಡೆದ ಮತದಾನ ಜಾಗೃತಿ ಜಾಥಾದಲ್ಲಿ ಭಾಗವಹಿಸಿ ಮಾತನಾಡಿದರು.

ಮತದಾನ ಮಾಡುವುದು ನಮ್ಮೆಲ್ಲರ ಪವಿತ್ರ ಕರ್ತವ್ಯವಾಗಿದೆ. ಮತದಾನದಿಂದ ಮಾತ್ರ ಪ್ರಜಾಪ್ರಭುತ್ವದ ಉಳಿವು ಸಾಧ್ಯ. ಮತದಾನ ಎಂಬ ಅಮೂಲ್ಯವಾದ ಹಕ್ಕನ್ನು ಚಲಾಯಿಸುವ ಮೂಲಕ ನಮಗೆ ಬೇಕಾದ ವ್ಯಕ್ತಿಯನ್ನು ಆಯ್ಕೆ ಮಾಡುವ ಸ್ವಾತಂತ್ರ್ಯ ನಮಗಿದೆ. ಮತದಾನವು ಪ್ರಜಾಪ್ರಭುತ್ವದ ಬಹು ಮುಖ್ಯಕಾರ್ಯವಾಗಿದೆ. ಮತ ಚಲಾಯಿಸುವ ಮೂಲಕ ನಮ್ಮ ದೇಶದ ಅಭಿವೃದ್ಧಿಗಾಗಿ ದುಡಿಯುವ ನೇತಾರರನ್ನು ಆಯ್ಕೆ ಮಾಡುವ ಕಾರ್ಯ ಮಾಡೋಣ. ಹಣ ಹೆಂಡ ಹಾಗೂ ಬೇರೆ ಆಮಿಷಗಳಿಗೆ ಬಲಿಯಾಗದೆ ನ್ಯಾಯಯುತ ಮತದಾನ ಮಾಡಿ ಪ್ರಜಾಪ್ರಭುತ್ವ ಗೆಲ್ಲಿಸೋಣ ಎಂದು ಹೇಳಿದರು.

ಈ ವೇಳೆ ಕೃಷಿ ಅಧಿಕಾರಿ ಕುಸುಮಾದೇವಿ ಪಾಟೀಲ್, ಸಹಾಯಕ ತೋಟಗಾರಿಕೆ ಅಧಿಕಾರಿ ಶಿವಾನಂದ ಬಾನಿ, ನಿಂಗರಾಜು ಬಟಗುರ್ಕಿ, ದೇವರಾಜ್ ಆಚಲ್ಕರ್, ಅಕೌಂಟೆಂಟ್ ಅಮಿತ್ ಹಾಲೇವಾಡಿಮಠ, ಸಂಜೀವಿನಿ ಟೆಕ್ನಿಷಿಯನ್ ಹರೀಶ್ ಭದ್ರಾಪೂರ್, ಮಹೇಶ್ ನಂದೆಣ್ಣವರ್, ಸಿದ್ದು ಕನವಳ್ಳಿ, ರೈತರಾದ ಟಾಕಪ್ಪ ಸಾತ್ಪುತೆ, ಕೃಷಿ ಸಖಿಯರು ಇದ್ದರು.