ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ತಾಲೂಕಿನ ಬರಗೂರಿನಲ್ಲಿ ನಡೆಯುತ್ತಿರುವ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ಅಂಗವಾಗಿ ಗ್ರಾಮಸ್ಥರಿಗೆ ಅಲ್ಪಾವಧಿ ಹಾಗೂ ಬರ ನಿರೋಧಕ ರಾಗಿ ತಳಿಗಳ ಬಗ್ಗೆ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಅಲ್ಪಾವಧಿ ರಾಗಿ ತಳಿಗಳಾದ ಕೆ. ಎಂ. ಆರ್.೩೧೬ ಹಾಗೂ ಕೆ.ಎಂ.ಆರ್.-೬೩೦ರ ಬಗ್ಗೆ ಮಾಹಿತಿ ನೀಡಲಾಯಿತು. ಪ್ರಸ್ತುತ ಈ ತಳಿಗಳು, ೯೫ - ೧೦೫ ದಿನಗಳೊಗೆ ಫಸಲನ್ನು ನೀಡುವಂತ್ತದ್ದಾಗಿದ್ದು ಪ್ರತಿ ಎಕರೆಗೆ ಸುಮಾರು ೧೪ - ೨೦ ಕ್ವಿಂಟಲ್‌ನಷ್ಟು ರಾಗಿಯನ್ನು ನಿರೀಕ್ಷಿಸಬಹುದಾಗಿದೆ ಎಂದು ವಿಸ್ತೃತವಾಗಿ ತಿಳಿಸಿದರು. ತದನಂತರ ರಾಗಿಯಲ್ಲಿರುವ ಸುಧಾರಿತ ಬೇಸಾಯ ಪದ್ಧತಿಗಳ ಬಗ್ಗೆ ಮಾಹಿತಿಯನ್ನು ನೀಡಲಾಯಿತು. ರಾಗಿಯಲ್ಲಿ ಪೊಟ್ಯಾಶ್ ಗೊಬ್ಬರದ ಮಹತ್ವವನ್ನು ತಿಳಿಸಲಾಯಿತು ರಾಗಿಯಲ್ಲಿ ಕಂಡುಬರುವ ರೋಗ ಮತ್ತು ಕೀಟಗಳ ಬಗ್ಗೆ ಮಾಹಿತಿ ನೀಡಲಾಯಿತು. ಜೊತೆಗೆ ರೋಗ ಮತ್ತು ಕೀಟ ಬಾಧೆಯನ್ನು ತಡೆಯುವ ಕ್ರಮವನ್ನು ತಿಳಿಸಲಾಯಿತು.ಕಡೆಯಲ್ಲಿ ರೈತರಿಗೆ, ಹೊಸ ತಳಿಗಳನ್ನು ಕೃಷಿ ಕಾಲೇಜು ಮತ್ತು ರೈತ ಸಂಪರ್ಕ ಕೇಂದ್ರದಲ್ಲಿ ನೀಡುವುದಾಗಿ ರೈತರಿಗೆ ಮಾಹಿತಿಯನ್ನು ನೀಡಲಾಯಿತು.ಅಲ್ಪಾವಧಿ ಬೆಳೆಗಳ ಕುರಿತು ರೈತರಿಗೆ ಪ್ರಾತ್ಯಕ್ಷಿಕೆ
ಪ್ರತಿ ಎಕರೆಗೆ ಸುಮಾರು ೧೪ - ೨೦ ಕ್ವಿಂಟಲ್‌ನಷ್ಟು ರಾಗಿಯನ್ನು ನಿರೀಕ್ಷಿಸಬಹುದಾಗಿದೆ ಎಂದು ವಿಸ್ತೃತವಾಗಿ ತಿಳಿಸಿದರು. ತದನಂತರ ರಾಗಿಯಲ್ಲಿರುವ ಸುಧಾರಿತ ಬೇಸಾಯ ಪದ್ಧತಿಗಳ ಬಗ್ಗೆ ಮಾಹಿತಿಯನ್ನು ನೀಡಲಾಯಿತು. ರಾಗಿಯಲ್ಲಿ ಪೊಟ್ಯಾಶ್ ಗೊಬ್ಬರದ ಮಹತ್ವವನ್ನು ತಿಳಿಸಲಾಯಿತು ರಾಗಿಯಲ್ಲಿ ಕಂಡುಬರುವ ರೋಗ ಮತ್ತು ಕೀಟಗಳ ಬಗ್ಗೆ ಮಾಹಿತಿ ನೀಡಲಾಯಿತು. ಜೊತೆಗೆ ರೋಗ ಮತ್ತು ಕೀಟ ಬಾಧೆಯನ್ನು ತಡೆಯುವ ಕ್ರಮವನ್ನು ತಿಳಿಸಲಾಯಿತು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.