ಚನ್ನರಾಯಪಟ್ಟಣ: ತಾಲೂಕಿನ ಬರಗೂರಿನಲ್ಲಿ ನಡೆಯುತ್ತಿರುವ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ಅಂಗವಾಗಿ ಗ್ರಾಮಸ್ಥರಿಗೆ ಮಣ್ಣು ಪರೀಕ್ಷೆಯ ಬಗ್ಗೆ ಅರಿವು ಮತ್ತು ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಮಣ್ಣು ಪರೀಕ್ಷೆಯ ಮಹತ್ವ, ಮಣ್ಣಿನ ಪೋಷಕಾಂಶಗಳ ಮಹತ್ವ ಮತ್ತು ಸರಿಯಾದ ಪೋಷಕಾಂಶಗಳ ನಿರ್ವಹಣೆಯ ಕುರಿತು ರೈತರೊಂದಿಗೆ ಸಂವಾದ ನಡೆಸಲಾಯಿತು. ವಿದ್ಯಾರ್ಥಿಗಳು ಮಣ್ಣಿನ ಪರೀಕ್ಷೆ ಕಾರ್ಯಕ್ರಮಗಳು ಉಪಯೋಗಗಳು ಮಣ್ಣು ಪರೀಕ್ಷೆಯ ವಿಧಾನಗಳು ಎಲ್ಲಿಂದ ಮಣ್ಣನ್ನು ತೆಗೆದುಕೊಳ್ಳಬೇಕು, ಎಲ್ಲಿ ತೆಗೆದುಕೊಳ್ಳಬಾರದು ಎಂದು ತಿಳಿಸಲಾಯಿತು. ಈ ಕಾರ್ಯಕ್ರಮವನ್ನು ಇನ್ನು ಹೆಚ್ಚು ಮಟ್ಟದಲ್ಲಿ ಮಾಡಲು ಎಂಸಿಎಫ್ ಕಂಪನಿ ಕಡೆಯಿಂದ ಲೊಕೇಶ್ ಹಾಗೂ ಉತ್ತಮ್ ಅವರು ಬಂದು 100 ಜನರ ರೈತರ ಭೂಮಿಯಿಂದ ಮಾದರಿ ಸಂಗ್ರಹಣೆ ಹಾಗೂ ಉಚಿತ ಪರೀಕ್ಷೆಯನ್ನು ಮಾಡಿಸುವುದು ತಿಳಿಸಲಾಯಿತು. ಅನಂತರ ಆ ಕಂಪನಿಯ ಪ್ರತಿನಿಧಿಯಾಗಿ ಬಂದಿದ್ದ ಲೋಕೇಶ್ ಅವರು ಮಣ್ಣಿನ ಮಹತ್ವವನ್ನು ರೈತರಿಗೆ ಮನದಟ್ಟು ಮಾಡಿದರು ಅವರು ಇಂದು ತೋಟದಲ್ಲಿ ಮಣ್ಣಿನ ಪರೀಕ್ಷೆಗೆ ಮಾದರಿ ಸಂಗ್ರಹಣೆಯನ್ನು ಪ್ರತ್ಯಕ್ಷವಾಗಿ ತಿಳಿಸಲಾಯಿತು. ಆನಂತರ ಮಾದರಿಯನ್ನು ಹೇಗೆ ವಿಭಜಿಸಬೇಕು ಹೇಗೆ ಪ್ಯಾಕ್ ಮಾಡಬೇಕೆಂದು ತಿಳಿಸಿದರು.
ಚನ್ನರಾಯಪಟ್ಟಣದಲ್ಲಿ ಮಣ್ಣು ಪರೀಕ್ಷೆ ಕುರಿತು ಪ್ರಾತ್ಯಕ್ಷಿಕೆ
ವಿದ್ಯಾರ್ಥಿಗಳು ಮಣ್ಣಿನ ಪರೀಕ್ಷೆ ಕಾರ್ಯಕ್ರಮಗಳು ಉಪಯೋಗಗಳು ಮಣ್ಣು ಪರೀಕ್ಷೆಯ ವಿಧಾನಗಳು ಎಲ್ಲಿಂದ ಮಣ್ಣನ್ನು ತೆಗೆದುಕೊಳ್ಳಬೇಕು, ಎಲ್ಲಿ ತೆಗೆದುಕೊಳ್ಳಬಾರದು ಎಂದು ತಿಳಿಸಲಾಯಿತು. ಈ ಕಾರ್ಯಕ್ರಮವನ್ನು ಇನ್ನು ಹೆಚ್ಚು ಮಟ್ಟದಲ್ಲಿ ಮಾಡಲು ಎಂಸಿಎಫ್ ಕಂಪನಿ ಕಡೆಯಿಂದ ಲೊಕೇಶ್ ಹಾಗೂ ಉತ್ತಮ್ ಅವರು ಬಂದು 100 ಜನರ ರೈತರ ಭೂಮಿಯಿಂದ ಮಾದರಿ ಸಂಗ್ರಹಣೆ ಹಾಗೂ ಉಚಿತ ಪರೀಕ್ಷೆಯನ್ನು ಮಾಡಿಸುವುದು ತಿಳಿಸಲಾಯಿತು. ಅನಂತರ ಆ ಕಂಪನಿಯ ಪ್ರತಿನಿಧಿಯಾಗಿ ಬಂದಿದ್ದ ಲೋಕೇಶ್ ಅವರು ಮಣ್ಣಿನ ಮಹತ್ವವನ್ನು ರೈತರಿಗೆ ಮನದಟ್ಟು ಮಾಡಿದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.